ಕೊಡಗು: ಹುಲಿ ಸೆರೆಗೆ ಹಸು ಕಟ್ಟಿದ ಅರಣ್ಯ ಸಿಬ್ಬಂದಿ; ಅಮಾನವೀಯ ಕ್ರಮಕ್ಕೆ ಗ್ರಾಮಸ್ಥರ ಆಕ್ರೋಶ
3 ದಿನಗಳಿಂದ ಹುಲ್ಲು ನೀರಿಲ್ಲದೆ ಹಸುಗಳು ಪರದಾಟ ನಡೆಸುತ್ತಿವೆ. ಇದನ್ನು ಕಂಡ ಗ್ರಾಮಸ್ಥರು ಹಸುಗಳಿಗೆ ಹುಲ್ಲು ಮತ್ತು ನೀರು ನೀಡಿದ್ದಾರೆ. ಇನ್ನು ನಾಲ್ಕು ಕಡೆಗಳಲ್ಲಿ ಹಸುಗಳನ್ನು ಕಟ್ಟಿರುವ ಅರಣ್ಯ ಸಿಬ್ಬಂದಿಗಳು ಹಸುಗಳ ಬಳಿ ಅಳವಡಿಸಿದ ಸಿಸಿ ಕ್ಯಾಮರಾ ಕೂಡ ಡೆಡ್ ಆಗಿದೆ. ಹೀಗಾಗಿ ಹಸುಗಳನ್ನ ಗೋಶಾಲೆಗೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಡಗು: ಜಿಲ್ಲೆಯಲ್ಲಿ ಹಲವು ದಿನಗಳಿಂದ ಹುಲಿ ಹಾವಳಿ ಹೆಚ್ಚಾಗಿದೆ. ಹುಲಿಯಿಂದ ಗ್ರಾಮಸ್ಥರನ್ನು ರಕ್ಷಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ನಾನಾ ರೀತಿಯ ಕಸರತ್ತುಗಳನ್ನು ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಆದರೆ, ಇದೀಗ ಹುಲಿಯನ್ನು ಹೇಗಾದರೂ ಹಿಡಿಯಲೇ ಬೇಕೆಂದು ಪಣ ತೊಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಡಿರುವ ಪ್ರಯತ್ನವೊಂದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದೆ. ಅರಣ್ಯ ಅಧಿಕಾರಿಗಳ ಈ ನಡೆಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಕಾಡಿನಲ್ಲಿ ಮೂರು ದಿನಗಳ ಹಿಂದೆ ಹುಲಿಗಳನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಾಲ್ಕು ಹಸುಗಳನ್ನು ಕಟ್ಟಿ, ಸಿಸಿ ಕ್ಯಾಮರಾ ಅಳವಡಿಸಿ ಹೋಗಿದ್ದಾರೆ ಹಾಗೂ ನಂತರ ಅತ್ತಕಡೆ ತಿರುಗಿಯೂ ನೋಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳ ಈ ಅಮಾನವೀಯ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
3 ದಿನಗಳಿಂದ ಹುಲ್ಲು ನೀರಿಲ್ಲದೆ ಹಸುಗಳು ಪರದಾಟ ನಡೆಸುತ್ತಿವೆ. ಇದನ್ನು ಕಂಡ ಗ್ರಾಮಸ್ಥರು ಹಸುಗಳಿಗೆ ಹುಲ್ಲು ಮತ್ತು ನೀರು ನೀಡಿದ್ದಾರೆ. ಇನ್ನು ನಾಲ್ಕು ಕಡೆಗಳಲ್ಲಿ ಹಸುಗಳನ್ನು ಕಟ್ಟಿರುವ ಅರಣ್ಯ ಸಿಬ್ಬಂದಿಗಳು ಹಸುಗಳ ಬಳಿ ಅಳವಡಿಸಿದ ಸಿಸಿ ಕ್ಯಾಮರಾ ಕೂಡ ಡೆಡ್ ಆಗಿದೆ. ಹೀಗಾಗಿ ಹಸುಗಳನ್ನ ಗೋಶಾಲೆಗೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಅರಣ್ಯ ಸಿಬ್ಬಂದಿ ಇಟ್ಟ ಬೋನಿಗೆ ಬಿದ್ದ ಚಿರತೆ: ತುಮಕೂರು ತಾಲೂಕಿನ ಕ್ಯಾತಸಂದ್ರ ಟೋಲ್ನ ನವಿಲು ಗುಡ್ಡ ಬಳಿ ಅರಣ್ಯ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಲವು ದಿನಗಳಿಂದ ಜನರಿಗೆ ಆತಂಕ ಮೂಡಿಸಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿತ್ತು, ಸದ್ಯ ಈ ಬೋನಿಗೆ ಇಂದು ಮುಂಜಾನೆ ಚಿರತೆ ಸೆರೆಯಾಗಿದೆ. ಕ್ಯಾತಸಂದ್ರ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೋನಿಗೆ ಬಿದ್ದ ಚಿರತೆ
ತಮಿಳುನಾಡಿನಲ್ಲಿ ಆನೆ ಸೆರೆ: ಆನೇಕಲ್ನ ತಮಿಳುನಾಡಿನಲ್ಲಿ ಮೂರು ಮಂದಿಯನ್ನ ಬಲಿ ಪಡೆದಿದ್ದ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಮೂರು ಜನರನ್ನು ಆನೆ ಬಲಿ ಪಡೆದ ನಂತರದಲ್ಲಿ ಭಯ ಭೀತರಾದ ಕೃಷ್ಣಗಿರಿ ಜಿಲ್ಲೆ ಹೊಸೂರಿನ ಸುತ್ತಮುತ್ತ ಜನರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪಶುವೈದ್ಯಕೀಯ ತಂಡದ ಜೊತೆಗೂಡಿ ಆನೆ ಜಾಡು ಪತ್ತೆ ಮಾಡಿದ್ದಾರೆ. ನಂತರ ತಿರುಚಿಪಲ್ಲಿ ಅರಣ್ಯದಲ್ಲಿ ಆನೆ ಕಂಡಿದ್ದು, ಸದ್ಯ ಸೆರೆ ಹಿಡಿದಿದ್ದಾರೆ. ಸದ್ಯ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಆನೆಯನ್ನು ಸೆರೆ ಹಿಡಿದ ದೃಶ್ಯ
ಇದನ್ನೂ ಓದಿ:
Nagarhole National Park: ಕರಿ ಚಿರತೆ ಮರವೇರುವ ಅಪರೂಪದ ದೃಶ್ಯ ನಾಗರಹೊಳೆ ಕಬಿನಿಯಲ್ಲಿ ಕ್ಯಾಮೆರಾದಲ್ಲಿ ಸೆರೆ..