AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದ ಮಾಜಿ ಡಿಸಿಎಂ ಈಶ್ವರಪ್ಪ: ಕ್ಷೇತ್ರ ಯಾವುದು?

2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗ ಕೆ.ಇ. ಕಾಂತೇಶ್ ಅವರಾಗಲಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಘೋಷಿಸಿದ್ದಾರೆ. ಬಿಜೆಪಿಯಲ್ಲಿ ಎಲ್ಲ ನಾಯಕರ , ಮುಖಂಡರ ಮಕ್ಕಳಿಗೆ ಟಿಕೆಟ್​​ ನೀಡಲಾಗಿದೆ. ಆದರೆ ಈಶ್ವರಪ್ಪ ಕುಟುಂಬಕ್ಕೆ ಮಾತ್ರ ಅನ್ಯಾಯ ಆಗಿದೆ ಎಂದು ಅವರ ಪುತ್ರ ಕಾಂತೇಶ್​​ ಆರೋಪಿಸಿದ್ದಾರೆ.

2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿದ ಮಾಜಿ ಡಿಸಿಎಂ ಈಶ್ವರಪ್ಪ: ಕ್ಷೇತ್ರ ಯಾವುದು?
ಮಾಜಿ ಡಿಸಿಎಂ ಈಶ್ವರಪ್ಪImage Credit source: Tv9 Kannada
Basavaraj Yaraganavi
| Edited By: |

Updated on:Aug 30, 2026 | 1:01 PM

Share

ಶಿವಮೊಗ್ಗ, ಆಗಸ್ಟ್​​ 30: 2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ (ಸ್ವತಂತ್ರ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯ ಸೋಲು ಕಂಡಿದ್ದ ಮಾಜಿ ಡಿಸಿಎಂ ಕೆ.ಎಸ್​​. ಈಶ್ವರಪ್ಪ, 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ತಾನು ಅಥವಾ ತಮ್ಮ ಮಗ ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ. ಬಿಜೆಪಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈಗ ಬಿಜೆಪಿ ಚುನಾವಣೆಗೆ ಹೋದ್ರೆ ಹೆಚ್ಚು ಸ್ಥಾನ ಗೆಲ್ಲಲ್ಲ. ಬಿಜೆಪಿಯಲ್ಲಿ ಇನ್ನೂ ಹೆಚ್ಚಿನ

ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ

2028ರ ವಿಧಾನಸಭೆ ಚುನಾವಣೆಗೆ ಕೆ.ಎಸ್​​.ಈಶ್ವರಪ್ಪ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ರಾಷ್ಟ್ರಭಕ್ತರ ಬಳಗದಿಂದ ಬೂತ್ ಮಟ್ಟದ ಸಮಾವೇಶಕ್ಕೆ ಶಿವಮೊಗ್ಗ ನಗರದ ಫೇಸ್ ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಲಾಗಿದೆ. ಆ ಮೂಲಕ ಇಂದಿನಿಂದ ಶಿವಮೊಗ್ಗದ 297 ಬೂತ್ ಮಟ್ಟದ ಸಂಘಟನೆ ನಡೆಯಲಿದೆ.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಮಧು ಬಂಗಾರಪ್ಪ​ ಶಾಸಕನಾದ್ರೆ ಕಾವಿ ಬಿಚ್ಚುತ್ತೇನೆ: ಪ್ರಣವಾನಂದ ಸ್ವಾಮೀಜಿ ಸವಾಲು

‘ಈಶ್ವರಪ್ಪ ಕುಟುಂಬಕ್ಕೆ ಮಾತ್ರ ಅನ್ಯಾಯ’

ರಾಷ್ಟ್ರಭಕ್ತ ಬಳಗದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಲಾಗಿದ್ದು, ಎಲೆಕ್ಷನ್​ ಎದುರಿಸಲು ಈಶ್ವರಪ್ಪ ನೇತೃತ್ವದ ರಾಷ್ಟ್ರ ಬಳಗ ರೆಡಿ ಆಗಿದೆ ಎಂದು ಕಾಂತೇಶ್ ಈಶ್ವರಪ್ಪ ತಿಳಿಸಿದ್ದಾರೆ. ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆಲುವಿನಲ್ಲಿ ಈಶ್ವರಪ್ಪ ಬೆಂಬಲಿಗರು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸುಲಭವಾಗಿತ್ತು. ಈ ಹಿನ್ನಲೆಯಲ್ಲಿ ರಾಷ್ಟ್ರಭಕ್ತ ಬಳಗ ಕಾರ್ಯಕರ್ತರಿಂದ ಬೂತ್ ಮಟ್ಟದ ಸಂಘಟನೆ ಆರಂಭಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಪಾಲಿಕೆ ಚುನಾವಣೆ ಕೂಡ ಬರಬಹುದು. ಬಿಜೆಪಿಯಲ್ಲಿ ಎಲ್ಲ ನಾಯಕರ , ಮುಖಂಡರ ಮಕ್ಕಳಿಗೆ ಟಿಕೆಟ್​​ ನೀಡಲಾಗಿದೆ. ಆದರೆ ಈಶ್ವರಪ್ಪ ಕುಟುಂಬಕ್ಕೆ ಮಾತ್ರ ಅನ್ಯಾಯ ಆಗಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಈಶ್ವರಪ್ಪನವರು ಅಥವಾ ತಾನು ಕಣಕ್ಕಿಳಿಯಲಿದ್ದೇವೆ. ಈ ಕುರಿತು ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರು ನಿರ್ಧಾರ ಮಾಡಲಿದ್ದಾರೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:50 pm, Sun, 30 August 26

Follow Us
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ