ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ

ಅಣ್ಣನ ಪ್ರೀತಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಅಕ್ಷರ ರೂಪದಲ್ಲಿ ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ತಂಗಿಯ ಪಾಲಿಗೆ ಅಣ್ಣ ಎಲ್ಲವೂ ಆಗಿರುತ್ತಾನೆ. ಅವಳ ನೋವಿಗೆ ಮಿಡಿಯುತ್ತಾನೆ, ಕಣ್ಣೀರಿಗೆ ಬೆರಳುಗಳಾಗುತ್ತಾನೆ. ಸುಖದಲ್ಲಿ ನಕ್ಕು, ದುಃಖದಲ್ಲಿ ಸಾಂತ್ವನದ ನುಡಿಗಳಾಗುತ್ತಾನೆ. ಹೀಗೆ ಅಣ್ಣ ತಂಗಿ ಸಂಬಂಧ ತಂದೆ-ತಾಯಿಯ ಸಂಬಂಧದಷ್ಟೇ ಆಳವಾಗಿರುತ್ತೆ. ಆದ್ರೆ, ಮಡಿಕೇರಿಯಲ್ಲಿ ಅಣ್ಣ ತಂಗಿ ನಡುವೆ ಪ್ರೀತಿ ಚಿಗುರಿದ್ದು, ಅದು ಲಿವಿಂಗ್ ರಿಲೇಶನ್ ಶಿಪ್ ಹಂತಕ್ಕೂ ಹೋಗಿದೆ. ಆದ್ರೆ, ಇದೀಗ ದುರಂತವೇ ನಡೆದುಹೋಗಿದೆ.

ಮಡಿಕೇರಿ ಡಬಲ್ ಮರ್ಡರ್​​​​ ಕೇಸಿಗೆ ಬಿಗ್ ಟ್ವಿಸ್ಟ್:ಹೆಂಡ್ತಿ ಇದ್ರೂ ತಂಗಿ ಸಂಗ ಬೆಳೆಸಿದ್ದ ಅಣ್ಣ
ಹತ್ಯೆಯಾದ ಕುಞರಾಮ, ಯಶೋಧ ಹಾಗೂ ಕೊಲೆಗಾರ ಚಂದು
Edited By:

Updated on: Mar 12, 2026 | 3:11 PM

ಕೊಡಗು, (ಮಾರ್ಚ್ 12): ಮಡಿಕೇರಿ (Madikeri) ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ (Kodagu Double Murder case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಶೋಧಾ(45) ಹಾಗೂ ಕುಂಞರಾಮ(47) ಕೊಲೆಯಾದ ಜೋಡಿ. ಈ ಡಬಲ್ ಮರ್ಡರ್​​​ ಕುಂದಚೇರಿ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಇದೀಗ ಪೊಲೀಸರ ಪ್ರಾಥನಿಕ ತನಿಖೆಯಲ್ಲಿ ಈ ಜೋಡಿ ಕೊಲೆ ರಹಸ್ಯ ಬಯಲಿಗೆ ಬಂದಿದೆ.  ಹೌದು.. ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ. ಯಶೋಧಾ ಮತ್ತು ಕುಂಞರಾಮ ಇವರಿಬ್ಬರು ಸಂಬಂಧದಲ್ಲಿ ಅಣ್ಣ ತಂಗಿ. ಆದ್ರೆ, ಈ ಇವರಿಬ್ಬರು ಪವಿತ್ರ ಸಂಬಂಧವನ್ನೇ ಮೀರಿ ಅಕ್ರಮ ಸಂಬಂಧ ಹೊಂದಿದ್ದು, ಬಳಿಕ ಇಬ್ಬರು ಲಿವಿಂಗ್ ಟುಗೆದರ್​​​​ನಲ್ಲಿದ್ದರು. ಇನ್ನು ಹಂತಕ ಚಂದ್ರು ಸಹ ಯಶೋಧಾ ಮತ್ತು ಕುಂಞರಾಮಗೆ ಸಹೋದರನಾಗಬೇಕು. ಆದ್ರೆ,  ಯಶೋಧಾ ಮತ್ತು ಕುಂಞರಾಮ ಅಕ್ರಮ ಸಂಬಂಧ ಹೊಂದಿದ್ದರಿಂದ ಆಕ್ರೋಶಗೊಂಡು  ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಅಣ್ಣ-ತಂಗಿ ನಡುವೆ ಅಕ್ರಮ ಸಂಬಂಧ

ನಿನ್ನೆ (ಮಾರ್ಚ್ 11) ಇವರ ಊರಲ್ಲಿ ನಾಮಕರಣ ಸಮಾರಂಭವೊಂದು ನಡೆದಿದೆ. ಅಲ್ಲಿಗೆ ತೆರಳಿದ್ದ ಈ ಮಂದಿ ಗುಂಡು ತುಂಡು ಪಾರ್ಟಿ ಮಾಡಿ ತಮ್ಮ ತಮ್ಮ ಮನೆಗೆ ಮರಳಿದ್ದಾರೆ. ಆದ್ರೆ ರಾತ್ರಿ ಚಂದು ಎಂಬಾತನಿಗೆ ಅದೇನಾಯ್ತೋ ಗೊತ್ತಿಲ್ಲ. ಮಚ್ಚು ಹಿಡಿದು ನೇರವಾಗಿ ತನ್ನ ಮಲಸಹೋದರಿ ಮನೆಗೆ ತೆರಳಿ ಯಶೋಧಳ ಮತ್ತು ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕುಂಞರಾಮನನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಮಚ್ಚಿನೇಟಿಗೆ ಇಬ್ಬರೂ ಮಲಗಿದ್ದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನು ಎರೆಡು ದೇಹಗಳು ಉರುಳಲು ಕಾರಣ ಮಾತ್ರ ಬಹಳ ವಿಚಿತ್ರವಾಗಿದೆ. ಕೊಲೆಯಾದ ಯಶೋಧ, ಕುಂಞರಾಮ ಮತ್ತು ಕೊಲೆ ಆರೋಪಿ ಚಂದು ಸಂಬಂಧದಲ್ಲಿ ಸಹೋದರಿ ಸಹೋದರರು ಆಗಬೇಕು. ಹೇಗಂದ್ರೆ ಕೊಲೆಯಾದ ಯಶೋಧಳ ತಾಯಿ, ಕುಂಞಇರಾಮನ ತಾಯಿ ನಾರಾಯಣೀ ಮತ್ತು ಕೊಲೆ ಆರೋಪಿ ಚಂದುವಿನ ತಾಯಿ ಸ್ವಂತ ಅಕ್ಕತಂಗಿಯರು. ಆದ್ರೆ, ಇಲ್ಲಿ ಸ್ವಂತ ಅಕ್ಕ ತಂಗಿಯರ ಮಕ್ಕಳ ಮಧ್ಯೆಯೇ ಅಕ್ರಮ ಸಂಬಂಧ ಬೆಳೆದಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ: ಡಬಲ್​​ ಮರ್ಡರ್​​ಗೆ ಬೆಚ್ಚಿಬಿದ್ದ ಭಾಗಮಂಡಲ

ಮಲಗಿದ್ದ ಅಣ್ಣ-ತಂಗಿ ಮೇಲೇಳಲೇ ಇಲ್ಲ

ಕೊಲೆಯಾದ ಕುಂಞಇರಾಮ ಎರಡು ವರ್ಷಗಳ ಹಿಂದೆ ಪತ್ನಿ ಕಲ್ಯಾಣಿಯನ್ನ ತ್ಯಜಿಸಿ ತನ್ನ ಸಹೋದರಿ ಯಶೋಧಳ ಜೊತೆ ಸಂಬಂಧ ಬೆಳೆಸಿದ್ದ. ಎರಡು ವರ್ಷಗಳಿಂದ ಇವರಿಬ್ಬರು ಒಟ್ಟಿಗೆ ನೆಲೆಸಿದ್ದರು. ಇದು ಸಹೋದರ ಸಂಬಂಧಿ ಚಂದುವಿಗೆ ಇಷ್ಟವಿರಲಿಲ್ಲ. ಅಲ್ಲದೇ ಚಂದುವಿಗೆ ಯಶೋಧಳ ಮೇಲೆ ಮನಸ್ಸಿತ್ತು ಎನ್ನಲಾಗಿದೆ. ಇದನ್ನ ಅಲ್ಲಿನವರ ಜೊತೆ ಈ ಹಿಂದೆಯೂ ಬಹಳಷ್ಟು ಬಾರಿ ಹೇಳಿದ್ದನಂತೆ. ಆದ್ರೆ ಮಾರ್​ಚ್ 11ರಂದು ಕುಡಿದ ಮತ್ತಿನಲ್ಲಿ ಯಶೋಧಳ ಮನೆಗೆ ತೆರಳಿ ನೋಡಿದಾಗ ಯಶೋಧ -ಕುಂಞರಾಮ ಒಟ್ಟಿಗೆ ಇರುವುದು ಕಂಡು ಮತ್ತಷ್ಟು ಆಕ್ರೋಶಗೊಡಿದ್ದು, ಏನು ನೋಡದೇ ಇಬ್ಬರ ಮೇಲೆ ಮನಸೋಇಚ್ಛೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಮಲಗಿದ್ದ ಯಶೋಧ ಹಾಗೂ ಕುಂಞರಾಮ ಮೇಲೇಳಲೇ ಇಲ್ಲ.

ಈ ಪ್ರಕರಣ ಕೇವಲ ಒಂದು ಅಪರಾಧವಾಗಿ ಮಾತ್ರವಲ್ಲದೆ, ಅಡಿಯ ಜನಾಂಗದ ನಿಕೃಷ್ಟ ಪರಿಸ್ಥಿತಿಯನ್ನ ಬಯಲಿಗೆಳೆದಿದೆ. ಸುಶಿಕ್ಷಿತರಾಗದೇ ಇರುವುದು, ಕಾನೂನಿನ ಕೊರತೆ, ಇವರನ್ನ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇವೆಲ್ಲವೂ ಕೂಡ ಇದೀಗ ಚರ್ಚೆಗೆ ಗ್ರಾಸ ವಾಗಿದೆ. ಸದ್ಯ ಕೊಲೆ ಆರೋಪಿ ಚಂದುವನ್ನ ಬಂಧಿಸಿರೋ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Gopal AS
Follow Us