ಶಿವನ ದೇವಾಲಯ ಕಂಡು ಖುಷಿಯಾಗಿದೆ! ಆದರೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕದಲ್ಲಿ ಕೊಡಗು ಜನತೆ

ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ದೇವಸ್ಥಾನ ಎಷ್ಟೋ ವರ್ಷಗಳ ಬಳಿಕ ಗೋಚರವಾಗಿರುವುದು ಇಲ್ಲಿನ ಜನರ ಸಂತಸ, ಕುತೂಹಲಕ್ಕೆ ಕಾರಣವಾಗಿದೆ. ಗರ್ಭಗುಡಿ ಮುಖಮಂಟಪ ಮತ್ತು ಬಾವಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮತ್ತೊಂದ್ಕಡೆ ಇದು ಭೀಕರ ಬರಗಾಲದ ಸ್ಪಷ್ಟ ಮುನ್ಸೂಚನೆಯಾಗಿದೆ. ಏಕೆಂದರೆ

ಶಿವನ ದೇವಾಲಯ ಕಂಡು ಖುಷಿಯಾಗಿದೆ! ಆದರೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕದಲ್ಲಿ ಕೊಡಗು ಜನತೆ
ಕೊಡಗು ಜನತೆಗೆ ಶಿವನ ದೇವಾಲಯ ಕಾಣಿಸಿರುವುದು ಖುಷಿಯಾಗಿದೆ! ಆದರೆ
Follow us
Gopal AS
| Updated By: ಸಾಧು ಶ್ರೀನಾಥ್​

Updated on: Nov 27, 2023 | 4:54 PM

ಬರದಿಂದಾಗಿ ಈ ವರ್ಷ ಇಡೀ ನಾಡಿಗೆ ನಾಡೇ ತತ್ತರಿಸುತ್ತಿರೋದು ಎಲ್ಲರಿಗೂ ಗೊತ್ತಿರೊ ವಿಚಾರ. ಅದ್ರಲ್ಲೂ ಸದಾ ಮಳೆಯಿಂದ ತೊಯ್ದು ತೊಪ್ಪೆಯಾಗೋ ಕೊಡಗು ಜಿಲ್ಲೆಯಲ್ಲೂ ಬರದ ಛಾಯೆ ಆವರಿಸಿದೆ! ಹಾಗಾಗಿ ಜಿಲ್ಲೆಯ ಜಲಾಶಯಗಳು ಬತ್ತಿ ಬರಿದಾಗುತ್ತಿವೆ. ಇದೇ ಸಂದರ್ಭದಲ್ಲಿ ಜಲಾಶಯದ ಹಿನ್ನಿರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಶಿವನ ದೇವಾಲಯವೊಂದು ಗೋಚರವಾಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಒಂದ್ಕಡೆ ಬತ್ತಿ ಬರಿದಾಗಿರೋ ಜಲಾಶಯ. ಮತ್ತೊಂದ್ಕಡೆ ಬರಿದಾಗಿರೋ ಜಲಾಶಯದಲ್ಲಿ ತಲೆ ಎತ್ತಿ ನಿಂತಿರೋ ಪುರಾತನ ದೇವಾಲಯ.. ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಕಂಡು ಬಂದಿರೋ ದೃಶ್ಯ. ಜಲಾಶಯ ನಿರ್ಮಾಣವಾಗಿದ್ದಾಗ ಹಿನ್ನೀರಲ್ಲಿ ಈ ಶಿವನ ದೇವಾಲಯ ಮುಳುಗಡೆಯಾಗಿತ್ತು. ಸುಮಾರು 50 ವರ್ಷಗಳ ಹಿಂದೆ ಈ ಜಲಾಶಯ ನಿರ್ಮಾಣವಾಗಿತ್ತು.

ಈ ಸಂದರ್ಭ ಈ ಊರಿನ ದೇವಲಾಯವಾಗಿದ್ದ ಇದು ಮುಳುಗಡೆಯಾಗಿತ್ತು. ಆದರೆ ಸಾಮಾನ್ಯವಾಗಿ ಬೇಸಗೆಯಲ್ಲಿ ಎಷ್ಟೋ ವರ್ಷಗಳಿಗೊಮ್ಮೆ ಮಾತ್ರ ಈ ದೇವಾಲಯ ಗೋಚರವಾಗುತ್ತಿತ್ತು. ಆದ್ರೆ ಈ ವರ್ಷ ಮಳೆಯ ತೀವ್ರ ಕೊರತೆಯಿಂದಾಗಿ ನವೆಂಬರ್ ತಿಂಗಳಿನಲ್ಲೇ ದೇವಾಲಯ ಗೋಚರವಾಗಿದೆ ಎಂದು ಗ್ರಾಮಸ್ಥ ರವಿ ಮಾಹಿತಿ ನೀಡಿದರು.

ಇದನ್ನೂ ಓದಿ: ಕೊಡಗು: ಆನಂದಪುರ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ

ತಮ್ಮೂರಿನ ದೇವಸ್ಥಾನ ಎಷ್ಟೋ ವರ್ಷಗಳ ಬಳಿಕ ಗೋಚರವಾಗುತ್ತಿರುವುದು ಇಲ್ಲಿನ ಜನರ ಸಂತಸ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಹಾಗಾಗಿ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ಗರ್ಭಗುಡಿ ಮುಖಮಂಟಪ ಮತ್ತು ಬಾವಿ ಇದ್ದು ಎಲ್ಲರನ್ನು ಆಕರ್ಷಿಸುತ್ತಿದೆ. ಒಂದು ಕಡೆ ಕುತೂಹಲವಾದ್ರೆ ಮತ್ತೊಂದ್ಕಡೆ ಇದು ಭೀಕರ ಬರಗಾಲದ ಸ್ಪಷ್ಟ ಮುನ್ಚೂಚನೆಯೂ ಆಗಿದೆ. ಏಕೆಂದರೆ ನವೆಂಬರ್​ ತಿಂಗಳಿನಲ್ಲೇ ನದಿ ತೊರೆ ಜಲಾಶಯಗಳು ಬತ್ತಿ ಹೋಗಿದ್ದು ಇನ್ನು ಜನವರಿ ನಂತರದ ಪಾಡೇನು ಎಂದು ಸ್ಥಳೀಯರು ಆತಂಕಪಡುವಂತಾಗಿದೆ.

ಒಟ್ಟಾರೆ ಸಾರ್ವಜನಿಕರಿಗೆ ಒಂದು ಕಡೆ ದೇವಾಲಯ ಗೋಚರವಾಗಿರುವುದು ಖುಷಿ ಒಂದಾದರೆ ಮತ್ತೊಂದ್ಕಡೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕವೂ ಕಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ