ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ: ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಆರೋಪ

"Fact Vid" ಎಂಬ ಹೆಸರಿನ ಫೇಸ್‌ಬುಕ್​ ಪೇಜ್​ನಲ್ಲಿ ಎಐ ಆಧಾರಿತ ಹಿಂದೂ ದೇವರ ಅಶ್ಲೀಲ ಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.​ ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಆರೋಪಿಸಲಾಗಿದೆ. ಹಾಗಾಗಿ ಪೇಜ್ ಅಡ್ಮಿನ್‌ ಹಾಗೂ ಅವಹೇಳನಕಾರಿ ಕಮೆಂಟ್ ಹಾಕಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ: ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಆರೋಪ
ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ದೇವತೆಗಳಿಗೆ ಅಪಮಾನ: ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಆರೋಪ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 11, 2024 | 7:59 PM

ಮಂಗಳೂರು, ಸೆಪ್ಟೆಂಬರ್​​ 11: ಎಐ ಆಧಾರಿತ ಹಿಂದೂ ದೇವರ (Hindu gods) ಚಿತ್ರಗಳನ್ನು ಅಶ್ಲೀಲವಾಗಿ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳನ್ನು ಅಪಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್​ಐಆರ್​ ದಾಖಲಿಸಲಾಗಿದೆ.

“Fact Vid” ಎಂಬ ಹೆಸರಿನ ಫೇಸ್‌ಬುಕ್​ ಪೇಜ್​ನಲ್ಲಿ ಎಐ ಆಧಾರಿತ ಹಿಂದೂ ದೇವರ ಅಶ್ಲೀಲ ಚಿತ್ರಗಳನ್ನು ರಚಿಸಿ ಪೋಸ್ಟ್ ಮಾಡಲಾಗಿದೆ.​ ಶಿವ, ಕೃಷ್ಣ, ರಾಮ, ಗಣೇಶ ದೇವರು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ ಚಿತ್ರಿಸಲಾಗಿದೆ.

AI ಆಧಾರಿತ ಹಿಂದೂ ದೇವರ ಚಿತ್ರಗಳು

ಓಡಿಸುತ್ತಿರುವಂತೆ, ಕುಸ್ತಿ ಆಡುತ್ತಿರುವಂತೆ ವಿವಿಧ ರೀತಿಯಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವಂತೆ ಕಮೆಂಟ್ ಹಾಕಲಾಗುತ್ತಿದೆ. ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಆರೋಪಿಸಲಾಗಿದೆ. ಹಾಗಾಗಿ ಪೇಜ್ ಅಡ್ಮಿನ್‌ ಹಾಗೂ ಅವಹೇಳನಕಾರಿ ಕಮೆಂಟ್ ಹಾಕಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಪ್ರತಿಮೆಗೆ ಟೊಮ್ಯಾಟೋ ಸಾಸ್ ಹಾಕಿದ್ದ ಕಿಡಿಗೇಡಿಗಳು 

ಕೊಪ್ಪಳ: ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಪ್ರತಿಮೆಗೆ ಕಿಡಿಗೇಡಿಗಳು ಟೊಮ್ಯಾಟೋ ಸಾಸ್ ಹಾಕಿ ವಿರೂಪಗೊಳಿಸಿದ್ದ ಘಟನೆ ಇತ್ತೀಚೆಗೆ ಜಿಲ್ಲೆಯ ಗಂಗವಾತಿ ಪಟ್ಟಣದಲ್ಲಿ ನಡೆದಿತ್ತು. ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವದನ್ನು ಖಂಡಿಸಿ ದಲಿತ ಪರ ಸಂಘಟನೆಗಳು ದಿಢೀರನೆ ಪ್ರತಿಭಟನೆ ಮಾಡಿದ್ದರು.

ಇದನ್ನೂ ಓದಿ: ಮಂಗಳೂರು: ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್!

ಸ್ಥಳಕ್ಕೆ ಗಂಗಾವತಿ ಶಾಸಕ ಜನಾರ್ಧನರೆಡ್ಡಿ, ಪೊಲೀಸ್ ಅಧಿಕಾರಿಗಳು ಆಗಮಸಿ ಪರಿಶೀಲನೆ ನಡೆಸಿದ್ದರು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರನ್ನು ಪತ್ತೆ ಮಾಡಿ, ಕಠಿಣ ಕ್ರಮ ಕೈಗೊಳ್ಳಬೇಕು ಅಂತ ದಲಿತ ಸೇನೆ ಕಾರ್ಯಕರ್ತರು ಆಗ್ರಹಿಸಿದ್ದರು. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸರಯೂ ನದಿಯಲ್ಲಿ ಮುಳುಗಿದ ಸರ್ಕಾರಿ ಶಾಲೆ; ಶಾಕಿಂಗ್ ವಿಡಿಯೋ ವೈರಲ್
ಸರಯೂ ನದಿಯಲ್ಲಿ ಮುಳುಗಿದ ಸರ್ಕಾರಿ ಶಾಲೆ; ಶಾಕಿಂಗ್ ವಿಡಿಯೋ ವೈರಲ್
ವಿಡಿಯೋ: ದರ್ಶನ್ ಕಾಣಲು ವಿಜಯಲಕ್ಷ್ಮಿ ಜೊತೆ ಬಂದ ಧನ್ವೀರ್
ವಿಡಿಯೋ: ದರ್ಶನ್ ಕಾಣಲು ವಿಜಯಲಕ್ಷ್ಮಿ ಜೊತೆ ಬಂದ ಧನ್ವೀರ್
ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್