ಮತ್ತೆ ಕರ್ನಾಟಕದಲ್ಲಿ 11 ಡಿವೈಎಸ್‌ಪಿ, 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಅಷ್ಟೇ ರಾಜ್ಯ ಸರ್ಕಾರ 150ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಮತ್ತೆ 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿದೆ.
ಬೆಂಗಳೂರು, (ಫೆಬ್ರವರಿ 13) : ಲೋಕಸಭಾ ಚುನಾವಣೆ (Loksabha Elections 2024) ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದ್ದು, 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ (police inspectors) ವರ್ಗಾವಣೆ (Police Transfer) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ನಿಮಿತ್ತ ಮಾಡಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಭಾಗಶಃ ಮಾರ್ಪಡಿಸಿ ಆದೇಶ ಹೊರಡಿಸಿದೆ.
ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಸಮಯ ತೆಗೆದುಕೊಳ್ಳದೇ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲು ಪೊಲೀಸ್ ಇಲಾಖೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸರ್ಜರಿ, 33 ಡಿವೈಎಸ್ಪಿ ಬೆನ್ನಲ್ಲೇ 218 ಪಿಎಸ್‌ಐಗಳ ವರ್ಗಾವಣೆ
ಡಿವೈಎಸ್‌ಪಿ ಶಿವಕುಮಾರ್ ಟಿ.ಎಂ. ಅವರನ್ನು ಕಲಬುರಗಿ ಸಂಚಾರ ಉಪವಿಭಾಗ, ಮೊಹಮ್ಮದ್ ಶರೀಫ್ ರಾವುತರ್(ಆಳಂದ ಉಪವಿಭಾಗ, ಕಲಬುರಗಿ), ಕೋದಂಡ ರಾಮ. ಟಿ (ಸಿಸಿಬಿ, ಮಂಗಳೂರು) ಸೇರಿ 11 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ವಸಂತ ಕೆ.ಎಂ. ಅವರನ್ನು ಸೋಮವಾರಪೇಟೆ ಪೊಲೀಸ್ ಠಾಣೆ, ರಾಘವೇಂದ್ರ ಎಂ. ಬೈಂದೂರು (ಕಾವೂರು ಪೊಲೀಸ್ ಠಾಣೆ, ಮಂಗಳೂರು), ಸುರೇಶ್ ಪಿ. ಶಿಂಗಿ (ಉಡುಪಿ ನಗರ) ಸೇರಿ 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ.
ಈ ಹಿಂದೆ 150ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ