ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಘೋಷಣೆಯಾಗುತ್ತಿದ್ದಂತೆ ಲಸಿಕೆ ಖರೀದಿಯಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಘೋಷಣೆ ಹಿನ್ನೆಲೆಯಲ್ಲಿ ಕೊವಿಡ್ ಲಸಿಕೆ ಖರೀದಿಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೆ 2,000 ಕೋಟಿ ಉಳಿತಾಯವಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಘೋಷಣೆಯಾಗುತ್ತಿದ್ದಂತೆ ಲಸಿಕೆ ಖರೀದಿಯಿಂದ ಹಿಂದೆ ಸರಿದ ರಾಜ್ಯ ಸರ್ಕಾರ
ಕೊರೊನಾ ಲಸಿಕೆ
Follow us
TV9 Web
| Updated By: ಆಯೇಷಾ ಬಾನು

Updated on: Jun 13, 2021 | 8:18 AM

ಬೆಂಗಳೂರು: ಕೊರೊನಾ ಸೋಂಕಿನ ಪ್ರಭಾವ ಕಡಿಮೆ ಆಗುತ್ತಿದೆ. 2ನೇ ಅಲೆಯ ವೇಗ ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಸಂಖ್ಯೆ, ಸಾವು ಇಳಿಕೆಯಾಗುತ್ತಿದೆ. ಹೀಗಿದ್ರೂ ಜನರಿಗೆ ಭಯ ಹೋಗಿಲ್ಲ. ಹೀಗಾಗಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದ್ರೆ ಕೆಲವೆಡೆ ಇನ್ನೂ ಕೂಡ ಲಸಿಕೆ ಅಭಾವ ಕಡಿಮೆಯಾಗಿಲ್ಲ. ಈಗ ಇದರ ನಡುವೆ ಲಸಿಕೆ ಖರೀದಿಯಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.

ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಘೋಷಣೆ ಹಿನ್ನೆಲೆಯಲ್ಲಿ ಕೊವಿಡ್ ಲಸಿಕೆ ಖರೀದಿಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೆ 2,000 ಕೋಟಿ ಉಳಿತಾಯವಾಗಿದೆ ಎಂದು ಹೇಳಲಾಗುತ್ತಿದೆ. ಜೂ.21ರಿಂದ ಕೇಂದ್ರದಿಂದ ರಾಜ್ಯಗಳಿಗೆ ಲಸಿಕೆ ಪೂರೈಕೆಯಾಗಲಿದೆ. ಅಲ್ಲಿಯವರೆಗೆ ಮಾತ್ರ ರಾಜ್ಯವೇ ಖರೀದಿಸಿ ಲಸಿಕೆ ವಿತರಿಸಲಿದೆ. ರಾಜ್ಯ ಸರ್ಕಾರ ಈವರೆಗೆ 25 ಲಕ್ಷ ಡೋಸ್ ಲಸಿಕೆ ಖರೀದಿಸಿ ಹಂಚಿಕೆ ಮಾಡಿದೆ.

NHM ಅಡಿ 3 ಕೋಟಿ ಡೋಸ್ ಲಸಿಕೆ ಖರೀದಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿತ್ತು. ಸದ್ಯ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುವುದರಿಂದ ಲಸಿಕೆ ಖರೀದಿಸುವುದನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ರಾಜ್ಯದಲ್ಲಿ ಇದುವರೆಗೂ ಒಂದು ಕೋಟಿ 70 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಸುಮಾರು 40 ಲಕ್ಷ ಮಂದಿಗೆ 2 ಡೋಸ್ ನೀಡಲಾಗಿದೆ. ಸದ್ಯ ಲಸಿಕೆ ಪ್ರಮಾಣ ಕಡಿಮೆಯಿದ್ದು ಕೇಂದ್ರ ಸರ್ಕಾರದಿಂದ ಬಂದ ಬಳಿಕ ವ್ಯಾಕ್ಸಿನ್ ಹೆಚ್ಚಳ ಮಾಡಲಾಗುತ್ತಂತೆ. 18 ವರ್ಷ ಮೇಲ್ಪಟ್ಟವರಿಗೂ ಜೂನ್ 21ರ ನಂತರ ವ್ಯಾಕ್ಸಿನ್ ಹೆಚ್ಚಳ ಮಾಡಲಾಗುತ್ತೆ. ಪ್ರತಿದಿನ 3 ಲಕ್ಷ ಮಂದಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಗುರಿ ಹೊಂದಿದೆ. ಮೂರನೇ ಲಸಿಕೆ ವೇಳೆಗೆ ಶೇಖಡಾ 70 ಪರ್ಸೆಂಟ್ ಮಂದಿಗೆ ಲಸಿಕೆ ನೀಡುವ ಗುರಿ ಇದೆಯಂತೆ.

ಇದನ್ನೂ ಓದಿ: ತೆಂಗಿನ ಮರ ಬಿದ್ದು 6 ವರ್ಷದ ಬಾಲಕ ಸಾವು, ಬಾಲಕಿ ಆಸ್ಪತ್ರೆಗೆ ದಾಖಲು