Lokayukta
ಬೆಂಗಳೂರು, (ನವೆಂಬರ್ 06): ಲೋಕಾಯುಕ್ತ (Karnataka Lokayukta) ಕಾಯ್ದೆಯ ಸೆಕ್ಷನ್ 22(1) ಮತ್ತು (2)ರ ಪ್ರಕಾರ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಆದ್ರೆ, ಇದುವರೆಗೂ ಕರ್ನಾಟಕದ 6 ಸಚಿವರು, 66 ಶಾಸಕರು, 28 ವಿಧಾನಪರಿಷತ್ ಸದಸ್ಯರು(ಎಂಎಲ್ಸಿ) ಇದುವರೆಗೂ 2024-25ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಆಡಳಿರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ನ ಒಟ್ಟು 66 ಶಾಸಕರು ಇದ್ದಾರೆ.
ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿ
- ಕೆ.ಎನ್ ರಾಜಣ್ಣ(ಕಾಂಗ್ರೆಸ್, ಲಕ್ಷ್ಮಣ ಸವದಿ(ಕಾಂಗ್ರೆಸ್) , ಖನೀಜ್ ಫಾತಿಮಾ(ಕಾಂಗ್ರೆಸ್), ಜಿ.ಜನಾರ್ದನ ರೆಡ್ಡಿ (ಕೆಆರ್ಪಿಪಿ), ವಿನಯ ಕುಲಕರ್ಣಿ (ಕಾಂಗ್ರೆಸ್), ಬಿ ಕೆ ಸಂಗಮೇಶ್ವರ್ (ಕಾಂಗ್ರೆಸ್), ನಯನಾ ಮೊಟಮ್ಮ (ಕಾಂಗ್ರೆಸ್) , ಬಿ. ಸುರೇಶ್ ಗೌಡ (ಬಿಜೆಪಿ) , ಕೆ.ಗೋಪಾಲಯ್ಯ (ಬಿಜೆಪಿ), ಸಿ.ಪಿ.ಯೋಗೇಶ್ವರ (ಕಾಂಗ್ರೆಸ್), ಹೆಚ್.ಡಿ ರೇವಣ್ಣ (ಜೆಡಿಎಸ್), ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್),

ಆಸ್ತಿ ವಿವರ ಸಲ್ಲಿಸದ ಸಚಿವರ ಹೆಸರುಗಳು
- ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಸಚಿವ
- ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
- ಬಿ.ಝಡ್. ಜಮೀರ್ ಅಹ್ಮದ್ ಖಾನ್-, ವಸತಿ, ವಕ್ಸ್ ಮತ್ತು ಅಲ್ಪ ಸಂಖ್ಯಾತ ಸಚಿವ
- ರಹೀಮ್ ಖಾನ್- ಹಜ್, ಪೌರಾಡಳಿತ ಸಚಿವ
- ಕೆ. ವೆಂಕಟೇಶ್- ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ