Karnataka Rain: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ; ಬೆಂಗಳೂರು, ಮಲೆನಾಡಿನಲ್ಲೂ ಇನ್ನೆರಡು ದಿನ ಮಳೆ

Bengaluru Rain: ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Karnataka Rain: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ; ಬೆಂಗಳೂರು, ಮಲೆನಾಡಿನಲ್ಲೂ ಇನ್ನೆರಡು ದಿನ ಮಳೆ
ಮಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 23, 2022 | 5:45 AM

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದ್ದು (Rain in Karnataka) ಇನ್ನೂ 2 ದಿನ ವರುಣನ ಅಬ್ಬರವಿರಲಿದೆ. ಇನ್ನೆರಡು ದಿನ ಕರ್ನಾಟಕದ (Karnataka Rains) ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ನಿನ್ನೆ ದಾವಣಗೆರೆ, ಯಾದಗಿರಿ, ಕಲಬುರಗಿ, ಧಾರವಾಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಯಾದಗಿರಿಯಲ್ಲಿ ಅಕಾಲಿಕ ಮಳೆಯಿಂದ ಭತ್ತದ ರಾಶಿ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ. ಗುಡುಗು ಸಹಿತ ಮಳೆಯಿಂದ ಜನ ಕಂಗಾಲಾಗಿದ್ದು, ಸಿಡಿಲು ಬಡಿದು ಹಸು ಮತ್ತು ಕರು ಸಾವನ್ನಪ್ಪಿವೆ. ಕಲಬುರಗಿಯಲ್ಲೂ ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ.

ಇಂದು ಕೂಡ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದೆ. ಹೀಗಾಗಿ, ಕರ್ನಾಟಕದಲ್ಲಿ ಹವಾಮಾನ ಇಲಾಖೆ ಬಹುತೇಕ ರಾಜ್ಯಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಮಿಳುನಾಡು, ತೆಲಂಗಾಣದಲ್ಲಿ ಚಂಡಮಾರುತ ಎದ್ದಿರುವ ಕಾರಣ ಕರ್ನಾಟಕದ ಹಲವು ರಾಜ್ಯಗಳಲ್ಲಿ ಇನ್ನು ಕೆಲವು ದಿನ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇನ್ನೂ 2 ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಶಿವಮೊಗ್ಗದ ಆಗುಂಬೆ, ತೀರ್ಥಹಳ್ಳಿ, ಹೊಸನಗರ, ಸಾಗರ, ಚಿಕ್ಕಮಗಳೂರಿನ ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ, ಕಳಸ, ಮೂಡಿಗೆರೆ, ಕೊಡಗಿನ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡದಲ್ಲೂ ಮಳೆ ಅಬ್ಬರಿಸಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಇಂದು ಹಾಗೂ ನಾಳೆ ಕರಾವಳಿ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಪಶ್ಚಿಮ ಘಟ್ಟದಲ್ಲಿ ಹಗುರ ಮಳೆಯಾಗಲಿದೆ. ಏ.25ರಂದು ಕರಾವಳಿಯ ಎಲ್ಲಾ ಜಿಲ್ಲೆ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಮಳೆ ಮುಂದುವರೆದಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದಂತೆ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಇನ್ನೆರಡು ದಿನಗಳು ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲಿ ಇಂದಿನಿಂದ ಏಪ್ರಿಲ್ 24ರವರೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಇಂದಿನಿಂದ ಏಪ್ರಿಲ್ 24ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಬೆಂಗಳೂರಿನಲ್ಲಿ 2 ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಒಳನಾಡು, ಪಶ್ಚಿಮ ಘಟ್ಟಗಳ ಒಂದೆರಡು ಕಡೆ ಮಳೆಯಾಗಲಿದೆ ಎಂದು ವರದಿಯಾಗಿದೆ. ಉತ್ತರ ಒಳನಾಡಿನ ಕಲಬುರ್ಗಿ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ, ಬೀದರ್ ಹಾಗೂ ದಕ್ಷಿಣ ಒಳನಾಡಿನ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಗುಡುಗು- ಮಿಂಚು ಸಹಿತ ಮಳೆಯಾಗಲಿದೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆಯ ಆರ್ಭಟ; ಉತ್ತರ ಒಳನಾಡಿನಲ್ಲಿ ಹಳದಿ ಅಲರ್ಟ್​ ಘೋಷಣೆ

Rain Updates: ಕರ್ನಾಟಕದಲ್ಲಿ ಇನ್ನೂ 4 ದಿನ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ