ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕಬಿನಿ, ಆಲಮಟ್ಟಿ ಸೇರಿದಂತೆ ಕೆಲ ಡ್ಯಾಂಗಳ ಸ್ಥಿತಿಗತಿ

ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್‌, ಕಬಿನಿ, ಆಲಮಟ್ಟಿ ಹಾಗೂ ಬಸವಸಾಗರಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನಿರಂತರ ನೀರು ಬಿಡುಗಡೆ ಮಾಡಿದ ಕಾರಣ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಎದುರಾಗಿದೆ.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕಬಿನಿ, ಆಲಮಟ್ಟಿ ಸೇರಿದಂತೆ ಕೆಲ ಡ್ಯಾಂಗಳ ಸ್ಥಿತಿಗತಿ
ಕೆಆರ್​ಎಸ್​ ಡ್ಯಾಂ
Image Credit source: Getty images

Updated on: Nov 05, 2026 | 12:13 PM

ಬೆಂಗಳೂರು, ನವೆಂಬರ್​​ 05: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆ ಆಗುತ್ತಿದೆ. ಹೀಗಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇಂದಿನ ಪ್ರಮುಖ ಜಲಾಶಯಗಳ ನೀರು ಸಂಗ್ರಹಣೆಯ ವಿವರ ಇದೀಗ ಹೊರಬಿದ್ದಿದೆ. ಆಲಮಟ್ಟಿ, ಬಸವಸಾಗರ, ಕಬಿನಿ ಸೇರಿದಂತೆ ಕೆಲ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.

ಬಸವಸಾಗರ ಜಲಾಶಯದ ನೀರಿನ ಮಟ್ಟ

  • ಗರಿಷ್ಟ ಮಟ್ಟ: 492.25 ಮೀಟರ್​
  • ಇಂದಿನ ಮಟ್ಟ : 489.37 ಮೀಟರ್​
  • ಒಳ ಹರಿವು: 19,865 ಕ್ಯೂಸೆಕ್​
  • ಹೊರ ಹರಿವು : 14,271 ಕ್ಯೂಸೆಕ್​​

ಕಬಿನಿ ಜಲಾಶಯ

  • ಇಂದಿನ ನೀರಿನ ಮಟ್ಟ 72.52 ಅಡಿ
  • ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 82.92 ಅಡಿ ಇತ್ತು.
  • ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ.
  • ಪ್ರಸ್ತುತ ನೀರಿನ ಸಂಗ್ರಹ 12.95 ಟಿಎಂಸಿ
  • ಪ್ರಸ್ತುತ ಜೀವಂತ ನೀರಿನ ಸಂಗ್ರಹ 3.14 ಟಿಎಂಸಿ.
  • ಜಲಾಶಯಕ್ಕೆ ಒಳಹರಿವು 773 ಕ್ಯೂಸೆಕ್​​​
  • ಕಬಿನಿ ನದಿಗೆ 2,250 ಕ್ಯುಸೆಕ್ ನೀರು

ಇದನ್ನೂ ಓದಿ: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಮತ್ತೆ 100 ಅಡಿಗೆ ಕುಸಿದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ! ಬೆಂಗಳೂರಿಗರಿಗೆ ಎದುರಾಗಲಿದ್ಯಾ ಸಮಸ್ಯೆ?

Loading...

ಇನ್ನು ಎಡದಂಡೆ ನಾಲೆಗೆ ನೀರು ಬಿಡುಗಡೆ ಸ್ಥಗಿತಗೊಳಿಸಲಾಗಿದ್ದು, ಬಲದಂಡೆ ನಾಲೆಗೆ 750 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಒಟ್ಟು ನಾಲೆಗಳಿಗೆ 750 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಜಲಾಶಯದಿಂದ ಒಟ್ಟು 3,000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದ್ದು, ಜಲಾಶಯದ ವ್ಯಾಪ್ತಿಯಲ್ಲಿ 8 ಮಿ.ಮೀ ಮಳೆ ದಾಖಲಾಗಿದೆ.

ವಿಜಯಪುರದ ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಾಣವಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಗರಿಷ್ಟ ಮಟ್ಟ: 519.60 ಮೀಟರ್,​ ಇಂದಿನ ನೀರಿನ ಮಟ್ಟ: 515.23 ಮೀಟರ್​​​ ಇದ್ದು,​ ಒಳ ಹರಿವಿಲ್ಲ, 24,596 ಕ್ಯೂಸೆಕ್ ಹೊರ ಹರಿವಿದೆ.

ತುಂಗಾಭದ್ರ ಜಲಾಶಯ 

  • ಗರಿಷ್ಟ ನೀರಿನ ಮಟ್ಟ: 1633 ಅಡಿ​
  • ಇಂದಿನ ನೀರಿನ ಮಟ್ಟ: 161058 ಅಡಿ​
  • ಒಳ ಹರಿವು: 00 ಕ್ಯೂಸೆಕ್​
  • ಹೊರ ಹರಿವು: 9041 ಕ್ಯೂಸೆಕ್​​

ಮಂಡ್ಯ ಕೆಆರ್​ಎಸ್ ಜಲಾಶಯ

  • ಗರಿಷ್ಟ ನೀರಿನ ಮಟ್ಟ: 124.80 ಅಡಿ​
  • ಇಂದಿನ ನೀರಿನ ಮಟ್ಟ: 100.12 ಅಡಿ​
  • ಒಳ ಹರಿವು: 548 ಕ್ಯೂಸೆಕ್​
  • ಹೊರ ಹರಿವು: 7871 ಕ್ಯೂಸೆಕ್​​

ಹಾಸನ ಹೇಮಾವತಿ ಜಲಾಶಯ

  • ಗರಿಷ್ಟ ನೀರಿನ ಮಟ್ಟ: 2922 ಅಡಿ​
  • ಇಂದಿನ ನೀರಿನ ಮಟ್ಟ: 2897.07 ಅಡಿ​
  • ಒಳ ಹರಿವು: 846 ಕ್ಯೂಸೆಕ್​
  • ಹೊರ ಹರಿವು: 340 ಕ್ಯೂಸೆಕ್​​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us