Kodagu News: 66 ತೇಗದ ಮರ ಕಡಿಯಲು ಅನುಮತಿ ನೀಡಿದ್ದ ನಾಲ್ವರು ಅಧಿಕಾರಿಗಳು ಅಮಾನತು
66 ತೇಗದ ಮರ ಕಡಿಯಲು ಅನುಮತಿ ನೀಡಿದ್ದ ನಾಲ್ವರನ್ನು ಅಮಾನತು ಮಾಡಿ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ವಲಯ ಅರಣ್ಯ ವ್ಯಾಪ್ತಿಯಲ್ಲಿ ತೇಗದ ಮರ ಕಡಿಯಲು ಅನುಮತಿ ನೀಡಿದ್ದರು.
ಕೊಡಗು: 66 ತೇಗದ ಮರ (Teak Trees) ಕಡಿಯಲು ಅನುಮತಿ ನೀಡಿದ್ದ ನಾಲ್ವರನ್ನು ಅಮಾನತು (Suspend) ಮಾಡಿ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ವಲಯ ಅರಣ್ಯ ವ್ಯಾಪ್ತಿಯಲ್ಲಿ ತೇಗದ ಮರ ಕಡಿಯಲು ಅನುಮತಿ ನೀಡಿದ್ದರು. ಎಸಿಎಫ್ ಹೆಚ್.ಸೀಮಾ, ಆರ್ಎಫ್ಒಗಳಾದ ಅಶೋಕ ಪರಮಾನಂದ, ಬಿ.ಎಂ.ಶಂಕರ್, ಪತ್ರಾಂಕಿತ ವ್ಯವಸ್ಥಾಪಕಿ ಕೆ.ಎ.ಅನಿತಾ ಅಮಾನತುಗೊಳಗಾದ ಅಧಿಕಾರಿಗಳು.
2022ರಲ್ಲಿ ಅಕ್ರಮವಾಗಿ 66 ತೇಗದ ಮರ ಕಡಿಯಲು ಅನುಮತಿ ನೀಡಿದ್ದರು. ಪ್ರಕರಣ ಸಂಬಂಧ ಕಳೆದ ವಾರ ಡಿಸಿಎಫ್ ಚಕ್ರಪಾಣಿ ಅಮಾನತಾಗಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿತ್ತು.
ಇದನ್ನೂ ಓದಿ: Kodagu News: ಅಧಿಕಾರದಲ್ಲಿದ್ದಾಗ 6ರ ಬದಲು 66 ಮರ ಕಡಿಯಲು ಅಕ್ರಮವಾಗಿ ಅನುಮತಿ ನೀಡಿದ್ದ ಐಎಫ್ಎಸ್ ಅಧಿಕಾರಿ ಸಸ್ಪೆಂಡ್
66 ತೇಗದ ಮರಗಳನ್ನ ಕಡಿದುರುಳಿಸಲು ಅನುಮತಿ
ಡಿಸಿಎಫ್ ಚಕ್ರಪಾಣಿ ರಮೇಶ್ ಅವರ ಸಹಿಯನ್ನ ನಕಲು ಮಾಡಿ ಆರು ಮರಗಳ ಬದಲು ಸಂಪೂರ್ಣ ಬೆಳೆದು ನಿಂತಿರುವ ಭರ್ತಿ 66 ತೇಗದ ಮರಗಳನ್ನ ಕಡಿದುರುಳಿಸಲು ಅನುಮತಿ ನೀಡಿದ್ದರು. ಈ ಒಂದೊಂದು ಮರವೂ ಎರಡು ಮೀಟರ್ಗಿಂತಲೂ ದಪ್ಪವಿದ್ದು. 60 ವರ್ಷಕ್ಕೂ ಅಧಿಕ ಹಳೆಯದ್ದಾಗಿದ್ದವು. ಹಾಗಾಗಿ ಈ 66 ಮರಗಳು ಎಷ್ಟೋ ಕೋಟಿ ರೂಪಾಯಿಗೆ ಬೆಲೆ ಬಾಳುತ್ತಿದ್ದವು. ಇಂತಹ ಮರಗಳನ್ನು ಕಡಿದುರುಳಿಸಲು ಈ ಅಧಿಕಾರಿ ಅನುಮತಿ ನೀಡಿದ್ದರು.
ಚಕ್ರಪಾಣಿ ಅವರು ಉದ್ದೇಶಪೂರ್ವಕವಾಗಿಯೇ 66 ಮರಗಳನ್ನ ಕಡಿಯಲು ಅನಮತಿ ನೀಡಿರುವುದು ಬೆಳಕಿಗೆ ಬರುವುದು ಮಾತ್ರವಲ್ಲದೇ, ಇಷ್ಟೊಂದು ಅಗಾಧ ಮರಗಳನ್ನ ಕಡಿಯಲು ಅನುಮತಿ ನೀಡುವಾಗಿ ಕಂದಾಯ ಇಲಾಖೆಯಿಂದಾಗಲಿ ಇತರ ಇಲಾಖೆಯಿಂದಾಗಲಿ ಸರ್ವೆ ಅಥವಾ ಇತರ ಯಾವುದೇ ನೀತಿ ನಿಯಮಗಳನ್ನು ಕೂಡ ಪಾಲಿಸಿರುವುದಿಲ್ಲ. ಅದೂ ಅಲ್ಲದೆ ತನಿಖೆಯ ಸಂದರ್ಭ ದಾಖಲಾತಿಗಳನ್ನ ಮನಸೋ ಇಚ್ಛೆ ತಿದ್ದಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ ಆರೋಪ ಇವರ ಮೇಲೆ ಬರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Wed, 28 June 23