ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿ, ಅಸ್ತ್ರಗಳೊಂದಿಗೆ ವಿಪಕ್ಷ ಸಜ್ಜು
ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಎರಡು ವರ್ಷಗಳು ಪೂರೈಸಿದ್ದು, ಸಾಲು ಸಾಲು ಎಡವಟ್ಟುಗಳನ್ನು ಮಾಡಿಕೊಂಡಿದೆ. ಇದರ ನಡುವೆ ಇದೀಗ ಮುಂಗಾರ ಅಧಿವೇಶನಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಹಲವು ಅಸ್ತ್ರಗಳೊಂದಿಗೆ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿವೆ.

ಬೆಂಗಳೂರು, (ಜೂನ್ 19): ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 11ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, 2 ವಾರಗಳ ಕಾಲ ನಡೆಯಲಿದೆ. ಈಗಷ್ಟೇ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಕಾಂಗ್ರೆಸ್ ಸರ್ಕಾರ, ಇದೀಗ ಆಂತರಿಕ ಹಗ್ಗಜಗ್ಗಾಟ ಎದುರಿಸುತ್ತಿದೆ. ಇದರ ಜೊತೆಗೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಸರ್ಕಾರದ ಮೇಲೆ ಮುಗಿಬೀಳುವುದಂತೂ ಗ್ಯಾರಂಟಿ. ಆರ್ ಸಿಬಿ ವಿಜಯೋತ್ಸವ ಕಾಲ್ತುಳಿತ, ಮಂಗಳೂರು ಕೋಮುಗಲಭೆ, ಸೇರಿದಂತೆ ಹಲವು ಅಸ್ತ್ರಗಳನ್ನೇ ಮುಂದಿಟ್ಟುಕೊಂಡುಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಅಣಿಯಾಗಿವೆ. ಪ್ರತ್ಯಾಸ್ತ್ರಗಳೊಂದಿಗೆ ಸರ್ಕಾರದವೂ ಸಿದ್ಧವಾಗುತ್ತಿದೆ. ಈ ಜಟಾಪಟಿ ಮುಂಗಾರು ಅಧಿವೇಶ ರಣಾಂಗಣವಾಗುವ ಲಕ್ಷಣಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡ ವರ್ಷಗಳನ್ನು ಪೂರೈಸಿದೆ. ಈವರೆಗಿನ ನಾಲ್ಕು ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ವಿರೋಧ ಪಕ್ಷಗಳು ಗಟ್ಟಿ ಧ್ವನಿಯಲ್ಲಿ ಗರ್ಹಿಸುವ ಸಂಭವವಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬಲವಾಗಿ ಒಗ್ಗೂಡಿದ್ದು, ಜಂಟಿ ಹೋರಾಟದಲ್ಲಿ ಸರ್ಕಾರವನ್ನು ಮಣಿಸುವ ಹುರುಪಿನಲ್ಲಿವೆ.
ಆರ್ ಸಿಬಿ ವಿಜಯೋತ್ಸವ, ದಕ್ಷಿಣ ಕನ್ನಡ ಕೋಮುಗಲಭೆ, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಇತರೆ ಇಲಾಖೆಯ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು, ಜನಗಣತಿ, ರಾಜ್ಯ ಸರ್ಕಾರದ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗೆ ಪಟ್ಟು ಹಿಡಿಯಲು ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ.
Published On - 3:04 pm, Thu, 19 June 25