ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ‘ಅರಣ್ಯ ವೀಕ್ಷಕ’ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ!

ಕರ್ನಾಟಕ ಅರಣ್ಯ ಇಲಾಖೆಯು 750 'ಅರಣ್ಯ ವೀಕ್ಷಕ' ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. SSLC ಪಾಸಾದವರಿಗೆ ಇದೊಂದು ಉತ್ತಮ ಸರ್ಕಾರಿ ನೌಕರಿ ಅವಕಾಶ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ, ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ಸೆಪ್ಟೆಂಬರ್ 7 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ!
KFD ನೇಮಕಾತಿ
Edited By:

Updated on: Sep 02, 2026 | 3:09 PM

ಕರ್ನಾಟಕ ಅರಣ್ಯ ಇಲಾಖೆಯು ಖಾಲಿ ಇರುವ 750 ‘ಅರಣ್ಯ ವೀಕ್ಷಕ’ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರಿ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ ಎಂಬುದು ಅಭ್ಯರ್ಥಿಗಳಿಗೆ ಮತ್ತೊಂದು ವಿಶೇಷ ಲಾಭವಾಗಿದೆ. ಹಿಂದಿನ ಅಧಿಸೂಚನೆಯಂತೆ ಆಗಸ್ಟ್ 31, 2026 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ಸರ್ವರ್ ದಟ್ಟಣೆಯಿಂದಾಗಿ ಸೆಪ್ಟೆಂಬರ್ 07 ರವರೆಗೆ ವಿಸ್ತರಿಸಲಾಗಿದೆ.

ಖಾಲಿ ಹುದ್ದೆಗಳ ವಿವರ:

750 ಅರಣ್ಯ ವೀಕ್ಷಕ ಹುದ್ದೆಗಳನ್ನು ರಾಜ್ಯದ ವಿವಿಧ ವೃತ್ತಗಳಲ್ಲಿ ಹಂಚಿಕೆ ಮಾಡಲಾಗಿದೆ. ಚಾಮರಾಜನಗರ ವೃತ್ತದಲ್ಲಿ ಗರಿಷ್ಠ 169 ಹುದ್ದೆಗಳಿದ್ದರೆ, ಮೈಸೂರಿನಲ್ಲಿ 120, ಬೆಂಗಳೂರಿನಲ್ಲಿ 70, ಬಳ್ಳಾರಿಯಲ್ಲಿ 62 ಹಾಗೂ ಕೆನರಾದಲ್ಲಿ 60 ಹುದ್ದೆಗಳಿವೆ. ಉಳಿದಂತೆ ಚಿಕ್ಕಬಳ್ಳಾಪುರದಲ್ಲಿ 56, ಮಂಗಳೂರಿನಲ್ಲಿ 54, ಬೆಳಗಾವಿಯಲ್ಲಿ 42, ಶಿವಮೊಗ್ಗದಲ್ಲಿ 38, ಕೊಡಗಿನಲ್ಲಿ 32, ಹಾಸನದಲ್ಲಿ 30, ಧಾರವಾಡದಲ್ಲಿ 12 ಮತ್ತು ಕಲಬುರಗಿಯಲ್ಲಿ 4 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಶುಲ್ಕ:

ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10th Standard (SSLC) ಉತ್ತೀರ್ಣರಾಗಿರಬೇಕು. ಕರ್ನಾಟಕ ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿರುತ್ತದೆ.

ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಈ ಹುದ್ದೆಗಳ ಆಯ್ಕೆಗೆ ಯಾವುದೇ ಲಿಖಿತ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಅಭ್ಯರ್ಥಿಗಳು 10th Standard (SSLC) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಂತರ ಕಾಯಿಕ ಪರೀಕ್ಷೆ (Physical Test) ಮತ್ತು ವೈದ್ಯಕೀಯ ತಪಾಸಣೆ (Medical Test) ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು KFD ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಬೇಕು. ನಂತರ ‘KFD Forest Observer Apply Online’ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಹಾಗೂ ದಾಖಲೆಗಳು ಮತ್ತು ಭಾವಚಿತ್ರವನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು Submit ಮಾಡಿ. ಕೊನೆಯ ದಿನಾಂಕವಾದ ಸೆಪ್ಟೆಂಬರ್ 07 ರೊಳಗೆ ಅರ್ಜಿ ಸಲ್ಲಿಸಿ, ಪ್ರಿಂಟ್‌ಔಟ್ ಅಥವಾ application number ಅನ್ನು ಕಾಯ್ದಿರಿಸಿಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:17 pm, Wed, 2 September 26

Loading...
Unable to load recommendations.
Follow Us