Karnataka Dam Water Level: ಆಲಮಟ್ಟಿ, ಹಾರಂಗಿ ಭರ್ತಿ ; ಕೆಆರ್‌ಎಸ್, ಕಬಿನಿ ಅಪ್‌ಡೇಟ್ ಇಲ್ಲಿದೆ

ಕರ್ನಾಟಕದ ಜಲಾಶಯಗಳ (ಆಗಸ್ಟ್ 30) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಆಲಮಟ್ಟಿ ಡ್ಯಾಂಗಳ ಇಂದಿನ ನೀರಿನ ಮಟ್ಟ ಹಾಗೂ ಒಳಹರಿವು-ಹೊರಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಆಲಮಟ್ಟಿ ಮತ್ತು ಹಾರಂಗಿ ಜಲಾಶಯಗಳು ಗರಿಷ್ಠ ಮಟ್ಟದತ್ತ ಸಾಗುತ್ತಿದ್ದು, ಕಾವೇರಿ ನದಿ ಪಾತ್ರದ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

Karnataka Dam Water Level: ಆಲಮಟ್ಟಿ, ಹಾರಂಗಿ ಭರ್ತಿ ; ಕೆಆರ್‌ಎಸ್, ಕಬಿನಿ ಅಪ್‌ಡೇಟ್ ಇಲ್ಲಿದೆ
ಹಾರಂಗಿ ಜಲಾಶಯ

Updated on: Aug 30, 2026 | 1:51 PM

ಮುಖ್ಯಾಂಶಗಳು

  • ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಜಲಾಶಯಗಳಿಗೆ ನೀರಿನ ಒಳಹರಿವು ಮುಂದುವರಿದಿದೆ.
  • ಹಾರಂಗಿ ಹಾಗೂ ಆಲಮಟ್ಟಿ ಜಲಾಶಯಗಳು ಗರಿಷ್ಠ ಮಟ್ಟ ತಲುಪುವ ಸನ್ನಿಹಿತದಲ್ಲಿವೆ.
  • ಕೆಆರ್‌ಎಸ್ ಮತ್ತು ಕಬಿನಿ ಡ್ಯಾಂಗಳಿಂದ ಕಾಲುವೆ ಹಾಗೂ ನದಿಗೆ ನೀರು ಬಿಡುಗಡೆ.

ಬೆಂಗಳೂರು, ಆಗಸ್ಟ್ 30: ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಸ್ಥಿರವಾಗಿದೆ. ಕಾವೇರಿ ಮತ್ತು ಕೃಷ್ಣಾ ನದಿ ಪಾತ್ರದ ಜಲಾಶಯಗಳಾದ ಮಂಡ್ಯದ ಕೆಆರ್‌ಎಸ್, ಮೈಸೂರಿನ ಕಬಿನಿ, ಕೊಡಗಿನ ಹಾರಂಗಿ ಹಾಗೂ ವಿಜಯಪುರದ ಆಲಮಟ್ಟಿ ಡ್ಯಾಂಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸವಿಸ್ತಾರ ಮಾಹಿತಿ ಇಲ್ಲಿದೆ. ಆಲಮಟ್ಟಿ ಹಾಗೂ ಹಾರಂಗಿ ಜಲಾಶಯಗಳು ಗರಿಷ್ಠ ಮಟ್ಟದ ಸಾಗುತ್ತಿದ್ದರೆ, ರೈತರ ಕೃಷಿ ಚಟುವಟಿಕೆಗೆ ಅಗತ್ಯವಿರುವಂತೆ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

1. ಕೆಆರ್‌ಎಸ್ ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 110.28 ಅಡಿ
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 31.923 ಟಿಎಂಸಿ
  • ಒಳಹರಿವು: 6,377 ಕ್ಯೂಸೆಕ್
  • ಹೊರಹರಿವು: 7,178 ಕ್ಯೂಸೆಕ್

2. ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಕಾಲುವೆಗಳು ಹಾಗೂ ನದಿಗೆ ನೀರು ಹರಿಸಲಾಗುತ್ತಿದೆ.

  • ಗರಿಷ್ಠ ಮಟ್ಟ: 84.00 ಅಡಿ
  • ಇಂದಿನ ಮಟ್ಟ: 71.32 ಅಡಿ
  • ಇಂದಿನ ಒಟ್ಟು ಸಂಗ್ರಹ: 12.33 ಟಿಎಂಸಿ
  • ಒಳಹರಿವು: 4,961 ಕ್ಯೂಸೆಕ್
  • ನದಿಗೆ ಹೊರಹರಿವು: 6,600 ಕ್ಯೂಸೆಕ್
  • ಕಾಲುವೆಗಳಿಗೆ ಹೊರಹರಿವು: 1,600 ಕ್ಯೂಸೆಕ್
  • ಒಟ್ಟು ಹೊರಹರಿವು: 8,260 ಕ್ಯೂಸೆಕ್

3. ಹಾರಂಗಿ ಜಲಾಶಯ

ಕೊಡಗು ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸನ್ನಿಹಿತದಲ್ಲಿದೆ.

  • ಗರಿಷ್ಟ ಮಟ್ಟ: 2,859 ಅಡಿ
  • ಇಂದಿನ ಮಟ್ಟ: 2,858.70 ಅಡಿ
  • ಒಳಹರಿವು: 3,695 ಕ್ಯೂಸೆಕ್
  • ಹೊರಹರಿವು: 2,963 ಕ್ಯೂಸೆಕ್

4. ಆಲಮಟ್ಟಿ ಜಲಾಶಯ

ಉತ್ತರ ಕರ್ನಾಟಕದ ಜೀವನದಿ ಕೃಷ್ಣಾಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಡ್ಯಾಂ ಇಂದಿನ ನೀರಿನ ಮಟ್ಟ:

  • ಗರಿಷ್ಟ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 519.57 ಮೀಟರ್
  • ಒಳಹರಿವು: 24,846 ಕ್ಯೂಸೆಕ್
  • ಹೊರಹರಿವು: 26,883 ಕ್ಯೂಸೆಕ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us