ಸೋಶಿಯಲ್ ಮೀಡಿಯಾ ಜಾಹೀರಾತು ನಂಬಿ ಫೇಸ್ ಕ್ರೀಮ್ ಬಳಸುವ ಮುನ್ನ ಎಚ್ಚರ! ಮಂಗಳೂರು ಯುವತಿಗೆ ಸಂಕಷ್ಟ

ಸೋಶಿಯಲ್ ಮೀಡಿಯಾ ಜಾಹೀರಾತು ನಂಬಿ ಫೇರ್‌ನೆಸ್ ಕ್ರೀಮ್ ಬಳಸಿದ ಕೇರಳದ 17 ವರ್ಷದ ಬಾಲಕಿ ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿದ್ದಾಳೆ. ಪರೀಕ್ಷೆಯಲ್ಲಿ ಕ್ರೀಮ್‌ನಲ್ಲಿ 12,500 PPM ಪಾದರಸ ಪತ್ತೆಯಾಗಿದೆ. ಈ ಘಟನೆ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವನ್ನು ಸಾರಿದೆ. ಆನ್‌ಲೈನ್ ಜಾಹೀರಾತುಗಳನ್ನು ನಂಬುವ ಮುನ್ನ ಉತ್ಪನ್ನದ ಸುರಕ್ಷತೆ ಪರಿಶೀಲಿಸುವುದು ಮುಖ್ಯ.

ಸೋಶಿಯಲ್ ಮೀಡಿಯಾ ಜಾಹೀರಾತು ನಂಬಿ ಫೇಸ್ ಕ್ರೀಮ್ ಬಳಸುವ ಮುನ್ನ ಎಚ್ಚರ! ಮಂಗಳೂರು ಯುವತಿಗೆ ಸಂಕಷ್ಟ
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Nov 23, 2026 | 2:33 PM

ಮುಖ್ಯಾಂಶಗಳು

  • ಇನ್‌ಸ್ಟಾಗ್ರಾಂ ಜಾಹೀರಾತು ನಂಬಿ ಫೇರ್‌ನೆಸ್ ಕ್ರೀಮ್ ಬಳಸಿದ 17ರ ಬಾಲಕಿ.
  • ಕ್ರೀಮ್ ಪರೀಕ್ಷೆಯಲ್ಲಿ 12,500 PPM ಪಾದರಸ ಪತ್ತೆಯಾಗಿ ಆತಂಕ ಸೃಷ್ಟಿ.
  • ಪಾದರಸದಿಂದ ಕಿಡ್ನಿ ಹಾನಿ, ಕೇರಳ ಸರ್ಕಾರದಿಂದ ಪ್ರಕರಣದ ತನಿಖೆಗೆ ಸೂಚನೆ.

ಮಂಗಳೂರು, ನವೆಂಬರ್ 23: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳನ್ನು ನಂಬಿ ಖರೀದಿಸುವ ಮುನ್ನ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ಗಳ ಪ್ರಚಾರ ನೋಡಿ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿಯೊಬ್ಬಳು ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ಆತಂಕ ಮೂಡಿಸಿದೆ. ಮೊಡವೆ, ಕಪ್ಪು ಕಲೆ ಹಾಗೂ ಪಿಗ್ಮೆಂಟೇಷನ್ ನಿವಾರಣೆಯಾಗುತ್ತದೆ ಎಂಬ ಜಾಹೀರಾತು ನಂಬಿ ಸುಮಾರು ಒಂದು ವರ್ಷ ಕ್ರೀಮ್ ಬಳಸಿದ್ದ ಮಂಗಳೂರಿನ ಬಾಲಕಿಯ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದೆ. ಈ ಘಟನೆ ಆನ್‌ಲೈನ್ ಸೌಂದರ್ಯ ಉತ್ಪನ್ನಗಳ ಬಳಕೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕ್ರೀಮ್‌ನಲ್ಲಿ 12,500 PPM ಪಾದರಸ ಪತ್ತೆ!

ವರದಿಗಳ ಪ್ರಕಾರ, ಬಾಲಕಿ ಬಳಸುತ್ತಿದ್ದ ಫೇರ್‌ನೆಸ್ ಕ್ರೀಮ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಬರೋಬ್ಬರಿ 12,500 PPM ಪ್ರಮಾಣದ ಮರ್ಕ್ಯುರಿ (ಪಾದರಸ) ಅಂಶ ಪತ್ತೆಯಾಗಿದೆ. ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸದ ಅನುಮತಿಸಲಾದ ಮಿತಿ 1 PPMಗಿಂತ ಕಡಿಮೆ ಎಂದು ತಿಳಿಸಲಾಗಿದೆ. ಅಂದರೆ, ಈ ಕ್ರೀಮ್‌ನಲ್ಲಿ ಪತ್ತೆಯಾದ ಪಾದರಸದ ಪ್ರಮಾಣ ಅನುಮತಿಸಲಾದ ಮಿತಿಗಿಂತ ಹಲವು ಪಟ್ಟು ಹೆಚ್ಚಾಗಿದೆ.

Loading...

ಪಾದರಸದಂತಹ ವಿಷಕಾರಿ ಲೋಹಗಳು ದೇಹಕ್ಕೆ ಸೇರಿದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಬಾಲಕಿಯ ಕಿಡ್ನಿಯ ಫಿಲ್ಟರಿಂಗ್ ಘಟಕಗಳಿಗೆ ಹಾನಿಯಾಗಿದ್ದು, ಮೆಂಬ್ರೇನಸ್ ನೆಫ್ರೋಪತಿ ಎಂಬ ಗಂಭೀರ ಕಾಯಿಲೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾಲುಗಳಲ್ಲಿ ಊತ, ರಕ್ತದೊತ್ತಡದಲ್ಲಿ ಬದಲಾವಣೆ ಹಾಗೂ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಸೌಂದರ್ಯ ಉತ್ಪನ್ನ ಖರೀದಿಸುವ ಮುನ್ನ ಎಚ್ಚರಿಕೆ ಅಗತ್ಯ!

ಈ ಘಟನೆ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ತನಿಖೆಗೆ ಸೂಚನೆ ನೀಡಿದ್ದು, ಮಕ್ಕಳ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಉತ್ಪನ್ನದ ಗುಣಮಟ್ಟ, ಅದರಲ್ಲಿರುವ ರಾಸಾಯನಿಕ ಅಂಶಗಳು ಹಾಗೂ ಜಾಹೀರಾತುಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಯಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಅಥವಾ ಇನ್‌ಫ್ಲುಯೆನ್ಸರ್‌ಗಳು ಪ್ರಚಾರ ಮಾಡುತ್ತಾರೆ ಎಂಬ ಕಾರಣಕ್ಕೆ ಯಾವುದೇ ಕ್ರೀಮ್ ಅಥವಾ ಸೌಂದರ್ಯವರ್ಧಕ ಉತ್ಪನ್ನವನ್ನು ಸುರಕ್ಷಿತವೆಂದು ಭಾವಿಸಬಾರದು. ಖರೀದಿಸುವ ಮೊದಲು ಉತ್ಪನ್ನದ ಲೇಬಲ್, ತಯಾರಕರ ವಿವರ, ಪದಾರ್ಥಗಳ ಪಟ್ಟಿ, ಪರವಾನಗಿ ಮತ್ತು ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಅತಿವೇಗದಲ್ಲಿ ಚರ್ಮದ ಬಣ್ಣ ಬದಲಾಯಿಸುವ ಅಥವಾ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಭರವಸೆ ನೀಡುವ ಉತ್ಪನ್ನಗಳ ಬಗ್ಗೆ ಎಚ್ಚರಿಕೆ ಇರಲಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us