ಚುನಾವಣೆ ಹೊತ್ತಲ್ಲೇ ಡಿಕೆ ಶಿವಕುಮಾರ್​ಗೆ ಶಾಕ್, ಲೋಕಾಯುಕ್ತದಿಂದ ಬಂತು ನೋಟಿಸ್

ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್​ಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ಹಾಗಾದ್ರೆ ನೋಟಿಸ್​​ನಲ್ಲೇನಿದೆ ಎನ್ನುವ ವಿವರ ಇಲ್ಲಿದೆ.

ಚುನಾವಣೆ ಹೊತ್ತಲ್ಲೇ ಡಿಕೆ ಶಿವಕುಮಾರ್​ಗೆ ಶಾಕ್, ಲೋಕಾಯುಕ್ತದಿಂದ ಬಂತು ನೋಟಿಸ್
ಡಿಕೆ ಶಿವಕುಮಾರ್​
Follow us
| Updated By: ರಮೇಶ್ ಬಿ. ಜವಳಗೇರಾ

Updated on:Apr 10, 2024 | 7:56 PM

ಬೆಂಗಳೂರು, (ಏಪ್ರಿಲ್ 10): 2013ರ ಏಪ್ರಿಲ್ 1ರಿಂದ 2018ರರ ಏಪ್ರಿಲ್ 30ರ ಅವಧಿಯಲ್ಲಿನ ಅಕ್ರಮವಾಗಿ 74.93 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳಿಸಿರುವ ಆರೋಪದ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar)​ ವಿರುದ್ಧ ಈಗಾಗಲೇ ಲೋಕಾಯುಕ್ತ(lokayukta) ದೂರು ದಾಖಲಿಸಿಕೊಂಡಿದ್ದು, ಇದೀಗ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ದಾಖಲೆ ಒದಗಿಸುವಂತೆ ನೊಟೀಸ್ ಜಾರಿ ಮಾಡಿದೆ. ಇದರಿಂದ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ಡಿಕೆ ಶಿವಕುಮಾರ್​ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆ ರದ್ದು ಮಾಡಿ ರಾಜ್ಯ ಸರ್ಕಾರ, ಲೋಕಾಯುಕ್ತ ತನಿಖೆಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್, ಕಳೆದ ಪ್ರೆಬ್ರವರಿ ತಿಂಗಳಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಗಳಿಕೆ ವಿವರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದು, ಸಿಬಿಐಗೆ ನೀಡಿರುವ ದಾಖಲಾತಿಗಳ ಮಾಹಿತಿಗಳನ್ನು ಒದಗಿಸುವಂತೆ ನೋಟಿಸ್​ನಲ್ಲಿ ಸೂಚಿಸಿದೆ.

ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಪ್ರಕರಣ: ಡಿಕೆಶಿ ವಿರುದ್ಧ ಎಫ್​ಐಆರ್​, ಲೋಕಾಯುಕ್ತದಿಂದ ಮರು ತನಿಖೆ

ಇದೇ ಆಸ್ತಿ ಗಳಿಕೆ ಆರೋಪದಡಿ ಡಿಕೆ ಶಿವಕುಮಾರ್ ವಿರುದ್ಧ 2020ರ ಅಕ್ಟೋಬರ್ 03ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಿಬಿಐ ಪ್ರಕರಣ ದಾಖಲಿಸಿತ್ತು. ಆದ್ರೆ, ಈ ಹಿಂದೆ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು. ಅಲ್ಲದೇ ಈ ಪ್ರಕರಣದ ತನಿಖೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 2023ರ ನವೆಂಬರ್ 23ರಂರು ಲೋಕಾಯುಕ್ತ ಪೊಲೀಸ್​ ವಿಭಾಗಕ್ಕೆ ವಹಿಸಿತ್ತು. ಬಳಿಕ ಸರ್ಕಾರದ ಆದೇಶದಂತೆ ಲೋಕಾಯುಕ್ತ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆಯನ್ನು ಪ್ರತ್ಯೇಕ ತಂಡಕ್ಕೆ ವಹಿಸಲಾಗಿತ್ತು.

2013ರ ಮಾರ್ಚ್ 31ರ ವೇಳೆಗೆ ಡಿಕೆ ಶಿವಕುಮಾರ್ ಕುಟುಂಬ 33 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರ ಕುಟುಂಬದ ಆಸ್ತಿ 166.79 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 113.12 ಕೋಟಿ ವಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್​ಐಆರ್​ನಲ್ಲಿತ್ತು.

2018ರ ಏ.30ರ ವೇಳೆಗೆ ಡಿಕೆ ಶಿವಕುಮಾರ್ ಕುಟುಂಬ 128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಿಬಿಐ, ತನ್ನ ಎಫ್​ಐಆರ್​ನಲ್ಲಿ ಉಲ್ಲೇಖಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:36 pm, Wed, 10 April 24

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು