Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,531 ಕೊರೊನಾ ಕೇಸ್ ಪತ್ತೆ; 19 ಮಂದಿ ಸಾವು

ಬೆಂಗಳೂರಿನಲ್ಲಿ ಇಂದು ಒಂದೇ ದಿನ 376 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,25,957 ಕ್ಕೆ ಏರಿಕೆಯಾಗಿದೆ. 12,25,957 ಸೋಂಕಿತರ ಪೈಕಿ 12,01,937 ಜನರು ಗುಣಮುಖರಾಗಿದ್ದಾರೆ.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 1,531 ಕೊರೊನಾ ಕೇಸ್ ಪತ್ತೆ; 19 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 28, 2021 | 10:57 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜುಲೈ 28) ಹೊಸದಾಗಿ 1,531 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,99,195 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,40,147 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 19 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,456 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 22,569 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 376 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,25,957 ಕ್ಕೆ ಏರಿಕೆಯಾಗಿದೆ. 12,25,957 ಸೋಂಕಿತರ ಪೈಕಿ 12,01,937 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 15,843 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 8,176 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 376, ಬೀದರ್ 2, ಚಾಮರಾಜನಗರ 29, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 51, ಚಿತ್ರದುರ್ಗ 18, ದಕ್ಷಿಣ ಕನ್ನಡ 337, ದಾವಣಗೆರೆ 15, ಧಾರವಾಡ 3, ಹಾಸನ 97, ಹಾವೇರಿ 2, ಕಲಬುರಗಿ 19, ಕೊಡಗು 78, ಕೋಲಾರ 9, ಮಂಡ್ಯ 38, ಮೈಸೂರು 93, ರಾಯಚೂರು 1, ಶಿವಮೊಗ್ಗ 86, ತುಮಕೂರು 39, ಉಡುಪಿ 109, ಉತ್ತರ ಕನ್ನಡ 57, ವಿಜಯಪುರ 4, ಯಾದಗಿರಿ ಜಿಲ್ಲೆಯಲ್ಲಿ 1 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಜಿಲ್ಲಾವಾರು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಮೂವರ ಬಲಿಯಾಗಿದೆ. ದಕ್ಷಿಣ ಕನ್ನಡ 5, ಬೆಂಗಳೂರು ಗ್ರಾಮಾಂತರ, ಉಡುಪಿ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಕೊವಿಡ್ ಮರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 36,456 ಜನರ ಸಾವು ಸಂಭವಿಸಿದೆ.

ಇದನ್ನೂ ಓದಿ: Explainer ಐಸಿಎಂಆರ್‌ ಸೆರೊ ಸಮೀಕ್ಷೆ: ಕೊರೊನಾವೈರಸ್ ವಿರುದ್ಧದ ಪ್ರತಿಕಾಯಗಳ ಬೆಳವಣಿಗೆ ಯಾವ ರಾಜ್ಯದ ಜನರಲ್ಲಿ ಎಷ್ಟೆಷ್ಟು?

Tokyo Olympic: ಒಲಂಪಿಕ್ಸ್ ಆರಂಭವಾದ ಬಳಿಕ ಟೋಕಿಯೊದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಒಂದೇ ದಿನ 3,177 ಜನರಿಗೆ ಸೋಂಕು

(Karnataka New Corona Cases Death Toll Total Covid19 Active Coronavirus Cases)

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ