AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನ ಕೆಲವು ಗ್ರಾಮಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ: ಇಲ್ಲಿ ಜಿಪಂ ಅಧಿಕಾರಿಯೂ ಸಂತ್ರಸ್ತ!

ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟವನ್ನು ನಿಷೇಧಿಸಿ ದಶಕಗಳೇ ಕಳೆದಿವೆ. ಆದರೆ ಅತ್ಯಂತ ಮುಂದುವರಿದ ಜಿಲ್ಲೆ ಎನಿಸಿಕೊಂಡಿರುವ ಕೊಡಗಿನ ಕೆಲವು ಗ್ರಾಮಗಳಲ್ಲಿ ಮಾತ್ರ ಈ ಅನಿಷ್ಟ ಇನ್ನೂ ಜೀವಂತವಿದೆ ಎಂಬ ಆರೋಪ ಕೇಳಿ ಬಂದಿದೆ. ಊರಿನವರಿಂದ ಬಹಿಷ್ಕಾರ ಹಾಕಿಸಿಕೊಂಡವರು ‘ಟಿವಿ9’ ಜೊತೆ ಅಳಲು ತೋಡಿಕೊಂಡಿದ್ದಾರೆ.

ಕೊಡಗಿನ ಕೆಲವು ಗ್ರಾಮಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ: ಇಲ್ಲಿ ಜಿಪಂ ಅಧಿಕಾರಿಯೂ ಸಂತ್ರಸ್ತ!
ಕೊಡಗಿನ ಕೆಲವು ಗ್ರಾಮಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ: ಇಲ್ಲಿ ಜಿಪಂ ಅಧಿಕಾರಿಯೂ ಸಂತ್ರಸ್ತ!
Gopal AS
| Updated By: Ganapathi Sharma|

Updated on:Jul 04, 2024 | 10:25 AM

Share

ಮಡಿಕೇರಿ, ಜುಲೈ 4: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರಗ, ಕುಂದಳ್ಳಿ, ಕೂತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಜೀವಂತವಿದೆ. ಕಳೆದ ಹಲವು ವರ್ಷಗಳಿಂದ ಹಲವು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ತೀವ್ರ ಮಾನಸಿಕ ಯಾತನೆಗೆ ಒಳಗಾದ ಹಲವು ಕುಟುಂಬ ಊರೇಬಿಟ್ಟು ಹೋಗಿವೆ. ಇದು ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯ ಕುಟುಂಬವನ್ನೇ ಬಿಟ್ಟಿಲ್ಲ.

2004ನೇ ಇಸವಿಯಲ್ಲಿ ಸುಗ್ಗಿ ಹಬ್ಬದ ಸಂದರ್ಭ ಕೆಳ ಜಾತಿಯವರು ಮಾಡಬೇಕಾಗಿದ್ದ ಕೆಲಸಗಳನ್ನು ಮಾಡಲು ನಿರಾಕರಿಸಿದ್ದಕ್ಕೆ ಕುಂದಳ್ಳಿ ಗ್ರಾಮದ ಬಿಕೆ ರವಿ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಇವರು ಕೊಡಗು ಜಿಲ್ಲಾ ಪಂಚಾಯತ್​ನಲ್ಲಿ ವಿಕೇಂದ್ರಿತ ತರಬೇತಿ ಸಂಯೋಜಕ ಅಧಿಕಾರಿಯಾಗಿದ್ದಾರೆ. ಇವರಿಗೇ ಹೀಗೆ ಬಹಿಷ್ಕಾರ ಹಾಕಿರುವಾಗ ಇನ್ನು ಜನ ಸಾಮಾನ್ಯರ ಪಾಡೇನು ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ.

ನಮ್ಮ ಮನೆಯವರೊಂದಿಗೆ ಯಾರೂ ಮಾತನಾಡುವುದಿಲ್ಲ. ತಾಯಿ ಮೃತರಾಗಿದ್ದಾಗಲೂ ಯಾರೂ ಬಂದಿರಲಿಲ್ಲ. ಸಹೋದರರ ವಿವಾಹವಾದಗಲೂ ಕೂಡ ಯಾರೂ ಬಂದಿರಲಿಲ್ಲ. ನಾವು ಕೂಡ ಯಾರ ಕಾರ್ಯಕ್ರಮಗಳಿಗೂ ಹೋಗುವಂತಿಲ್ಲ ಎಂದು ಬಿಕೆ ರವಿ ‘ಟಿವಿ9’ಗೆ ತಿಳಿಸಿದ್ದಾರೆ.

ದೇವಸ್ಥಾನ ಪ್ರವೇಶಿಸಿದ್ದಕ್ಕೆ ಬಹಿಷ್ಕಾರ

ಅತ್ತ ಹರಗ ಗ್ರಾಮದಲ್ಲೂ ಇಬ್ಬರ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಇದರಲ್ಲಿ ರುದ್ರಪ್ಪ ಎಂಬುವರ ಮಗ 2004ರಲ್ಲಿ ಊರಿನ ದೇವಸ್ಥಾನ ಪ್ರವೇಶಿಸುತ್ತಾನೆ. ಕೆಳವರ್ಗದವರಾಗಿ ದೇವಸ್ಥಾನ ಪ್ರವೇಶಿಸಿದ್ದು ಮಹಾದಪರಾಧ ಎಂದು ಬಿಂಬಿಸಿದ ಗ್ರಾಮ ಸಮಿತಿ ಅಂದಿನಿಂದಲೂ ಬಹಿಷ್ಕಾರದ ಶಿಕ್ಷೆಗೆ ಗುರಿಯಾಗಿಸಿದೆ. ಉರಿನಲ್ಲಿ ತೀವ್ರ ಮಾನಸಿಕ ಹಿಂಸೆ ಅನುಭವಿಸಿದ ಈ ಕುಟುಂಬ ಕೆಲ ವರ್ಷಗಳ ನಂತರ ಊರನ್ನೇ ಬಿಟ್ಟು ಬೇರೆ ಊರಿನಲ್ಲಿ ಹೋಗಿ ನೆಲೆಸಿದೆ. ಇಂದಿಗೂ ಆ ಊರಿನ ಮಂದಿಗೆ ಇವರನ್ನ ಕಂಡರೆ ಅಷ್ಟಕಷ್ಟೆ.

Evil practice of social exclusion in some villages of Kodagu, Madikeri news in Kannada

ಹರಗ ಗ್ರಾಮದ ಗಿರೀಶ್ ಎಂಬವರ ಕುಟುಂಬ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿತ್ತು. ಇದು ಬಳಿಕ ಅರಣ್ಯ ಇಲಾಖೆಯಲ್ಲಿ ಕೇಸ್ ಆಗಿ ಪ್ರಕರಣವೂ ಇತ್ಯರ್ಥವಾಗಿತ್ತು. ಆದ್ರೆ ಗ್ರಾಮ ಸಮಿತಿ ಮಾತ್ರ ಗಿರೀಶ್​ಗೆ 80 ಸಾವಿರ ರೂ ದಂಡ ವಿಧಿಸಿದೆ. ಪ್ರಕರಣ ಇತ್ಯರ್ಥವಾಗಿರೋದ್ರಿಂದ ದಂಡ ಕಟ್ಟುವುದಿಲ್ಲ ಎಂದಿದ್ದಕ್ಕೆ ಈ ಕುಟುಂಬಕ್ಕೆ ಬಹಿಷ್ಕಾರ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನರ ಬದುಕು ಮೂರಾ ಬಟ್ಟೆ: ಇದು ಕೊಡಗಿನ ಕುಗ್ರಾಮವೊಂದರ ಕಣ್ಣಿರಿನ ಕಥೆ

ಈ ಎರಡೂ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗೆ ದುರು ನಿಡಲಾಗಿದೆ. ಅದರಂತೆ ತಹಶೀಲ್ದಾರ್ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಟ್ಟು ಬಮದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಇಂದಿಗೂ ಬಹಿಷ್ಕಾರ ಮುಂದುವರಿದಿದೆ. ಬಹಿಷ್ಕಾರಕ್ಕೆ ಒಳಗಾದವರೂ ದಾರಿಕಾಣದೆ ಕೈಚೆಲ್ಲಿದ್ದಾರೆ. ಕೊಡಗು ಜಿಲ್ಲೆಯನ್ನು ಅತ್ಯಂತ ಮುಂದುವರಿದ ಜಿಲ್ಲೆ ಎನ್ನಲಾಗುತ್ತದೆ. ಆದರೆ ಸೋಮವಾರಪೇಟೆ ಭಾಗದಲ್ಲಿ ಈ ಅನಿಷ್ಟ ಮುಂದುವರಿದಿರುವುದು ಜಿಲ್ಲೆಗೇ ಅವಮಾನವಾದಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 am, Thu, 4 July 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ