ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಬಸ್; ಅದೃಷ್ಟವಷಾತ್ ಪ್ರಯಾಣಿಕರು ಅಪಾಯದಿಂದ ಪಾರು
Bus Accident in Madikeri: ಆದರೆ, ದಿಬ್ಬಕ್ಕೆ ಮಗುಚಿಕೊಂಡ ಹಿನ್ನೆಲೆ ಬಸ್ನ ಬಾಗಿಲುಗಳು ಜಾಮ್ ಆಗಿದ್ದವು. ಹೀಗಾಗಿ, ಪ್ರಯಾಣಿಕರು ತುರ್ತು ದ್ವಾರದ ಮೂಲಕ ಹೊರ ಬಂದಿದ್ದಾರೆ. ಮೈಸೂರು-ಮಡಿಕೇರಿ ಮಧ್ಯೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಒಂದು ಕಂದಕಕ್ಕೆ ಉರುಳಿಬಿದ್ದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೋಯಿಕೇರಿ ಗ್ರಾಮದಲ್ಲಿ ಇಂದು (ಆಗಸ್ಟ್ 1) ನಡೆದಿದೆ. ಅದೃಷ್ಟವಷಾತ್, ಸರ್ಕಾರಿ ಬಸ್ನಲ್ಲಿ ತೆರಳುತ್ತಿದ್ದ 30 ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ. ಮೈಸೂರು-ಮಡಿಕೇರಿ ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬೋಯಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಘಟನೆ ನಡೆದಿದೆ.
ಆದರೆ, ದಿಬ್ಬಕ್ಕೆ ಮಗುಚಿಕೊಂಡ ಹಿನ್ನೆಲೆ ಬಸ್ನ ಬಾಗಿಲುಗಳು ಜಾಮ್ ಆಗಿದ್ದವು. ಹೀಗಾಗಿ, ಪ್ರಯಾಣಿಕರು ತುರ್ತು ದ್ವಾರದ ಮೂಲಕ ಹೊರ ಬಂದಿದ್ದಾರೆ. ಮೈಸೂರು-ಮಡಿಕೇರಿ ಮಧ್ಯೆ ಸಂಚರಿಸುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಸಾರಿಗೆ ಇಲಾಖೆಯ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಸಾರಿಗೆ ಇಲಾಖೆಯ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರಿಗೆ ಇಲಾಖೆಯ 4 ನಿಗಮಗಳ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಿದೆ. ಜುಲೈ 1 ರಿಂದ ಅನ್ವಯವಾಗುವಂತೆ ಶೇಕಡಾ 11.25 ರಿಂದ ಶೇ. 21.50 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿ ಜುಲೈ 27 ರಂದು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಅನ್ವಯ ನೌಕರರ ವೇತನಕ್ಕೆ ತುಟ್ಟಿ ಭತ್ಯೆ ಹೆಚ್ಚಳದ ಮೊತ್ತ ಸೇರ್ಪಡೆಯಾಗಲಿದೆ.
ಕರ್ನಾಟಕ ಸರ್ಕಾರವು ಉದ್ಯೋಗಿಗಳಿಗೆ ಶೇ 11ರಷ್ಟು ತುಟ್ಟಿಭತ್ಯೆ ನೀಡಲು ನಿರ್ಧರಿಸಿರುವ ವಿಷಯವನ್ನು ಜುಲೈ 21ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಹಿರಂಗಪಡಿಸಿತ್ತು.
ಇದನ್ನೂ ಓದಿ: ಮಡಿಕೇರಿ: ಭೂಕುಸಿತ ಸಂತ್ರಸ್ತರ ಗೋಳಾಟ ಕೇಳೋರೇ ಇಲ್ಲ; ಸಿಡಿದೆದ್ದ ಗ್ರಾಮ ಪಂಚಾಯಿತಿ ಸದಸ್ಯರು
ಲಾಕ್ಡೌನ್ ಉಲ್ಲಂಘಿಸಿದ ಪ್ರವಾಸಿಗರ ಮೇಲೆ ಮಡಿಕೇರಿಯಲ್ಲಿ ಎಫ್ಐಆರ್ ದಾಖಲು
(Govt Bus fell down near Madikeri Boyikeri Mysuru Kodagu route bus 30 passengers are safe)
Published On - 10:34 pm, Sun, 1 August 21