Karnataka Dams Water Level: ಶಿವಮೊಗ್ಗದಲ್ಲಿ ಭಾರೀ ಮಳೆಯಿಂದ ಡ್ಯಾಂಗಳು ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Karnataka Reservoir Water Level | ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅತ್ಯಧಿಕ 178.60 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿರುವುದರಿಂದ ಲಿಂಗನಮಕ್ಕಿ, ವರಾಹಿ, ತುಂಗಭದ್ರಾ, ಚಕ್ರಾ, ಸಾವೆಹಕ್ಲು ಡ್ಯಾಂಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ.
Karnataka Rain: ಮಲೆನಾಡಿನಲ್ಲಿ ಕಳೆದ 10 ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ನಿನ್ನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 43.20 ಮಿ.ಮೀ, ಸಾಗರದಲ್ಲಿ 30 ಮಿ.ಮೀ, ಸೊರಬದಲ್ಲಿ 21.40 ಮಿ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅತ್ಯಧಿಕ 178.60 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿರುವುದರಿಂದ ಲಿಂಗನಮಕ್ಕಿ, ವರಾಹಿ, ತುಂಗಭದ್ರಾ, ಚಕ್ರಾ, ಸಾವೆಹಕ್ಲು ಡ್ಯಾಂಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಶರಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕುತ್ತಿದೆ. ಲಿಂಗನಮಕ್ಕಿ ತುಂಬಲು ಮೂರೂವರೆ ಅಡಿಗಳಷ್ಟೇ ಬಾಕಿ ಇದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್ ಇಂದಿನ ನೀರಿನ ಮಟ್ಟ- 38.46 ಟಿಎಂಸಿ ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ ಇಂದಿನ ಒಳಹರಿವು- 8,902 ಕ್ಯೂಸೆಕ್ಸ್ ಇಂದಿನ ಹೊರಹರಿವು- 10,894 ಕ್ಯೂಸೆಕ್ಸ್
ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 19.09 ಟಿಎಂಸಿ ಇಂದಿನ ಒಳಹರಿವು- 4439 ಕ್ಯೂಸೆಕ್ಸ್ ಇಂದಿನ ಹೊರಹರಿವು- 645 ಕ್ಯೂಸೆಕ್ಸ್
ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 8.27 ಟಿಎಂಸಿ ಇಂದಿನ ಒಳಹರಿವು- 3928 ಕ್ಯೂಸೆಕ್ಸ್ ಇಂದಿನ ಹೊರಹರಿವು- 3968 ಕ್ಯೂಸೆಕ್ಸ್
ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 31.45 ಟಿಎಂಸಿ ಇಂದಿನ ಒಳಹರಿವು- 9601 ಕ್ಯೂಸೆಕ್ಸ್ ಇಂದಿನ ಹೊರಹರಿವು- 5222 ಕ್ಯೂಸೆಕ್ಸ್
ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 18.93 ಟಿಎಂಸಿ ಇಂದಿನ ಒಳಹರಿವು- 8483 ಕ್ಯೂಸೆಕ್ಸ್ ಇಂದಿನ ಹೊರಹರಿವು- 1950 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 139.25 ಟಿಎಂಸಿ ಇಂದಿನ ಒಳಹರಿವು- 33,258 ಕ್ಯೂಸೆಕ್ಸ್ ಇಂದಿನ ಹೊರಹರಿವು- 5710 ಕ್ಯೂಸೆಕ್ಸ್
ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 113.96 ಟಿಎಂಸಿ ಇಂದಿನ ಒಳಹರಿವು- 14,495 ಕ್ಯೂಸೆಕ್ಸ್ ಇಂದಿನ ಹೊರಹರಿವು- 1736 ಕ್ಯೂಸೆಕ್ಸ್
ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ-497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 100.39 ಟಿಎಂಸಿ ಇಂದಿನ ಒಳಹರಿವು- 17,656 ಕ್ಯೂಸೆಕ್ಸ್ ಇಂದಿನ ಹೊರಹರಿವು- 18,992 ಕ್ಯೂಸೆಕ್ಸ್
ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 71.06 ಟಿಎಂಸಿ ಇಂದಿನ ಒಳಹರಿವು- 7781 ಕ್ಯೂಸೆಕ್ಸ್ ಇಂದಿನ ಹೊರಹರಿವು- 6867 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 37.73 ಟಿಎಂಸಿ ಇಂದಿನ ಒಳಹರಿವು- 5026 ಕ್ಯೂಸೆಕ್ಸ್ ಇಂದಿನ ಹೊರಹರಿವು- 2594 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 51.00 ಟಿಎಂಸಿ ಇಂದಿನ ಒಳಹರಿವು- 5026 ಕ್ಯೂಸೆಕ್ಸ್ ಇಂದಿನ ಹೊರಹರಿವು- 2594 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 122.48 ಟಿಎಂಸಿ ಇಂದಿನ ಒಳಹರಿವು- 53,516 ಕ್ಯೂಸೆಕ್ಸ್ ಇಂದಿನ ಹೊರಹರಿವು- 55,553 ಕ್ಯೂಸೆಕ್ಸ್
ಇದನ್ನೂ ಓದಿ: Karnataka Dam Water Level: ಸೆ.15ರವರೆಗೆ ರಾಜ್ಯಾದ್ಯಂತ ಭಾರೀ ಮಳೆ; ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
(Karnataka Dams Water Level Shivamogga Rain Jog falls Linganamakki Dam Level Increases Karnataka Reservoir Water Level)