ಹಾಸನದಲ್ಲಿ ಹೃದಯಾಘಾತ ಹೆಚ್ಚಳ: ವಿಶೇಷ ಸಮಿತಿ ರಚಿಸಿದ ಸರ್ಕಾರ

ಹಾಸನದಲ್ಲಿ ಹೃದಯಾತದಿಂದ ಸರಣಿ ಸಾವು ಮುಂದುವರೆದಿದೆ. ಇಂದು (ಜೂನ್ 30) ಬೆಳಿಗ್ಗೆ ಮೂವರು ಹಾರ್ಟ್ ಅಟ್ಯಾಕ್​ ನಿಂದ ಉಸಿರು ಚೆಲ್ಲಿದ್ದಾರೆ. ಈ ಮೂಲಕ 40 ದಿನದ ಅಂತರದಲ್ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದು ಭಾರೀ ಆತಂಕ ಮೂಡಿಸಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಸಮಿತಿಯೊಂದನ್ನು ರಚಿಸಿದೆ. ಇನ್ನು ಸಾವಿನ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಸ್ಫೋಟಕ ಅಂಶ ಬಿಚ್ಚಿಟ್ಟಿದ್ದಾರೆ.

ಹಾಸನದಲ್ಲಿ ಹೃದಯಾಘಾತ ಹೆಚ್ಚಳ: ವಿಶೇಷ ಸಮಿತಿ ರಚಿಸಿದ ಸರ್ಕಾರ
Vidhana Soudha
Updated By: ರಮೇಶ್ ಬಿ. ಜವಳಗೇರಾ

Updated on: Jun 30, 2025 | 4:42 PM

ಬೆಂಗಳೂರು, (ಜೂನ್ 30): ಹಾಸನ (Hassan) ಜಿಲ್ಲೆಯಲ್ಲಿ ಹೃದಯಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ದಿನೇ ದಿನೇ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಇಂದು (ಜೂನ್ 30) ಒಂದೇ ಹಾಸನ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್​ ನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ 40 ದಿನದ ಅಂತರದಲ್ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹಾಸನದಲ್ಲಿ ಸರಣಿ ಸಾವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಆರೋಗ್ಯ ಇಲಾಖೆ (Karnataka Health Department), ಜಯದೇವ ನಿರ್ದೇಶಕ ಡಾ.ರವಿಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಹಾಸನ ಜಿಲ್ಲೆಯ ಜನರ ಸಾವಿನ ಬಗ್ಗೆ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಸಮಿತಿಗೆ ಸೂಚಿಸಿದೆ.

ಸಾವಿನ ಬಗ್ಗೆ ಹರ್ಷಾಗುಪ್ತ ಹೇಳಿದ್ದೇನು?

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹಾಸನ ಜಿಲ್ಲೆ 18ಕ್ಕೂ ಹೆಚ್ಚು ಡೆತ್ ರಿಪೋರ್ಟ್ ಆಗಿದೆ. ಆರೋಗ್ಯ ಇಲಾಖೆಯಿಂದ ಸಿಸ್ಟಮ್ ಇಲ್ಲ. ನಿಖರ ಮಾಹಿತಿ ಕಲೆ ಹಾಕಲು ಸಾಧ್ಯವಿಲ್ಲ. ಕೆಲ ಖಾಯಿಲೆಗಳ ಬಗ್ಗೆ ಮಾತ್ರ ನಮ್ಮ ಬಳಿ ರಿಪೋರ್ಟ್ ಇದೆ. ಮುಂದಿನ ದಿನಗಳಲ್ಲಿ ಪ್ರತಿ ಸಾವಿನ ಬಗ್ಗೆ ರಿಪೋರ್ಟ್ ಆಗಬೇಕಿದೆ. ಸಾವು ಹೆಚ್ಚಳ ಏಕಾಏಕಿ ಅಂತ ಹೇಳಲು ಸಾದ್ಯವಿಲ್ಲ, ನಮ್ಮ ಡೇಟಾ ಪ್ರಕಾರ ಇಲ್ಲ. 15 ದಿನಗಳ ಹಿಂದೆ ಪ್ರಿಮಿಲರಿ ಮಾಹಿತಿ ಪ್ರಕಾರ ಡಿಸಿ ಅಧ್ಯಕ್ಷತೆಯಲ್ಲಿ ವರದಿ ಮಾಡಿದೆ ಎಂದರು.

ಇದನ್ನೂ ಓದಿ: ಹಾಸನ: ಹೃದಯಾಘಾತಕ್ಕೆ ಒಂದೇ ದಿನ ನಾಲ್ಕು ಬಲಿ, 40 ದಿನಗಳಲ್ಲಿ 22 ಸಾವು

18 ಸಾವಿನ ಪೈಕಿ 9 ಜನರು ಸಾವನ್ನಪ್ಪಿದ್ದವರು 55 ವರ್ಷ ಮೇಲ್ಪಟ್ಟವರು, ಅವರಿಗೆ ಬೇರೆ ಬೇರೆ ಥರದ ಖಾಯಿಲೆಗಳು ಇತ್ತು. 5 ಜನ 20 ಹರೆಯದವರು ಎಂದು ತಿಳಿದಿದೆ. 1 ಸಾವು ಹಾಸನದಲ್ಲಿ ಆಗಿದೆ. ಇನ್ನುಳಿದ 4 ಸಾವು ಬೆಂಗಳೂರಿನಲ್ಲಿ ಆಗಿದೆ. ಆದರೆ 4 ಜನ ಹಾಸನ ಮೂಲದವರಾಗಿದ್ದಾರೆ. ಟೈಪ್ 1 ಡಯಾಬಿಟಿಸ್ ಇತ್ತು, ಕ್ರಾನಿಲ್ ಡಿಸೀಸ್ ಇತ್ತು. ಬಹುಪಾಲು ಸಾವು ಮನೆಯಲ್ಲಿ ಸಂಭವಿಸಿದೆ. ಹೀಗಾಗಿ ಹಳೆ ಮೆಡಿಕಲ್ ರೆಕಾರ್ಡ್ ಪರೀಕ್ಷಿಸಬೇಕಿದೆ. 9 ಸಾವಿನ ಬಗ್ಗೆ ತಿಳಿಯಲು ಕಮಿಟಿ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ
ಹಾಸನ ಹೃದಯಾಘಾತಗಳಿಗೆ ಕೋವಿಡ್ ಕಾರಣವಾ?
ಹೃದ್ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಶೇಕಡ 10 ರಷ್ಟು ಹೆಚ್ಚಾಗಿದೆ: ವೈದ್ಯ
ಡಾ.ಮಂಜುನಾಥ್​ ದಿಟ್ಟ ಹೆಜ್ಜೆ: ರಾಜ್ಯದ ಹೃದಯಾಘಾತ ಕೇಸ್​​ ಮೋದಿ ಅಂಗಳಕ್ಕೆ
ಎದೆಯುರಿ ಇದ್ದರೆ ಅಸಿಡಿಟಿ ಎನ್ನಬೇಡಿ: ಹೃದಯದ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್

ಫೆಬ್ರವರಿ ತಿಂಗಳಲ್ಲಿ ಈ ಸಮಿತಿ ರಚನೆ ಆಗಿತ್ತು.ಕೋವಿಡ್ ನಿಂದ ಹೀಗಾಗಿದೆಯಾ ಎಂಬ ಮಾಹಿತಿ ಬಗ್ಗೆ ಅಧ್ಯಯನ ನಡೆಸಿದೆ. ಅದೇ ಕಮಿಟಿಗೆ ಹಾಸನದ ಮೆಡಿಕಲ್ ರಿಪೋರ್ಟ್ ತರಿಸಿ ಅಧ್ಯಯನ ನಡೆಸಲು ಸೂಚಿಸಿದ್ದೇವೆ. 10 ದಿನಗಳ ಒಳಗಾಗಿ ವರದಿ ಕೊಡಲು ತಿಳಿಸಿದ್ದೇವೆ ಎಂದು ಹೇಳಿದರು.

20 ವರ್ಷದ ಯುವತಿಗೆ ಟೈಪ್ 1 ಡಯಾಬಿಟಿಸ್, ಕ್ರಾನಿಕ್ ಕಿಡ್ನಿ ಡಿಸೀಸ್ ಇರೋದು ತಿಳಿದಿದೆ. ಜನಟಿಕ್ ಇದೆಯಾ, ಅನ್ ಕಂಟ್ರೋಲ್ಡ್ ಡಿಸೀಸ್ ಇತ್ತಾ ಎಂದು ಅಧ್ಯಯನ ಮಾಡಬೇಕಿದೆ. ಹಾಸನ ಸಾವಿನಲ್ಲಿ ಕೆಲವರಿಗೆ ಒಪನ್ ಹಾರ್ಟ್ ಸರ್ಜರಿ ಆಗಿತ್ತು. 18 ಪೈಕಿ 2 ಮಾತ್ರ ಆಸ್ಪತ್ರೆಯಲ್ಲಿ ಸಾವಾಗಿದೆ, ಇನ್ನುಳಿದ ಸಾವು ಮನೆಯಲ್ಲಿ ಆಗಿದೆ ಎಂದು ತಿಳಿಸಿದರು.

ಆರೋಗ್ಯ ಸಚಿವರು ಹೇಳಿದ್ದಿಷ್ಟು

ಇನ್ನು ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕ್ರಿಯಿಸಿದ್ದು, ಯಾಕಿಷ್ಟು ಹೃದಯಾಘಾತವಾಗುತ್ತಿದೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಪರಿಶೀಲಿಸಿ ವರದಿ ನೀಡಲು ಆದೇಶಿಸಿದ್ದೇನೆ. ಅಧಿಕಾರಿಗಳು ನೀಡುವ ವರದಿ ನೀಡಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

ಸತ್ಯಾಸತ್ಯತೆ ಏನೆಂದು ಅಂಕಿ ಅಂಶಗಳ ಆಧಾರದ ವರದಿ ಮೂಲಕ ತಿಳಿಯುತ್ತೆ. ಈಗಿನ ಜೀವನ ಶೈಲಿ, ಆಹಾರ ಪದ್ಧತಿ, ಮೊಬೈಲ್, ಡಿಜಿಟಲ್ ವ್ಯಸನ, ವ್ಯಸನದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.ಹಲವರಿಗೆ ಚಿಕ್ಕ ವಯಸ್ಸಿನಲ್ಲೇ ಬಿಪಿ, ಶುಗರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈಗ ಎಲ್ಲೆಡೆ ವಾಯು, ಆಹಾರ, ನೀರು ಮಾಲಿನ್ಯದಿಂದ ಕೂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿ ಉಸಿರಾಡಿದರೆ ದುಷ್ಪರಿಣಾಮವಾಗುತ್ತೆ. ಜೀವನ ಶೈಲಿ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.

Published On - 4:40 pm, Mon, 30 June 25