AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಚನ್, ಅಮೀರ್​​​ ಖಾನ್​​​​​ರಿಂದ ಖರೀದಿಸಿದ್ದ ಕಾರುಗಳಿಗೆ ಕೊನೆಗೂ ಟ್ಯಾಕ್ಸ್ ಕಟ್ಟಿದ ಕೆಜಿಎಫ್ ಬಾಬು

ಅಮಿತಾಭ್ ಬಚ್ಚನ್ ಮತ್ತು ಅಮೀರ್ ಖಾನ್ ಅವರಿಂದ ಖರೀದಿಸಿದ ಎರಡು ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳಿಗೆ ಕೆಜಿಎಫ್ ಬಾಬು ಕೊನೆಗೂ ಸುಮಾರು 38 ಲಕ್ಷ ರೂ. ತೆರಿಗೆ ಪಾವತಿಸಿದ್ದಾರೆ. ಆರ್ಟಿಒ ಅಧಿಕಾರಿಗಳಿಗೆ ಡಿಡಿ ಮೂಲಕ ತೆರಿಗೆ ಪಾವತಿಸಲಾಗಿದೆ. ಒಂದೊಂದು ಕಾರಿನ ಹಿಂದಿದೆ ಒಂದೊಂದು ಕತೆ ಇದೆ.

ಬಚನ್, ಅಮೀರ್​​​ ಖಾನ್​​​​​ರಿಂದ ಖರೀದಿಸಿದ್ದ ಕಾರುಗಳಿಗೆ ಕೊನೆಗೂ ಟ್ಯಾಕ್ಸ್ ಕಟ್ಟಿದ ಕೆಜಿಎಫ್ ಬಾಬು
ಕೆಜಿಎಫ್ ಬಾಬು
ಶಾಂತಮೂರ್ತಿ
| Edited By: |

Updated on: Jul 23, 2025 | 1:28 PM

Share

ಬೆಂಗಳೂರು, ಜುಲೈ 23: ಬಾಲಿವುಡ್​ ನಟರಾದ ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್​​ರಿಂದ ಖರೀದಿಸಿದ್ದ ಐಷಾರಾಮಿ ಕಾರುಗಳಿಗೆ ಕೆಜಿಎಫ್​​ ಬಾಬು (KGF Babu) ಕೊನೆಗೂ ತೆರಿಗೆ (tax) ಕಟ್ಟಿದ್ದಾರೆ. ಬಚನ್ ಬಳಿ ಖರೀದಿಸಿದ ಕಾರಿಗೆ 18 ಲಕ್ಷದ 53 ಸಾವಿರ ರೂ ಮತ್ತು ಆಮೀರ್​ ಖಾನ್ ಬಳಿ ಖರೀದಿಸಿದ ಕಾರಿಗೆ 19.73 ಲಕ್ಷ ರೂ. ಹಣವನ್ನು ಆರ್​ಟಿಒ ಅಧಿಕಾರಿಗಳಿಗೆ ಡಿಡಿ ಮೂಲಕ ಟ್ಯಾಕ್ಸ್ ಪಾವತಿಸಿದ್ದಾರೆ.

ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನಲೆ ಬುಧವಾರ ಬೆಳಿಗ್ಗೆ ವಸಂತನಗರದಲ್ಲಿರುವ ಕೆಜಿಎಫ್​​ ಬಾಬು ರುಕ್ಸಾನಾ ಪ್ಯಾಲೇಸ್ ನಿವಾಸದ​​ ಮೇಲೆ ಆರ್​ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ನಟರು ಬಳಸಿದ್ದ ರೋಲ್ಸ್​​ ರಾಯ್ಸ್​​​ ಸೇರಿ ಹಲವು ಐಷಾರಾಮಿ ಕಾರುಗಳನ್ನು ಬಾಬು ಹೊಂದಿದ್ದರು.

ಒಂದೊಂದು ಕಾರಿನ ಹಿಂದಿದೆ ಒಂದೊಂದು ಕತೆ

ಸೆಲೆಬ್ರಿಟಿಗಳು ಬಳಸುವ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದ ಕೆಜಿಎಫ್ ಬಾಬು, ಅಮಿತಾಭ್ ಬಚ್ಚನ್​ರಿಂದ MH 11 AX 1 ರೋಲ್ಸ್ ರಾಯ್ ಮತ್ತು ಆಮಿರ್ ಖಾನ್​​ ಒಂದು ವರ್ಷ ಬಳಸಿದ್ದ MH 02 BB 2 ರೋಲ್ಸ್ ರಾಯ್ ಕಾರು ಕೂಡ ಖರೀದಿಸಿದ್ದರು. ಅಷ್ಟೇ ಅಲ್ಲದೆ ಮಗಳ ಮಗುವಿಗಾಗಿ ಅಂದರೆ ಮೊಮ್ಮಗಳಿಗಾಗಿ ವೇಲ್ಫೇರ್ ಕಾರ್ ಖರೀದಿ ಮಾಡಿದ್ದರು. ಹೀಗೆ ಒಂದೊಂದು ಕಾರಿನ ಹಿಂದಿದೆ ಒಂದೊಂದು ಕತೆ ಇದೆ.

ಇದನ್ನೂ ಓದಿ
Image
7000 ಕೋಟಿ ಒಡೆಯ KGF ಬಾಬು ಬಳಿ ಯಾವೆಲ್ಲಾ ಕಾರುಗಳಿವೆ ನೋಡಿ
Image
ಕೇವಲ 3000 ರೂ.ನಿಂದ 7000 ಕೋಟಿ ದುಡಿದ ಬಾಬು ಪ್ಯಾಲೇಸ್ ಹೇಗಿದೆ ನೋಡಿ

ಗೊತ್ತಿಲ್ಲದೆ ನಾನು ತಪ್ಪು ಮಾಡಿದ್ದೇನೆ ಎಂದ ಕೆಜಿಎಫ್ ಬಾಬು

ಈ ಬಗ್ಗೆ ಕೆಜಿಎಫ್ ಬಾಬು ಹೇಳಿಕೆ ನೀಡಿದ್ದು, ಮಹಾರಾಷ್ಟ್ರ ರಿಜಿಸ್ಟ್ರೇಷನ್​​ನ ಎರಡು ರೋಲ್ಸ್ ರಾಯ್ ಕಾರುಗಳಿದ್ದವು. ಆಮಿರ್ ಖಾನ್ ಹಾಗೂ ಅಮಿತಾಭ್ ಬಚ್ಚನ್​​ ಅವರ ಎರಡು ಕಾರು ಖರೀದಿ‌ ಮಾಡಿದ್ದೆ. ಮಹಾರಾಷ್ಟ್ರದಲ್ಲಿ ಲೈಫ್ ಟೈಕ್ಸ್ ಕಟ್ಟಿದ್ದೆ. ಆದರೆ ಕರ್ನಾಟಕದಲ್ಲೂ ಟ್ಯಾಕ್ಸ್ ಕಟ್ಟಬೇಕು ಅಂದರು. ನನಗೆ ಈ ಟ್ಯಾಕ್ಸ್ ವಿಚಾರ ಗೊತ್ತಿರಲಿಲ್ಲ. ಗೊತ್ತಿಲ್ಲದೆ ನಾನು ತಪ್ಪು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಬಾಬುಗೆ ಮುಳುವಾಯ್ತು ಅಮಿತಾಭ್, ಆಮಿರ್​ ಬಳಿ ಖರೀದಿಸಿದ ಐಷಾರಾಮಿ ಕಾರುಗಳು

ಆರ್​ಟಿಓ ಅಧಿಕಾರಿಗಳು ನನಗೆ ಮನವರಿಕೆ ಮಾಡಿದರು. ಹಾಗಾಗಿ ಆಮೀರ್ ಖಾನ್ ಅವರಿಂದ ಖರೀದಿಸಿದ ಕಾರಿಗೆ 19 ಲಕ್ಷದ 73 ರೂ. ಟ್ಯಾಕ್ಸ್ ಕಟ್ಟಲಾಗಿದೆ. ಅಮಿತಾಭ್ ಬಚ್ಚನ್​​ರಿಂದ ಖರೀದಿಸಿದ ಕಾರಿಗೆ 18 ಲಕ್ಷ 53 ಸಾವಿರ ರೂ ಟ್ಯಾಕ್ಸ್ ಕಟ್ಟಲಾಗಿದೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ