ಆಲಮಟ್ಟಿ ಜಲಾಶಯ
ಮುಖ್ಯಾಂಶಗಳು
- ಕಾವೇರಿ ನೀರು ನಿರ್ವಹಣಾ ಸಮಿತಿಯಿಂದ ತಮಿಳುನಾಡಿಗೆ ನೀರು ಬಿಡಲು ಆದೇಶ.
- ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಜಲಾಶಯಗಳಿಗೆ ಹರಿವು ಹೆಚ್ಚಳ.
- ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ರೈತ ಸಂಘಟನೆಗಳ ಆಕ್ರೋಶ.
ಬೆಂಗಳೂರು, ಆಗಸ್ಟ್ 25: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಆದರೆ, ತಮಿಳುನಾಡಿಗೆ 15 ದಿನಗಳ ಕಾಲ ದಿನಕ್ಕೆ 9,000 ಕ್ಯೂಸೆಕ್‌ನಂತೆ ಸುಮಾರು 12 TMC ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಆದೇಶಿಸಿರುವುದು ಕಾವೇರಿಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾವೇರಿ ಜಲಾನಯನ ಪ್ರದೇಶದ 4 ಡ್ಯಾಂಗಳಲ್ಲಿ 80 TMC ಸಂಗ್ರಹವಿದ್ದರೂ 64 TMC ಮಾತ್ರ ಲಭ್ಯವಿದ್ದು, ನೀರು ಹರಿಸಿದರೆ ಭವಿಷ್ಯದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಎದುರಾಗಿದೆ.
ಕೆಆರ್‌ಎಸ್ (KRS) ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಜಲಮಟ್ಟ: 108.20 ಅಡಿ
- ಒಳಹರಿವು: 4,004 ಕ್ಯೂಸೆಕ್
- ಹೊರಹರಿವು: 4,543 ಕ್ಯೂಸೆಕ್
- ಗರಿಷ್ಠ ಸಾಮರ್ಥ್ಯ: 49.452 TMC
- ಇಂದಿನ ನೀರು ಸಂಗ್ರಹ: 29.959 TMC (ಸುಮಾರು 30 TMC)
ಹೇಮಾವತಿ ಜಲಾಶಯ
- ಗರಿಷ್ಠ ಮಟ್ಟ: 2,922 ಅಡಿ (37 TMC)
- ಇಂದಿನ ಜಲಮಟ್ಟ: 2,914.84 ಅಡಿ (30.551 TMC)
- ಒಳಹರಿವು: 3,588 ಕ್ಯೂಸೆಕ್
- ಹೊರಹರಿವು: ನದಿಗೆ 1,800 ಕ್ಯೂಸೆಕ್
- ಕಾಲುವೆಗೆ 3,700 ಕ್ಯೂಸೆಕ್
ಕಳೆದ ವರ್ಷ ಇದೇ ದಿನ 2,921.85 ಅಡಿ ನೀರಿತ್ತು
ಹಾರಂಗಿ ಜಲಾಶಯ
- ಗರಿಷ್ಠ ಮಟ್ಟ: 2,859 ಅಡಿ
- ಇಂದಿನ ಜಲಮಟ್ಟ: 2,858.45 ಅಡಿ
- ಒಳಹರಿವು: 3,638 ಕ್ಯೂಸೆಕ್
- ಹೊರಹರಿವು: 4,375 ಕ್ಯೂಸೆಕ್
- ಇಂದಿನ ನೀರು ಸಂಗ್ರಹ: 8 TMC (2 TMC ಡೆಡ್ ಸ್ಟೋರೇಜ್)
ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಜಲಮಟ್ಟ: 519.54 ಮೀಟರ್
- ಒಳಹರಿವು: 27,062 ಕ್ಯೂಸೆಕ್
- ಹೊರಹರಿವು: 19,018 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ 0 ಇಂಚು (2,158.0 ಅಡಿ)
- ಇಂದಿನ ಜಲಮಟ್ಟ: 175 ಅಡಿ 11 ಇಂಚು (2,147.91 ಅಡಿ)
- ಒಳಹರಿವು: 5,680 ಕ್ಯೂಸೆಕ್
- ಹೊರಹರಿವು: 206 ಕ್ಯೂಸೆಕ್
- ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC
- ಇಂದಿನ ಸಂಗ್ರಹ: 59.420 TMC
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1,819.00 ಅಡಿ
- ಇಂದಿನ ಜಲಮಟ್ಟ: 1,796.80 ಅಡಿ
- ಒಳಹರಿವು: 12,863 ಕ್ಯೂಸೆಕ್
- ಶೇಕಡಾವಾರು ಸಂಗ್ರಹ: 58.16%
ಬಸವಸಾಗರ ಜಲಾಶಯ
- ಗರಿಷ್ಟ ಮಟ್ಟ: 492.25 ಮೀಟರ್
- ಇಂದಿನ ಮಟ್ಟ : 492.23 ಮೀಟರ್
- ಒಳ ಹರಿವು: 20,000 ಕ್ಯೂಸೆಕ್
- ಹೊರ ಹರಿವು : 18,000 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ