ಕೊಡವ ಸಂಸ್ಕೃತಿ ಅಭಿವೃದ್ದಿಗೆ ಸರ್ಕಾರ ನಿರಾಸಕ್ತಿ; ಅನುದಾನ ಬಿಡುಗಡೆ ಮಾಡಲು ಸಾಹಿತ್ಯ ಪ್ರೇಮಿಗಳ ಮನವಿ

ಕೊಡಗು ಅಂದ್ರೆ ಅದು ಬಹಳ ವಿಶಿಷ್ಟ ಸಂಸ್ಕೃತಿಗಳ ತವರೂರು. ಈ ಸಂಸ್ಕೃತಿಗಳ ಉಳಿವು ಮತ್ತು ಅಭಿವೃದ್ಧಿಗಾಗಿಯೇ ಇಲ್ಲಿ ಎರಡು ಅಕಾಡೆಮಿಗಳಿವೆ. ಆದ್ರೆ, ಈ ಅಕಾಡೆಮಿಗೆ ಅಧ್ಯಕ್ಷರನ್ನ ಆಯ್ಕೆ ಮಾಡಿರುವ ರಾಜ್ಯ ಸರ್ಕಾರ, ಅದರ ನಂತರ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಅತ್ತ ಸದಸ್ಯರ ನೇಮಕವಾಗದೆ, ಇತ್ತ ಅನುದಾನವೂ ಇಲ್ಲದೆ ಅಕಾಡೆಮಿಗಳು ನಿರಾಶೆ ಮೂಡಿಸಿವೆ.

ಕೊಡವ ಸಂಸ್ಕೃತಿ ಅಭಿವೃದ್ದಿಗೆ ಸರ್ಕಾರ ನಿರಾಸಕ್ತಿ; ಅನುದಾನ ಬಿಡುಗಡೆ ಮಾಡಲು ಸಾಹಿತ್ಯ ಪ್ರೇಮಿಗಳ ಮನವಿ
ಕೊಡವ ಸಂಸ್ಕೃತಿ ಅಭಿವೃದ್ದಿಗೆ ಸರ್ಕಾರ ನಿರಾಸಕ್ತಿ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 21, 2024 | 10:11 PM

ಕೊಡಗು, ಜೂ.21: ಕೊಡಗು(Kodagu) ಜಿಲ್ಲೆಯಲ್ಲಿ ಕೊಡವ ಭಾಷೆ ಮಾತನಾಡುವ 21 ಮೂಲ ನಿವಾಸಿಗಳ ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನ ಮತ್ತು ಅಭಿವೃದ್ಧಿಗೆ ಅಂತ ಸುಮಾರು 3 ದಶಕಗಳ ಹಿಂದೆ ಕೊಡವ ಸಾಹಿತ್ಯ ಅಕಾಡೆಮಿ ಸ್ಥಾಪಿಸಲಾಗಿದೆ. ಅಂದಿನಿಂದಲೂ ಈ ಅಕಾಡೆಮಿ ತನ್ನದೇ ಆದ ಇತಿ ಮಿತಿಯಲ್ಲಿ ಅತ್ಯುತ್ತಮವಾಗಿಯೇ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಕಾಡೆಮಿಗಳ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ನೆನೆಗುದಿಗೆ ಬಿದ್ದಿತ್ತು. ಆದ್ರೆ, ಇದೀಗ ತಿಂಗಳ ಹಿಂದೆ ಕೊಡಗಿನ ಎರಡು ಅಕಾಡೆಮಿಗಳಿಗೆ ಅಧ್ಯಕ್ಷರನ್ನ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಸದಸ್ಯರ ಆಯ್ಕೆಯಲ್ಲಿ ಸರ್ಕಾರ ಹಿಂದೇಟು

ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಗೆ ಅಜ್ಜನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷರಾದ್ರೆ, ಗೌಡ ಸಾಹಿತ್ಯ ಹಾಗೂ ಸಂಸ್ಕೃತಿಕ ಅಕಾಡೆಮಿಗೆ ಸದಾನಂದ ಮಾವಾಜಿ ಅಧ್ಷಕ್ಷರಾಗಿದ್ದಾರೆ. ಅರೆಭಾಷೆ ಅಕಾಡೆಮಿಗೆ ಆರು ಸದಸ್ಯರನ್ನ ಕೂಡ ನೇಮಕ ಮಾಡಿದೆ. ಆದ್ರೆ, ಉಳಿದ ನಾಲ್ವರು ಸದಸ್ಯರ ಆಯ್ಕೆ ಬಗ್ಗೆ ಇನ್ನೂ ಗೊಂದಲವಿದೆ. ಇತ್ತ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಕೇವಲ ಅಧ್ಯಕ್ಷರ ಆಯ್ಕೆ ಮಾತ್ರ ಆಗಿದೆ. ಉಳಿದ 10 ಸದಸ್ಯರ ಆಯ್ಕೆ ಇನ್ನೂ ಆಗಿಲ್ಲ. ಇವರ ಆಯ್ಕೆಯಾಗದೆ ಅಧ್ಯಕ್ಷರೊಬ್ಬರೆ ಏನೂ ಮಾಡಲಾಗದೆ ಕುಳಿತಿದ್ದಾರೆ.

ಇದನ್ನೂ ಓದಿ:ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ: ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು, ಪ್ರವಾಸೋದ್ಯಮಕ್ಕೆ ಜೀವ

ಶೀಘ್ರವೇ ಸದಸ್ಯರ ನೇಮಕ ಮಾಡಿಕೊಡುವಂತೆ ಅವರು ವಿನಂತಿಸುತ್ತಿದ್ದಾರೆ. ಅದೂ ಅಲ್ಲದೆ ಈ ಅಕಾಡೆಮಿಗೆ ಅನುದಾನವನ್ನು ಕೂಡ ಬಿಡುಗಡೆ ಮಾಡದೆ ಇರುವುದು ಅಕಾಡೆಮಿಯನ್ನು ಇದ್ದೂ ಇಲ್ಲದಂತಾಗಿಸಿದೆ. ಅಕಾಡೆಮಿಗಳ ಸದಸ್ಯರ ನೇಮಕ ಸಂಬಂಧ ಈಗಾಗಲೆ ಬೆಂಗಳೂರಿನಲ್ಲಿ ಸಭೆ ನಡೆದಿದ್ದು, ಅಧಿಕೃತ ಪ್ರಕಟಣೆ ಹೊರ ಬರಬೇಕಿದೆ ಎನ್ನಲಾಗಿದೆ. ಆದರೂ ಯಾವುದಕ್ಕೂ ಜಿಲ್ಲೆಯ ಇಬ್ಬರು ಶಾಸಕರು ಹೆಚ್ಚಿನ ಆಸಕ್ತಿ ತೋರಿ ಎರಡು ಅಕಾಡಮೆಗಳಿಗೆ ಸದಸ್ಯರ ಆಯ್ಕೆ, ಹಾಗೆಯೇ ಅನುದಾನ ಬಿಡುಗಡೆ ಮಾಡುವಂತೆ ಸಾಹಿತ್ಯ ಪ್ರೇಮಿಗಳು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್