
ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಡಿ (Group D) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 93 ರಿಂದ 100 ಹುದ್ದೆಗಳು ಖಾಲಿ ಇದ್ದು, ಇದೊಂದು ಸರ್ಕಾರಿ ಮತ್ತು ಕಾಯಂ (ಶಾಶ್ವತ) ಉದ್ಯೋಗವಾಗಿದೆ.
ಈ ನೇಮಕಾತಿಯಡಿ ಪಿಯೋನ್ (Peon), ವಾಚ್‌ಮನ್ (Watchman), ಸ್ವೀಪರ್ (Sweeper) ಮತ್ತು ಲಿಫ್ಟ್ ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ (SSLC – 10ನೇ ತರಗತಿ) ಪಾಸ್ ಆಗಿರುವುದು ಕಡ್ಡಾಯವಾಗಿದೆ. ಇನ್ನು ಅನುಭವದ ವಿಷಯಕ್ಕೆ ಬಂದರೆ, ಲಿಫ್ಟ್ ಅಟೆಂಡರ್ ಮತ್ತು ಟೈಲರ್ ಹುದ್ದೆಗಳಿಗೆ ಮಾತ್ರ ಪೂರ್ವ ಅನುಭವದ ಅಗತ್ಯವಿದ್ದು, ಉಳಿದ ಹುದ್ದೆಗಳಿಗೆ ಯಾವುದೇ ಅನುಭವದ ಅಗತ್ಯವಿರುವುದಿಲ್ಲ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಚೇರಿ ಸಹಾಯ, ಫೈಲ್ ಕೆಲಸ, ಸ್ವಚ್ಛತೆ ಹಾಗೂ ಕೋರ್ಟ್ ಸಹಾಯದಂತಹ ಕೆಲಸದ ಜವಾಬ್ದಾರಿಗಳು ಇರಲಿವೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದ್ದು, ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಿನಾಯಿತಿ ಸಿಗಲಿದೆ. ಇನ್ನು ಸಂಬಳದ ಶ್ರೇಣಿಯು ಅತ್ಯಂತ ಆಕರ್ಷಕವಾಗಿದ್ದು, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ 19,900 ರಿಂದ 63,200 ರೂ. ಹಾಗೂ 21,700 ರಿಂದ 69,100ರೂ. ರವರೆಗೆ ವೇತನ ದೊರೆಯಲಿದೆ.
ಈ ನೇಮಕಾತಿಯ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಅಥವಾ ಬರವಣಿಗೆ ಪರೀಕ್ಷೆ ಇರುವುದಿಲ್ಲ. ಬದಲಿಗೆ, ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (Merit List) ಮತ್ತು ನೇರ ಸಂದರ್ಶನದ (Interview) ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 200 ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100ರೂ. ನಿಗದಿಪಡಿಸಲಾಗಿದೆ.
ಅರ್ಜಿ ಪ್ರಕ್ರಿಯೆಯು ಈಗಾಗಲೇ 22 ಏಪ್ರಿಲ್ 2026 ರಿಂದ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 21 ಮೇ 2026 ಕೊನೆಯ ದಿನಾಂಕವಾಗಿದೆ.
ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್ ನೇಮಕಾತಿ ಘೋಷಣೆ
ಅರ್ಹ ಅಭ್ಯರ್ಥಿಗಳು ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ karnatakajudiciary.kar.nic.in ಗೆ ಭೇಟಿ ನೀಡಿ ಈ ಕೆಳಗಿನಂತೆ ಅರ್ಜಿ ಸಲ್ಲಿಸಬಹುದು:
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ