Karnataka Breaking Kannada News highlights: ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಿ; ಅಧಿಕಾರಿಗಳಿಗೆ ಸಚಿವ ಹೆಚ್.ಸಿ.ಮಹದೇವಪ್ಪ ಸಲಹೆ

ವಿವೇಕ ಬಿರಾದಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 05, 2023 | 10:45 PM

Breaking News Today highlights: ಕರ್ನಾಟಕದಲ್ಲಿ ಸೆಪ್ಟೆಂಬರ್​ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಮಂಡ್ಯ, ಮೈಸೂರು, ರಾಮನಗರ ಮತ್ತು ಹಾಸನದಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಶಾಸಕರ ಲೆಟರ್​ ಟು ಸಿಎಂ ಸಾಕಷ್ಟು ಚರ್ಚೆಯಾಗುತ್ತಿದೆ. ಇದರೊಂದಿಗೆ ಕರ್ನಾಟಕದ ವಿದ್ಯಮಾನಗಳ ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.

Karnataka Breaking Kannada News highlights: ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಿ; ಅಧಿಕಾರಿಗಳಿಗೆ ಸಚಿವ ಹೆಚ್.ಸಿ.ಮಹದೇವಪ್ಪ ಸಲಹೆ
ಹೆಚ್​ಸಿ ಮಹಾದೇವಪ್ಪ

ಕರ್ನಾಟಕದಲ್ಲಿ ಲೆಟರ್​ ಟು ಸಿಎಂ ಜೋರಾಗಿದೆ. ಸಚಿವರು ನಮ್ಮ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್​ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲ ಸೃಷ್ಟಿಸಿತ್ತು. ಇದಾದ ನಂತರ ಇದೀಗ ಎರಡನೇ ಬಾರಿಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಜೆಸ್ಕಾಂ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಶೀಘ್ರದಲ್ಲೆ ಸಭೆ ಕರೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ಪಕ್ಷಾಂತರ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಸಮಯದಲ್ಲಾದರೂ ಬೆಂಕಿ ಉದ್ಭವಿಸುವ ಸಾಧ್ಯತೆ ಇದೆ. ಇನ್ನು ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದಕ್ಕೆ ಮಂಡ್ಯ, ರಾಮನಗರ, ಮೈಸೂರು ಭಾಗದ ರೈತರು ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ ರಾಜ್ಯದಲ್ಲಿ ಸೈಬರ್​ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ತಿಂಗಳು ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್​​ ಅಪ್ಡೇಟ್ಸ್​ ಇಲ್ಲಿದೆ

LIVE NEWS & UPDATES

The liveblog has ended.
  • 05 Sep 2023 09:41 PM (IST)

    Karnataka News Live: ಕೆಟ್ಟ ಮಾತುಗಳನ್ನು ಡಾ.ಜಿ.ಪರಮೇಶ್ವರ್ ಬಾಯಿಂದ ನಿರೀಕ್ಷಿಸಿರಲಿಲ್ಲ; ಕೋಟ ಶ್ರೀನಿವಾಸ ಪೂಜಾ

    ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿಕೆ ವಿಚಾರ ‘ ಕೆಟ್ಟ ಮಾತುಗಳನ್ನು ಡಾ.ಜಿ.ಪರಮೇಶ್ವರ್ ಬಾಯಿಂದ ನಿರೀಕ್ಷಿಸಿರಲಿಲ್ಲ ಎಂದು ಬೆಂಗಳೂರಿನಲ್ಲಿ MLC ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ‘ವರ್ಗಾವಣೆ ದಂಧೆ ಅಸಹ್ಯ ಹುಟ್ಟಿಸುವ ರೀತಿ ನಡೆದು ಹೋಗಿದೆ. ಕಾಂಗ್ರೆಸ್​​ನ ಈ ಸಂಸ್ಕೃತಿ ಉದಯನಿಧಿ ಭಾವನೆಗೆ ಒತ್ತು ಕೊಡುತ್ತಿದೆ ಎಂದರು.

  • 05 Sep 2023 08:49 PM (IST)

    Karnataka News Live: ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ವಶ

    ಉತ್ತರ ಕನ್ನಡ: ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಖಾಪ್ರಿ ದೇವಸ್ಥಾನ ಬಳಿ ನಡೆದಿದೆ. ಮಿಥುನ್ ನಾಯ್ಕ, ಸಂತೋಷ ಠಾಕರಕರ್, ಪ್ರಸಾದ ದೇಸಾಯಿ ಮದ್ಯ ಸಾಗಿಸುತ್ತಿದ್ದ ಆರೋಪಿತರು. ಕರ್ನಾಟಕ ಅಬಕಾರಿ ಕಾಯ್ದೆ ಕಲಂ 32, 34, 38(ಎ) ಅಡಿ ಪ್ರಕರಣ ದಾಖಲು ಮಾಡಲಾಗಿದೆ.

  • 05 Sep 2023 07:22 PM (IST)

    Karnataka News Live: ಮೈಸೂರು ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಿ; ಸಚಿವ ಹೆಚ್.ಸಿ.ಮಹದೇವಪ್ಪ​

    ಮೈಸೂರು: ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಎಂದು ಅಧಿಕಾರಿಗಳ ಸಭೆಯಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಲಹೆ ನೀಡಿದ್ದಾರೆ. ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದರು.

  • 05 Sep 2023 06:44 PM (IST)

    Karnataka News Live: ಗೌರಿ ಲಂಕೇಶ್ ನೆನಪಿನಲ್ಲಿ ಗೌರಿ ನೆನಪು ಕಾರ್ಯಕ್ರಮ; ಅತಿಥಿಯಾಗಿ ಸಿಎಂ

    ಬೆಂಗಳೂರು: ಗೌರಿ ಲಂಕೇಶ್ ನೆನಪಿನಲ್ಲಿ ಗೌರಿ ನೆನಪು ಕಾರ್ಯಕ್ರಮವನ್ನು ಗೌರಿ ಮೆಮೊರಿಯಲ್ ಟ್ರಸ್ಟ್ ನಿಂದ ಬೆಂಗಳೂರಿನ ಟೌನ್ ಹಾಲ್​ನಲ್ಲಿ ಆಯೋಜನೆ ಮಾಡಲಾಗಿದೆ. ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಸರ್ವಾಧಿಕಾರದ ಕಾಲದಲ್ಲಿ ಭಾರತವನ್ನು ಮರುಕಟ್ಟುವ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.

  • 05 Sep 2023 05:38 PM (IST)

    Karnataka News Live: ಸತೀಶ್ ಜಾರಕಿಹೊಳಿ, ನಮ್ಮ ನಡುವೆ ಯಾವುದೇ ವಾರ್ ಇಲ್ಲ; ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಸತೀಶ್ ಜಾರಕಿಹೊಳಿ, ನಮ್ಮ ನಡುವೆ ಯಾವುದೇ ವಾರ್ ಇಲ್ಲ, ನಮ್ಮದು ಬಿಜೆಪಿ ವಿರುದ್ಧದ ಹೋರಾಟ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ನಾನು 36 ಸಾವಿರ ಕೋಟಿ ಹಣವನ್ನು ಮಹಿಳೆಯರಿಗೆ ಕೊಡಬೇಕು. ಬಹಳಷ್ಟು ಅಳೆದು ತೂಗಿ ನಾನು ಸಚಿವೆಯಾಗಿ ಹೆಜ್ಜೆ ಇಡುತ್ತಿದ್ದೇನೆ ಎಂದಿದ್ದಾರೆ.

  • 05 Sep 2023 04:38 PM (IST)

    Karnataka News Live: ಮೆಡಿಕಲ್ ಕಾಲೇಜು ಶಿಫ್ಟ್​; ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು, ಡಿಕೆಶಿ

    ರಾಮನಗರ: ನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್​ ವಿಚಾರ ‘ ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು ಎಂದು ಕನಕಪುರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು. ಈಗ ಎರಡೂ ಕಡೆ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದೆ. ಕನಕಪುರದಲ್ಲಿ ನಿರ್ಮಾಣ ಆಗ್ತಿರುವ ಕಾಲೇಜು ರಾಮನಗರ ಬಳಿ ಇದೆ. ರಾಮನಗರದಲ್ಲಿ ಯೂನಿವರ್ಸಿಟಿ ಆಗುತ್ತೆ ಎಂದರು.

  • 05 Sep 2023 04:06 PM (IST)

    Karnataka News Live: ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ; ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿರುವ ಹಿನ್ನಲೆ ಇಂದು ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

  • 05 Sep 2023 03:42 PM (IST)

    Karnataka News Live: 7 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿ ಸರ್ಕಾರ ಆದೇಶ

    ಬೆಂಗಳೂರು: ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಧಿಕಾರಿಗಳನ್ನು ವರ್ಗಾವಣೆಯನ್ನು ಕೈಗೊಂಡಿದೆ. ಅದರಂತೆ ಇದೀಗ7 ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದೆ. ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಐಪಿಎಸ್​ ಅಧಿಕಾರಿಗಳಾದ ಅಕ್ಷಯ್​ ಮಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್​, ಶೇಖರ್​ ಟೆಕ್ಕಣನವರ್​, ಸೈದುಲ್ಲಾ ಅಡಾವತ್, ನಿರಂಜನ್ ರಾಜೇ ಅರಸ್, ಬದರೀನಾಥ್​ಗೆ ಸೂಚನೆ ನೀಡಲಾಗಿದೆ.

  • 05 Sep 2023 02:42 PM (IST)

    Karnataka News Live: ಬೆಂಗಳೂರಿನಲ್ಲಿ ಆಟೋ ಚಾಲಕನಿಂದ ವಿದೇಶಿ ಪ್ರಜೆಗೆ ವಂಚನೆ ಆರೋಪ

    ಬೆಂಗಳೂರು: ನಗರದಲ್ಲಿ ಆಟೋ ಚಾಲಕನಿಂದ ವಿದೇಶಿ ಪ್ರಜೆಗೆ ವಂಚನೆಯಾದ ಆರೋಪ ಕೇಳಿಬಂದಿದೆ. ಬೆಂಗಳೂರು ಅರಮನೆ ವೀಕ್ಷಣೆಗೆ ಬಂದಿದ್ದ ವಿದೇಶಿ ಪ್ರಜೆಗಳ ಬಳಿ 500 ರೂ. ಪಡೆದು ಬಳಿಕ 100 ರೂ. ಕೊಟ್ಟಿದ್ದೀರಿ ಎಂದು ಆಟೋ ಚಾಲಕನ ವಂಚನೆ ಆರೋಪಿಸಿ, ನಂತರ ವಿದೇಶಿ ಪ್ರಜೆ ಯುಟ್ಯೂಬ್​ಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

  • 05 Sep 2023 02:03 PM (IST)

    Karnataka News Live: ಪ್ರಾಣಿ ದಾಳಿಯಿಂದ ರಾಜ್ಯದಲ್ಲಿ 15 ದಿನಗಳಲ್ಲಿ 11 ಜನ ಮೃತ; ಈಶ್ವರ್ ಖಂಡ್ರೆ

    ಬೆಂಗಳೂರು: ನಿನ್ನೆ (ಸೆ.04) ಹುಲಿ ದಾಳಿಗೆ ಬಾಲಕ ಚರಣ್ ನಾಯ್ಕ್(7) ಮೃತಪಟ್ಟಿದ್ದಾನೆ. ಮೂರು ದಿನಗಳ ಹಿಂದೆ ವೆಂಕಟೇಶ್ ಕಾಡಾಣೆ ತುಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಮಾನವ ಪ್ರಾಣಿ ಸಂಘರ್ಷದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.

  • 05 Sep 2023 01:11 PM (IST)

    Karnataka News Live: ಮೈಸೂರಿಗೆ ಆಗಮಿಸಿದ ಗಜಪಡೆ

    ವಿಶ್ವ ವಿಖ್ಯಾತ ಮೈಸೂರು ದಸರಾ 2023 ಮಹೋತ್ಸವಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ. ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದ್ದು, ಇಂದು ಅರಮನೆಯಂಗಳಕ್ಕೆ ಗಜಪಡೆ ಆಗಮಿಸಿತು. ಮೈಸೂರು ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ದೊರೆಯಿತು.

  • 05 Sep 2023 12:56 PM (IST)

    Karnataka News Live: ಶಿಕ್ಷಣ ಬರೀ ವಿದ್ಯಾವಂತರನ್ನಾಗಿ ಮಾಡುವುದು ಅಲ್ಲ; ಸಿದ್ದರಾಮಯ್ಯ

    ಬೆಂಗಳೂರು: ಶಿಕ್ಷಣ ಬರೀ ವಿದ್ಯಾವಂತರನ್ನಾಗಿ ಮಾಡುವುದು ಅಲ್ಲ. ಸಮಾಜದಲ್ಲಿನ‌ ಕೆಲಸಗಳಿಗೆ ಶಕ್ತಿ ತುಂಬುವ ಕೆಲಸ ಶಿಕ್ಷಕರು ಮಾಡಬೇಕು. ಜಾತೀಯತೆ, ಸಾಮಾಜಿಕ ಅಸಮಾನತೆ, ಅನೇಕ ಭಾಷೆ, ಸಂಸ್ಕೃತನಲ್ಲಿದೆ. ವೈವಿಧ್ಯತೆಯಲ್ಲಿ‌ ಏಕತೆ ಇರಬೇಕು‌ ಅಂತ ಸಂವಿಧಾನದಲ್ಲಿದೆ. ಮಕ್ಕಳಿಗೆ ಪೋಷಕರು ಮೊದಲ ಗುರು. ಆಮೇಲೆ ನೀವು ಎರಡನೇ ಗುರು. ಶಾಲೆಯಲ್ಲಿ ಏನು ಕಲೀತಿವೋ ಅದನ್ನ ನಮ್ಮ ಬದುಕಿನಲ್ಲಿ‌ ಅಳವಡಿಸಿಕೊಳ್ಳುತ್ತೇವೆ. ಜಾತ್ಯಾತೀಕ, ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  • 05 Sep 2023 12:08 PM (IST)

    Karnataka News Live: ನಿಗದಿಗಿಂತ 100 ಯೂನಿಟ್ ವಿದ್ಯುತ್ ಉತ್ಪಾದನೆ ಹೆಚ್ಚಿದೆ

    ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇದೆ ಅನ್ನೋದು ಸುಳ್ಳು ಸುದ್ದಿ. ಆ ರೀತಿ ಸುಮ್ಮನೆ ಸುಳ್ಳು ಹಬ್ಬಿಸಲಾಗುತ್ತಿದೆ. ಬೇಸಿಗೆಯಲ್ಲಿ ಬೇಕಾಗುವಷ್ಟು ವಿದ್ಯುತ್ ಈಗಲೇ ಇದೆ. ಥರ್ಮಲ್ ವಿದ್ಯುತ್ ಘಟಕಗಳು ದುರಸ್ತಿಯಲ್ಲಿದೆ. ಮಳೆ ಹೆಚ್ಚಾಗಿದೆ, ಇದರಿಂದ ವಿದ್ಯುತ್ ಉತ್ಪಾದನೆ ಕೂಡ ಹೆಚ್ಚಾಗಿದೆ. ಇಂದು ನಿಗದಿಗಿಂತ 100 ಯೂನಿಟ್ ವಿದ್ಯುತ್ ಉತ್ಪಾದನೆ ಹೆಚ್ಚಿದೆ ಎಂದು ಬೆಂಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ಹೇಳಿದರು.

  • 05 Sep 2023 11:48 AM (IST)

    Karnataka News Live: ಫೇಲ್​​​/ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು

    ಬೆಂಗಳೂರು: ಫೇಲ್​ ಆದ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಇನ್ಮುಂದೆ  ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಬಹುದು. ಫೇಲ್​​​ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು ಎಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

  • 05 Sep 2023 11:46 AM (IST)

    Karnataka News Live: ರಿಕ್ಟರ್​ ಮಾಪಕದಲ್ಲಿ 2.6 ರಷ್ಟು ತೀವ್ರತೆಯಲ್ಲಿ ಬೀದರ್​ನಲ್ಲಿ ಭೂಕಂಪ

    ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 9:11ಕ್ಕೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆಯಲ್ಲಿ ಭೂಕಂಪವಾಗಿದೆ.

  • 05 Sep 2023 11:03 AM (IST)

    Karnataka News Live: ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

    ಮಂಡ್ಯ: ಕೆ ಆರ್​​ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಡದಂತೆ ರಕ್ತದಿಂದ  ಹೆಬ್ಬೆಟ್ಟು ಒತ್ತಿ ಚಳುವಳಿ ನಡೆಸಿದ್ದಾರೆ. ರಕ್ತ ಕೊಟ್ಟೆವೂ ನೀರು ಕೊಡೆವು ಎಂದು ಘೋಷಣೆ ಕೂಗುತ್ತಿದ್ದಾರೆ.

  • 05 Sep 2023 10:45 AM (IST)

    Karnataka News Live: ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಅಧಿಕಾರಿ

    ತುಮಕೂರು: ಜಿಲ್ಲೆಯಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಎಇಇ ಕಾಶಿ ವಿಶ್ವನಾಥ ಲಂಚ ಪಡೆಯುತ್ತಿದ್ದ ವೇಳೆ ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾರೆ.  ಕುಮಾರಿ ಎಂಬುವರ ಜಮೀನಿನ ವ್ಯಾಜ್ಯ ವಿಚಾರವನ್ನು ಬಗೆಹರಿಸಲು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್, ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

  • 05 Sep 2023 10:18 AM (IST)

    Karnataka News Live: ಇಂದು ಜೆಸ್ಕಾಂ ಅಧಿಕಾರಿಗಳ ಜೊತೆ ಕೆಜೆ ಜಾರ್ಜ್​ ಸಭೆ​

    ಕೊಪ್ಪಳ: ಶಾಸಕ ರಾಯರೆಡ್ಡಿ ಸಿಎಂಗೆ ಪತ್ರ ಬರೆದ ಬೆನ್ನಲ್ಲೇ ಇಂದು (ಸೆ.05) ರಂದು ಇಂಧನ  ಸಚಿವ ಕೆ ಜೆ ಜಾರ್ಜ್​ ಜೆಸ್ಕಾಂ ಅಧಿಕಾರಿಗಳ ಸಭೆ ಕರೆದಿದ್ದಾರೆ.  ಮಧ್ಯಾಹ್ನ 3 ಗಂಟೆಗೆ ಜೆಸ್ಕಾಂ ಅಧಿಕಾರಿಗಳ ಜೊತೆ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ​ಸಭೆ ನಡೆಸಲಿದ್ದಾರೆ.

  • 05 Sep 2023 10:10 AM (IST)

    Karnataka News Live: ಬಿಎಲ್​ ಸಂತೋಷ್​ ಮತ್ತು ಸಚಿವ ಪ್ರಿಯಾಂಕ್​ ಖರ್ಗೆ ಮಧ್ಯೆ ವಾಕ್ಸಮರ

    ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್​ ಮತ್ತು ಸಚಿವ ಪ್ರಿಯಾಂಕ್​ ಖರ್ಗೆ ಮಧ್ಯೆ ವಾಕ್ಸಮರ ​​ಶುರುವಾಗಿದೆ.  ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬಿ.ಎಲ್​.ಸಂತೋಷ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಿಯಾಂಕ್​ ಖರ್ಗೆ ಟ್ಚೀಟ್​ ಮಾಡಿ ಚಿಕಿತ್ಸೆ ಅಗತ್ಯವಿರುವ ಸೋಂಕು ಇದೆ ಎಂದು ನೀವು ಒಪ್ಪಿಕೊಂಡಿದ್ದೀರಿ. ಸಾವಿರಾರು ವರ್ಷಗಳಿಂದ ಅನೇಕ ಸೋಂಕುಗಳಿವೆ  ಮತ್ತು ಪ್ರಚಲಿತದಲ್ಲಿವೆ. ಅದು ಮನುಷ್ಯರ ನಡುವೆ ತಾರತಮ್ಯವನ್ನುಂಟು ಮಾಡುತ್ತದೆ ಮತ್ತು ಅವರ ಮಾನವನ ಘನತೆಯನ್ನು ನಿರಾಕರಿಸುತ್ತದೆ. ನಿಮ್ಮಷ್ಟು ಬುದ್ಧಿವಂತನಲ್ಲ, ದಯವಿಟ್ಟು ನನಗೆ ಜ್ಞಾನೋದಯ ಮಾಡಿ. ಸಮಾಜದಲ್ಲಿ ಇಂತಹ ನಿಯಮಗಳನ್ನು ಯಾರು ಹಾಕಿದರು? ಇನ್ನೊಬ್ಬರಿಗಿಂತ ಹೆಚ್ಚು ನೀತಿವಂತರನ್ನಾಗಿ ಮಾಡುವುದು ಯಾವುದು? ಜಾತಿಯ ಆಧಾರದ ಮೇಲೆ ನಮ್ಮನ್ನು ವಿಭಜಿಸಿದವರು ಯಾರು ?  ಕೆಲ ಜನರು ಏಕೆ ಅಸ್ಪೃಶ್ಯರಾಗಿದ್ದಾರೆ. ಅಸ್ಪೃಶ್ಯರು ಈಗಲೂ ದೇವಸ್ಥಾನಗಳನ್ನು ಏಕೆ ಪ್ರವೇಶಿಸಬಾರದು? ಮಹಿಳೆಯರ ಕೀಳು ಸ್ಥಿತಿ ಒತ್ತಿಹೇಳುವ ಈ ಆಚರಣೆ ಯಾರು ಪಡೆದರು ? ಅಸಮಾನ ಮತ್ತು ದಮನಕಾರಿಯಾದ ಜಾತಿ ವ್ಯವಸ್ಥೆಯಲ್ಲಿ ಯಾರು ಸಿಕ್ಕರು ? ಎಂದು ಟ್ವೀಟ್​ ಮಾಡಿದ್ದಾರೆ.

  • 05 Sep 2023 09:59 AM (IST)

    Karnataka News Live: ಲಿಂಗಸುಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ ರದ್ದು

    ರಾಯಚೂರು: ಲಿಂಗಸುಗೂರು ಪುರಸಭೆಯ ನಾಲ್ವರು ಸದಸ್ಯರ ಸದಸ್ಯತ್ವ  ರದ್ದುಗೊಳಿಸಲಾಗಿದೆ. ಪಕ್ಷ‌ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಫಾತೀಮಾ, ಮೌಲಾಸಾಬ್, ಎ.ಪ್ರಮೋದ್ ಕುಮಾರ್, ಶರಣಪ್ಪ‌ ಅನರ್ಹಗೊಂಡಿದ್ದಾರೆ. ಸದಸ್ಯರು ಕಾಂಗ್ರೆಸ್​ನಿಂದ ಆಯ್ಕೆಯಾಗಿ ಕೆಆರ್​ಪಿಪಿ ಪರ ಪ್ರಚಾರ ನಡೆಸಿದ್ದರು. ಈ ವಿಚಾರವಾಗಿ ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾ‌ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ.

  • 05 Sep 2023 09:47 AM (IST)

    Karnataka News Live: ಸೆ.06 ರಂದು ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

    ಬೆಂಗಳೂರು: ನಾಳೆ (ಸೆ.06) ರಂದು  ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.

  • 05 Sep 2023 09:20 AM (IST)

    Karnataka News Live: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ; ಹವಾಮಾನ ಇಲಾಖೆ

    ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ ನೀಡಿದೆ. ಕರಾವಳಿ ವಲಯದಲ್ಲಿ ಜಾಸ್ತಿ ಮಳೆಯಾಗಲಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಧ್ಯ ಕರ್ನಾಟಕದ ಭಾಗಗಳಲ್ಲಿ ಸುಮಾರಾಗಿ ಮಳೆಯಾಗಲಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡದ ಕರಾವಳಿ ಭಾಗಗಳಲ್ಲಿ ವರುಣಾರ್ಭಟ ಜೋರಾಗಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗ, ಉತ್ತರ ಕನ್ನಡದ ಪೂರ್ವಭಾಗ, ಧಾರವಾಡ, ಹಾವೇರಿ, ಗದಗ, ವಿಜಯನಗರ ಜಿಲ್ಲೆಗೆ ಸಾಧಾರಣ ಮಳೆಯಾಗಬಹುದು. ಮೈಸೂರು, ಚಾಮರಾಜನಗರ, ಮಂಡ್ಯದ ದಕ್ಷಿಣ – ಪಶ್ಚಿಮ, ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ ಧಾರವಾಡದ ಉತ್ತರ ಭಾಗ, ಬೆಳಗಾವಿ, ಬಾಗಲಕೋಟೆಗೆ ಹಗುರ ಮಳೆಯಾಗಲಿದೆ.

  • 05 Sep 2023 09:05 AM (IST)

    Karnataka News Live: ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಮತ್ತೆ ಚಿರತೆ ಹಾವಳಿ

    ಮೈಸೂರು: ಜಿಲ್ಲೆಯ ಟಿ.ನರಸೀಪುರದಲ್ಲಿ ಮತ್ತೆ ಚಿರತೆ ಹಾವಳಿ ಶುರುವಾಗಿದೆ. ಕಾವೇರಿಪುರ ಮೂಡಲಹುಂಡಿ ಗ್ರಾಮದಲ್ಲಿ ಎರಡು ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಚಿರತೆ ನಿನ್ನೆ (ಸೆ.05) ಗ್ರಾಮದ ಕಾಲುವೆ ಸಮೀಪ ಕಾಣಿಸಿಕೊಂಡಿತ್ತು. ಇದೀಗ ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • 05 Sep 2023 08:38 AM (IST)

    Karnataka News Live: ಡಿಎಂಕೆ ಮುಖಂಡ ವಿಕೆ ಗುರುಸ್ವಾಮಿ ಮೇಲೆ ಹಲ್ಲೆ

    ಬೆಂಗಳೂರು: ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಮೇಲೆ ಹಲ್ಲೆ ಮಾಡಿರುವ ಘಟನೆ ಬಾಣಸವಾಡಿಯ ಕಮ್ಮನಹಳ್ಳಿ ಹೋಟೆಲ್​ನಲ್ಲಿ ನಡೆದಿದೆ. ಸದ್ಯ ಬಾಣಸವಾಡಿ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದಾರೆ.

  • 05 Sep 2023 08:08 AM (IST)

    Karnataka News Live: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಪ್ರತಿಭಟನೆ

    ಮಂಡ್ಯ/ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ವಿರೋಧಿಸಿ ಧರಣಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಇಂದು (ಸೆ.05) ಮಂಡ್ಯದಲ್ಲಿ ಬೆಳಗ್ಗೆ 10.30ಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ನಿಲ್ಲಿಸುವಂತೆ ಆಗ್ರಹಿ,  ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಅಲ್ಲದೇ ಬೆಳಗ್ಗೆ 11 ಗಂಟೆಗೆ ಮಂಡ್ಯದ ಕಾವೇರಿ ನೀರಾವರಿ ನಿಗಮದ ಮುಂದೆ ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ಮಾಡಲಿದ್ದಾರೆ. ಮಧ್ಯಾಹ್ನ 12ಕ್ಕೆಶ್ರೀರಂಗಪಟ್ಟಣದಲ್ಲಿ ಭೂತಾಯಿ ಹೋರಾಟ ಸಮಿತಿ ಸದಸ್ಯರು ಧರಣಿ ಮಾಡಲಿದ್ದಾರೆ.

  • 05 Sep 2023 08:02 AM (IST)

    Karnataka News Live: ರಾಜ್ಯದ 35 ಐಪಿಎಸ್ ಅಧಿಕಾರಿಗಳು ವರ್ಗ

    ರಾಜ್ಯದ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

    • ಶೇಖರ್.ಹೆಚ್.ತೆಕ್ಕನ್ನವರ್-ಡಿಸಿಪಿ, ಸಿಸಿಬಿ ಬೆಂಗಳೂರು
    • ಸಾರಾ ಫಾತೀಮಾ-ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ
    • ಸೋನಾವಾನೆ ರಿಷಿಕೇಶ್ ಭಗವಾನ್-ಎಸ್​​ಪಿ, ವಿಜಯಪುರ
    • ಲೋಕೇಶ್ ಭರಮಪ್ಪ-ಎಸ್​​ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು
    • ಆರ್.ಶ್ರೀನಿವಾಸ್ ಗೌಡ-ಡಿಸಿಪಿ 2, ಸಿಸಿಬಿ ಬೆಂಗಳೂರು
    • ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ)
    • ವೈ.ಅಮರನಾಥ್ ರೆಡ್ಡಿ-ಎಸ್​ಪಿ, ಬಾಗಲಕೋಟ
    • ಹರಿರಾಮ್ ಶಂಕರ್-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ
    • ಅದ್ದೂರು ಶ್ರೀನಿವಾಸುಲು-ಎಸ್​ಪಿ, ಕಲಬುರಗಿ
    • ಅನ್ಶು ಕುಮಾರ್-ಎಸ್​ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ
    • ಕನ್ನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ
    • ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು
    • ರವೀಂದ್ರ ಕಾಶಿನಾಥ್ ಗಡದಿ-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ
  • Published On - Sep 05,2023 8:00 AM

    Follow us
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
    Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
    ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
    ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
    ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
    ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
    ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
    ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ