ವಿವಿಧ ಹಗರಣಗಳ ಸಿಬಿಐ ತನಿಖೆ ಕೋರಿ ಪಿಐಎಲ್ ಸಲ್ಲಿಸಿದ ಅರ್ಜಿದಾರರಿಗೆ ಕೋರ್ಟ್ ಹೇಳಿದ್ದೇನು?
ಕರ್ನಾಟಕ ಹೈಕೋರ್ಟ್ ಮುಡಾ, ವಾಲ್ಮೀಕಿ ನಿಗಮ ಹಾಗೂ 40% ಕಮಿಷನ್ ಹಗರಣಗಳ ಸಿಬಿಐ ತನಿಖೆ ಕೋರಿ ಸಲ್ಲಿಸಲಾದ ಪಿಐಎಲ್ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ಸಿಬಿಐ ತನಿಖೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.
ಬೆಂಗಳೂರು, ನವೆಂಬರ್ 04: ಮುಡಾ (Muda), ವಾಲ್ಮೀಕಿ ನಿಗಮ, 40% ಕಮಿಷನ್ ಸೇರಿ ವಿವಿಧ ಹಗರಣಗಳ ಸಿಬಿಐ ತನಿಖೆ ಕೋರಿ ಸಿ.ಸಂತೋಷ್ ಎಂಬುವರು ಸಲ್ಲಿಸಿದ ಪಿಐಎಲ್ ವಿಚಾರಣೆಯನ್ನು ನವೆಂಬರ್ 29ಕ್ಕೆ ಹೈಕೋರ್ಟ್ ಮುಂದೂಡಿದೆ. ಜೊತೆಗೆ ಸ್ಪಷ್ಟ ವಾದಾಂಶ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿಲಾಗಿದೆ.
ಹಗರಣಗಳ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪಿಸಿ, ಪತ್ರಿಕಾ ವರದಿಗಳನ್ನು ಆಧರಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಈಗಿನ, ಹಿಂದಿನ ಸರ್ಕಾರಗಳ ಹಗರಣಗಳ ಸಿಬಿಐ ತನಿಖೆಗೆ ಕೋರಿದ್ದರು.
ಸಿಎಂ ವಿರುದ್ಧದ ಮುಡಾ ಕೇಸ್ ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿ ನಾಳೆ ವಿಚಾರಣೆ
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ಸಿಬಿಐ ತನಿಖೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಾಳೆಗೆ ನಿಗದಿಯಾಗಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿರುವ ಏಕಸದಸ್ಯ ಪೀಠದಲ್ಲಿ ನಾಳೆ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಲೋಕಾಯುಕ್ತ ಅಧಿಕಾರಿಗಳ ಮುಂದೆ ಬುಧವಾರ ವಿಚಾರಣೆಗೆ ಹಾಜರಾಗುತ್ತೇನೆ: ಸಿದ್ದರಾಮಯ್ಯ
ಲೋಕಾಯುಕ್ತ ಪೊಲೀಸರಿಂದ ಸೂಕ್ತ ತನಿಖೆ ಸಾಧ್ಯವಿಲ್ಲವೆಂದು, ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ನಾಳೆ ವಿಚಾರಣೆ ನಿಗದಿಯಾಗಿದೆ. ಇನ್ನು ಈಗಾಗಲೇ ಲೋಕಾಯುಕ್ತ ಮತ್ತು ಇಡಿ ಪ್ರಕಣರದ ವಿಚಾರಣೆ ಮಾಡುತ್ತಿವೆ.
ಮುಡಾ ಪ್ರಕರಣ ಸಿಎಂ ಸಿದ್ದರಾಮಯ್ಯಗೆ ನೋಟಿಸ್
ಇನ್ನು ಲೋಕಾಯುಕ್ತದಲ್ಲಿ ದಾಖಲಾಗಿರುವ ಸಿಎಂ ಸಿದ್ದರಾಮಯ್ಯ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ ಪತ್ನಿ, ಪತ್ನಿ ಸಹೋದರ, ಜಮೀನಿ ಮಾಲೀಕ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳ ವಿಚಾರಣೆ ನಂತರ ಇದೀಗ ಲೋಕಾ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಇದನ್ನೂ ಓದಿ: ಸಿಎಂ ಪತ್ನಿ ವಿಚಾರಣೆ ನಡೆಸಿದ ಲೋಕಾಯುಕ್ತ: ಮಹತ್ವ ಪಡೆದುಕೊಂಡ ಪಾರ್ವತಿ ಹೇಳಿಕೆ
ಎಫ್ಐಆರ್ನಲ್ಲಿರುವ ಸಿದ್ದರಾಮಯ್ಯ ಅವರ ಬೆಂಗಳೂರು ನಿವಾಸಕ್ಕೆ ಲೋಕಾ ಅಧಿಕಾರಿಗಳು ನೋಟಿಸ್ ತಲುಪಿಸಿದ್ದಾರೆ. ನವೆಂಬರ್ 6ರ ಬೆಳಗ್ಗೆ 10 ಗಂಟೆ ಸುಮಾರಿಗೆ ಲೋಕಾಯುಕ್ತ ಕಚೇರಿಗೆ ಆಗಮಿಸುವಂತೆ ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.