KIMS Recruitment 2026: ಕಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಬೆಂಗಳೂರಿನ ವಿ.ವಿ.ಪುರಂನಲ್ಲಿರುವ 27 ತಾಂತ್ರಿಕ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಇಸಿಜಿ, ಲ್ಯಾಬ್, OT ಟೆಕ್ನಿಷಿಯನ್ ಮತ್ತು ಕ್ಲರ್ಕ್ ಸೇರಿದಂತೆ ಹಲವು ಹುದ್ದೆಗಳಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಜುಲೈ 22 ರೊಳಗೆ ತಮ್ಮ ಬಯೋಡೇಟಾವನ್ನು ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ ಆಡಳಿತ ಕಚೇರಿಗೆ ಸಲ್ಲಿಸಬೇಕು.

KIMS Recruitment 2026: ಕಿಮ್ಸ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಕಿಮ್ಸ್ ಆಸ್ಪತ್ರೆಯಲ್ಲಿ ಉದ್ಯೋಗವಕಾಶ

Updated on: Jul 21, 2026 | 1:11 PM

ಮುಖ್ಯಾಂಶಗಳು

  • ಬೆಂಗಳೂರಿನ ವಿ.ವಿ.ಪುರಂನಲ್ಲಿರುವ 27 ತಾಂತ್ರಿಕ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ
  • ಇಸಿಜಿ, ಲ್ಯಾಬ್, OT ಟೆಕ್ನಿಷಿಯನ್ ಮತ್ತು ಕ್ಲರ್ಕ್ ಸೇರಿದಂತೆ ಹಲವು ಹುದ್ದೆಗೆ ನೇಮಕಾತಿ
  • ಅರ್ಹ ಅಭ್ಯರ್ಥಿಗಳು ಜುಲೈ 22 ರೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ‘ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ (KIMSH) ಅರ್ಹ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಒಕ್ಕಲಿಗರ ಸಂಘದ ಆಡಳಿತಕ್ಕೊಳಪಟ್ಟ ಈ ಆಸ್ಪತ್ರೆಯಲ್ಲಿ ಖಾಲಿ ಇರುವ ಒಟ್ಟು 27 ತಾಂತ್ರಿಕ ಹಾಗೂ ಕ್ಲರ್ಕ್ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು, ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ.

ಖಾಲಿ ಇರುವ ಹುದ್ದೆಗಳು ಮತ್ತು ಅರ್ಹತೆಗಳು:

  • ಇಸಿಜಿ ಟೆಕ್ನಿಷಿಯನ್ (01 ಹುದ್ದೆ): B.Sc Echo/Cardiology ಪೂರ್ಣಗೊಳಿಸಿರಬೇಕು.
  • ಬೆಡ್ ಸೈಡ್ ಲ್ಯಾಬ್ ಟೆಕ್ನಿಷಿಯನ್ (08 ಹುದ್ದೆಗಳು): B.Sc ಅಥವಾ M.Sc ಲ್ಯಾಬ್ ಟೆಕ್ನಿಷಿಯನ್ ಅರ್ಹತೆ ಹೊಂದಿರಬೇಕು.
  • ಮ್ಯಾನಿಫೋಲ್ಡ್ ಆಪರೇಟರ್ಸ್ (04 ಹುದ್ದೆಗಳು): ಮ್ಯಾನಿಫೋಲ್ಡ್ ಆಪರೇಟರ್ ಸರ್ಟಿಫಿಕೇಟ್ ಕೋರ್ಸ್ ಮುಗಿಸಿರಬೇಕು.
  • ಇಇಜಿ/ಇಎನ್ಎಮ್‌ಜಿ ಟೆಕ್ನಿಷಿಯನ್ (01 ಹುದ್ದೆ): B.Sc EEG Technician/ Neurophysiology ಅರ್ಹತೆ ಹೊಂದಿರಬೇಕು.
  • ಒಟಿ / ಅನೆಸ್ಥೇಷಿಯಾ ಟೆಕ್ನಿಷಿಯನ್ (04 ಹುದ್ದೆಗಳು): B.Sc OT Technician ಓದಿರಬೇಕು.
  • ಕೋಡಿಂಗ್ ಕ್ಲರ್ಕ್ (03 ಹುದ್ದೆಗಳು): ಮೆಡಿಕಲ್ ಕೋಡಿಂಗ್‌ನಲ್ಲಿ 5 ವರ್ಷಗಳ ಅನುಭವದೊಂದಿಗೆ ಡಿಪ್ಲೊಮಾ ಹೊಂದಿರಬೇಕು.
  • ರೆಕಾರ್ಡ್ ಕ್ಲರ್ಕ್ (06 ಹುದ್ದೆಗಳು): ಮೆಡಿಕಲ್ ರೆಕಾರ್ಡ್ ಮ್ಯಾನೇಜ್‌ಮೆಂಟ್‌ನಲ್ಲಿ 5 ವರ್ಷಗಳ ಅನುಭವದೊಂದಿಗೆ ಪದವಿ (Degree) ಹೊಂದಿರಬೇಕು.

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ:

ಮ್ಯಾನಿಫೋಲ್ಡ್ ಆಪರೇಟರ್ ಹುದ್ದೆಯನ್ನು ಹೊರತುಪಡಿಸಿ, ಉಳಿದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು 22 ರಿಂದ 30 ವರ್ಷಗಳ ಒಳಗಿರಬೇಕು. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಾದವರಿಗೆ ದೂರವಾಣಿ ಅಥವಾ ಇ-ಮೇಲ್ ಮುಖಾಂತರ ಸಂದರ್ಶನದ (Interview) ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಅರ್ಜಿ ಸಲ್ಲಿಸುವ ವಿವರಗಳು:

ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಮತ್ತು ಎಲ್ಲಾ ಅಗತ್ಯ ಶೈಕ್ಷಣಿಕ/ಅನುಭವ ಪ್ರಮಾಣಪತ್ರಗಳ ದೃಢೀಕರಿಸಿದ ನಕಲು ಪ್ರತಿಗಳನ್ನು (Attested Copies) ಭರ್ತಿ ಮಾಡಿ ನೇರವಾಗಿ ಜುಲೈ 22ರಂದು ಸಂಜೆ 05:00 ಗಂಟೆಯೊಳಗೆ ಕಿಮ್ಸ್ ಆಸ್ಪತ್ರೆಯ ಆಡಳಿತ ಕಚೇರಿಗೆ ತಲುಪಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:

ಆಡಳಿತ ಕಚೇರಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (KIMSH), ಕೆ.ಆರ್. ರಸ್ತೆ, ವಿ.ವಿ.ಪುರಂ, ಬೆಂಗಳೂರು – 560 004.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:08 pm, Tue, 21 July 26

Follow Us