ಕಾಲರಾ ಹೆಚ್ಚಳಕ್ಕೆ ಕಾರಣವಾಯ್ತಾ ವಾಟರ್​ ಟ್ಯಾಂಕರ್ ನೀರು? ಪರಿಶೀಲನೆಗೆ ಮುಂದಾದ ಆರೋಗ್ಯ ಇಲಾಖೆ

ಬೇಸಿಗೆಯಲ್ಲಿ ಕುಡಿಯುವ ನೀರಿನಿಂದ ವಾಂತಿ-ಭೇದಿ, ಕಾಲರಾ, ಕರುಳು ಬೇನೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತವೆ. ಹೀಗಾಗಿ, ರೋಗಗಳ ಹರಡುವಿಕೆ ತಡೆಗೆ ಕುಡಿಯುವ ನೀರು ಪರಿಶೀಲನೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಆರೋಗ್ಯ ಇಲಾಖೆ ಮುಂದಾಗಿದೆ.

ಕಾಲರಾ ಹೆಚ್ಚಳಕ್ಕೆ ಕಾರಣವಾಯ್ತಾ ವಾಟರ್​ ಟ್ಯಾಂಕರ್ ನೀರು? ಪರಿಶೀಲನೆಗೆ ಮುಂದಾದ ಆರೋಗ್ಯ ಇಲಾಖೆ
ಆರೋಗ್ಯ ಸೌಧ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on: Apr 14, 2024 | 3:11 PM

ಬೆಂಗಳೂರು, ಏಪ್ರಿಲ್​ 14: ನಗರದಲ್ಲಿನ ಬಿರು ಬಿಸಲಿನಿಂದ ಸನ್​ ಸ್ಟ್ರೋಕ್​​​ ಜೊತೆಗೆ ಕಾಲರಾ ಜನರಲ್ಲಿ ಆತಂಕ ಹೆಚ್ಚಿಸಿದೆ. ಹೆಚ್ಚುತ್ತಿರುವ ಕಾಲರಾ (Cholera) ರೋಗಕ್ಕೆ ಕಲುಷಿತ ನೀರು ಮತ್ತು ಆಹಾರ ಕಾರಣ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ನೀರಿನ ಶುದ್ಧತೆ ಪರಿಶೀಲನೆಯ ಸಲಹೆಗೂ ಆರೋಗ್ಯ ಇಲಾಖೆ (Health Department) ಮುಂದಾಗಿದೆ. ಸದ್ಯ ಬೆಂಗಳೂರಿನ ಜನರಿಗೆ ನೀರಿನ ಭವಣೆಯ ಬಿಸಿ ತಟ್ಟಿದ್ದು ಕುಡಿಯುವ ನೀರಿಗಾಗಿ ಟ್ಯಾಂಕರ್ (Water Tanker) ಮೊರೆ ಹೋಗಿದ್ದಾರೆ. ಆದರೆ ಈ ಟ್ಯಾಂಕರ್ ನೀರು ಜನರ ಆರೋಗ್ಯದ ಮೇಲೆ ವೆತಿರಿಕ್ತ ಸಮಸ್ಯೆಗೆ ಕಾರಣವಾಗುತ್ತಿದ್ದು, ಕಾಲರಾ ಏರಿಕೆಗೂ ಕಾರಣವಾಗುತ್ತಿದೆ.

ಮಳೆಯ ಅಭಾವ, ಅಂತರ್ಜಲ ಕುಸಿತದ ಪರಿಣಾಮ ಕೆರೆ, ಕಟ್ಟೆ, ಬೋರ್‌ವೆಲ್‌ಗಳಲ್ಲಿ ನೀರು ಇಂಗಿಹೋಗಿದೆ. ಹೀಗಾಗಿ ಬೆಂಗಳೂರಿನಾದ್ಯಂತ ಕುಡಿವ ನೀರಿಗೆ ಭಾರಿ ಅಭಾವ ತಲೆದೋರಿದ್ದು ವಾಟರ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಸದ್ಯ ಜನರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಟ್ಯಾಂಕರ್ ನೀರು ಶುದ್ಧತೆಯ ಪರಿಶೀಲನೆಗೆ ಮುಂದಾಗಿದೆ.

ಸಾಕಷ್ಟು ಏರಿಯಾಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಆದರೆ ಈ ನೀರು ಎಷ್ಟು ಶುದ್ಧವಾಗಿದೆ? ಈ ನೀರಿನಿಂದಲೇ ಕಾಲರಾ ಪ್ರಕರಣ ಹಾಗೂ ವಾಂತಿ ಬೇಧಿ ಏರಿಕೆಯಾಗುತ್ತಿದೆಯಾ?  ಎಂಬ ಪ್ರಶ್ನೆ ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಮೂಡಿದೆ. ಹೀಗಾಗಿ ರಾಜಧಾನಿಯಲ್ಲಿನ ವಾಟರ್​ ಟ್ಯಾಂಕರ್ ಸೇರಿದ್ದಂತೆ ಕುಡಿಯುವ ನೀರಿನ ಮೂಲಗಳ ಶುದ್ಧತೆ ಪರಿಶೀಲನೆಗೆ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ 10 ಕಾಲರಾ ಕೇಸ್ ಪತ್ತೆ, ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ!

ಕಾಲರಾ ಹರಡುವ ಪ್ರಮುಖ ಮೂಲವಾದ ಕುಡಿಯುವ ನೀರಿನ ಶುದ್ಧತೆಯ ಅಧ್ಯಯನಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಮತ್ತೊಂದಡೆ ವೈದ್ಯರು ನೀರಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸವಂತೆ ಹಾಗೂ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಸಲಹೆ ನೀಡಿದ್ದಾರೆ.

ಕಲುಷಿತ ನೀರಿನ ಸೇವನೆಯಿಂದ ಹರಡುವ ಸೋಂಕುಗಳು..!

ಕಾಲರಾ

ಟೈಫಾಯಿಡ್ ಜ್ವರ

ಹೆಪಟೈಟಿಸ್ ಎ

ವಾಂತಿ ಭೇದಿ

ಗಿಯಾರ್ಡಿಯಾಸಿಸ್

ಅತಿಸಾರ ಕಾಮಾಲೆ

ಚರ್ಮರೋಗ

ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟುವ ಕ್ರಮಗಳು

ಶುದ್ಧ ಮತ್ತು ಸುರಕ್ಷಿತ ನೀರು ಕುಡಿಯಬೇಕು

ಸಂಸ್ಕರಿಸಿದ ನೀರು ಕುಡಿಯಬೇಕು ನೈರ್ಮಲ್ಯಕಾಪಾಡಿಕೊಳ್ಳಬೇಕು

ನೀರಿನ ಮಾಲಿನ್ಯವನ್ನು ತಡೆಗಟ್ಟಬೇಕು

ಕಾದು ಆರಿಸಿದ ನೀರು ಸೇವನೆ ಮಾಡಬೇಕು

ಉತ್ತಮವಾದ ಆಹಾರ ಸೇವನೆಮಾಡಬೇಕು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು