ದೆಹಲಿ/ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕಕ್ಕೆ ಕಳೆದ 1 ವರ್ಷದಲ್ಲಿ ಬೇರೆ ಬೇರೆ ವಲಯಗಳಲ್ಲಿ 1.35 ಲಕ್ಷ ಕೋಟಿ ರೂ. ಹೂಡಿಕೆ ಬಂದಿದೆ ಎಂದು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಗ್ರೀನ್ ಹೈಡ್ರೋಜನ್ ಯೋಜನೆಯಡಿ 1.5 ಲಕ್ಷ ಕೋಟಿ ರೂ. ಹೂಡಿಕೆ ಬಂದಿತ್ತು. ಆದರೆ ಮೂಲ ಸೌಕರ್ಯಗಳ ಕೊರತೆಯಿಂದ ಆ ಹೂಡಿಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿಗೆ ತೆರಳಿರುವ ಸಚಿವ ಎಂ.ಬಿ.ಪಾಟೀಲ್ 2 ದಿನಗಳಿಂದ ಅನೇಕ ದೇಶಗಳ ರಾಯಭಾರಿಗಳ ಭೇಟಿಯಾಗಿದ್ದಾರೆ. ಸಿಂಗಾಪುರ ಹೈಕಮಿಷನರ್ ಭೇಟಿಯಾಗಿ ವಿವಿಧ ವಲಯಗಳಿಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದೇವೆ. ಆಸ್ಟ್ರೇಲಿಯಾ ಹೈಕಮಿಷನರ್ ಭೇಟಿ ಮಾಡಿ ಶಿಕ್ಷಣ, ಬಾಹ್ಯಾಕಾಶ, ಬಯೋಟೆಕ್, ಐಟಿ ಅಭಿವೃದ್ಧಿ ಮತ್ತು ಹೂಡಿಕೆ ಬಗ್ಗೆ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಕುರ್ಚಿ ಗುದ್ದಾಟದ ಮಧ್ಯ ದಿಲ್ಲಿಯಲ್ಲಿ ಕುಮಾರಸ್ವಾಮಿಯನ್ನು ಭೇಟಿಯಾದ ಎಂಬಿ ಪಾಟೀಲ್
ಜರ್ಮನಿ, ದಕ್ಷಿಣ ಕೊರಿಯಾ ರಾಯಭಾರಿಗಳ ಭೇಟಿಯಾಗಿದ್ದೇನೆ. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಟಾಯ್ ಝೋನ್, ಎಂಎಂಡಿ, ವ್ಯಾಟ್ಲೊ, ಹೆಚ್ಎಂಇಎಲ್ ಹಾಗೂ ಅಂಬೇರ್ ಎಂಟರ್ಪ್ರೈಸಸ್ ಕಂಪನಿ ಜೊತೆಗೂ ಹೂಡಿಕೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದಿದ್ದಾರೆ.
ಸಿಂಗಾಪುರ ಉದ್ಯಮಗಳ ಒಕ್ಕೂಟಕ್ಕೆ ಮುಕ್ತ ಆಹ್ವಾನ!
27,000+ ಸಂಸ್ಥೆಗಳನ್ನೊಳಗೊಂಡ ಸಿಂಗಾಪುರದ ಉದ್ಯಮಗಳ ಒಕ್ಕೂಟಕ್ಕೆ ಹೂಡಿಕೆಯ ತವರಾಗಿರುವ ಕರ್ನಾಟಕಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ವ್ಯಾಪಾರ, ಹೂಡಿಕೆ, ಐಟಿ, ಉತ್ಪಾದನೆ ಮುಂತಾದ ಸಂಸ್ಥೆಗಳನ್ನು ಒಳಗೊಂಡಿರುವ ಒಕ್ಕೂಟವು ಬೆಂಗಳೂರಿನಲ್ಲಿ ತಮ್ಮ ಕಚೇರಿ ತೆರೆಯಲು ಆಸಕ್ತಿ ತೋರಿದೆ. ಇದರಿಂದ… pic.twitter.com/41JjSQTRO0— M B Patil (@MBPatil) September 11, 2024
ರಾಯಭಾರಿಗಳ ಜೊತೆಗೆ ಉದ್ಯಮಿಗಳನ್ನು ಸಹ ಭೇಟಿ ಮಾಡಿದ್ದೇನೆ. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದೇನೆ. ಮೊದಲ ಬಾರಿಗೆ ಸ್ಟಾರ್ಟ್ ಅಪ್ ಚಾಲೆಂಜ್ ಮಾಡಿದೆ. ವಿಭಿನ್ನವಾಗಿ ಜಾಗತಿಕ ಬಂಡವಾಳ ಹೂಡಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾರ್ಯಕ್ರಮದ ಮೂಲ ಥೀಮ್ನ್ನು ಬದಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಕರ್ನಾಟಕಕ್ಕೆ ಡಿಫೆನ್ಸ್ ಕಾರಿಡಾರ್ ನೀಡುವಂತೆ ಮನವಿ ಮಾಡಿದ್ದೇನೆ. ಹೆಲಿಕಾಪ್ಟರ್ ಸೇರಿ ಸೇನಾ ಸಾಮಗ್ರಿ ಉತ್ಪಾದನೆಗೆ ಅನುಕೂಲವಾಗಲಿದೆ. ಕಾರವಾರ ಸೇನಾ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಬಳಕೆಗೆ ಮತ್ತು ರನ್ವೇ ವಿಸ್ತರಿಸಲು ಕೇಳಿದ್ದೇನೆ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರನ್ನು ಭೇಟಿ ಮಾಡಿದ್ದೇನೆ. ಇವಿ ಕಂಪನಿಗಳಿಗೆ ಹೂಡಿಕೆ ಹಣದ ಪ್ರಮಾಣ ಕಡಿಮೆ ಮಾಡಲು, ರಾಜ್ಯದಲ್ಲೂ ಒಂದು ಸೆಮಿಕಂಡಕ್ಟರ್ ಕಂಪನಿ ಆರಂಭಿಸುವಂತೆ ಮನವಿ ಮಾಡಲಾಗಿದೆ. 12 ಇಂಡಸ್ಟ್ರಿಯಲ್ ಕಾರಿಡಾರ್ಗಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯಕ್ಕೆ ಒಂದೂ ನೀಡಿಲ್ಲ, ಒಂದು ನೀಡುವಂತೆ ಒತ್ತಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟದ ರೈಲ್ವೆ ಯೋಜನೆ ಕಾಮಗಾರಿಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವದ್ವಯರು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಚರ್ಚಿಸಿದ್ದೇನೆ. ಸಣ್ಣ ಉದ್ದಿಮೆದಾರರ ಮೇಲೆ ಹಾಕಿರುವ ಜಿಎಸ್ಟಿ ರದ್ದು, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಆಮದು ತೆರಿಗೆ ಸುಂಕ ಇಳಿಸಲು ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.