
ಬೆಂಗಳೂರು, (ಆಗಸ್ಟ್ 11): ಬೆಂಗಳೂರಿನ (Bengaluru) ಕೆಲ ಸ್ಟಾರ್ ಹೋಟೆಲ್ಗಳಲ್ಲಿ (Hotels) ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮಾಂಸ, ತರಕಾರಿಗಳು ಪತ್ತೆಯಾಗಿದ್ದು, ಇದನ್ನು ಆಹಾರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿ(guidelines) ಬಿಡುಗಡೆ ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಎಕ್ಸ್‌ಪೈರಿ ಫಂಗಸ್ ಫುಡ್‌ಗೆ ಕಡಿವಾಣ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಹೀಗೆ ಹಲವು ಅಂಶಗಳ ಒಳಗೊಂಡ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.
ಇತ್ತೀಚಿನ ದಾಳಿಗಳಲ್ಲಿ ಸ್ಟಾರ್ ಹೋಟೆಲ್‌ಗಳ ಕಿಚನ್‌ಗಳಲ್ಲೇ ಅವಧಿ ಮೀರಿದ ಆಹಾರ, ಫಂಗಸ್ ಹಿಡಿದ ತರಕಾರಿ, ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪತ್ತೆಯಾಗಿವೆ. ಈ ಹಿನ್ನಲೆ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಬೆಂಗಳೂರಿನಲ್ಲಿ ನಡೆದ ವಿಶೇಷ ತಪಾಸಣೆಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳನ್ನು ಪರಿಶೀಲಿಸಲಾಗಿದೆ. ಅಧಿಕಾರಿಗಳು 1,000 ಕೆಜಿಗೂ ಅಧಿಕ ಆಹಾರ ಮತ್ತು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಜನರಿಗೆ ಫಂಗಸ್ ಇರುವ ಮತ್ತು ಎಕ್ಸ್‌ಪೈರಿಯಾದ ಆಹಾರ ನೀಡುತ್ತಿದ್ದುದು ಬಯಲಾಗಿದೆ. ಇದಕ್ಕಾಗಿ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಕಡಿವಾಣ ಹಾಕಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.