Raja’s Seat: ರಾಜಾಸೀಟ್ ಸೇರಿ ಮಡಿಕೇರಿಯ ಪ್ರವಾಸಿ ಸ್ಥಳಗಳು 11 ದಿನ ಬಂದ್; ಹೆಚ್ಚಿನ ವಿವರ ಓದಿ

Madikeri Tourist Places: ಅಕ್ಟೋಬರ್ 7 ರಿಂದ 17ರವರೆಗೆ ರಾಜಾಸೀಟ್, ಗದ್ದುಗೆ, ಮ್ಯೂಸಿಯಂ, ಕೋಟೆ, ನೆಹರು ಮಂಟಪ ಬಂದ್ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Raja's Seat: ರಾಜಾಸೀಟ್ ಸೇರಿ ಮಡಿಕೇರಿಯ ಪ್ರವಾಸಿ ಸ್ಥಳಗಳು 11 ದಿನ ಬಂದ್;  ಹೆಚ್ಚಿನ ವಿವರ ಓದಿ
ರಾಜಾ ಸೀಟ್
Follow us
TV9 Web
| Updated By: Digi Tech Desk

Updated on:Oct 04, 2021 | 10:42 AM

ಮಡಿಕೇರಿ: ದಸರಾ ಮತ್ತು ಕರಗೋತ್ಸವವದ ಹಿನ್ನೆಲೆಯಲ್ಲಿ ಮಡಿಕೇರಿಯ ಪ್ರವಾಸಿ ತಾಣ‌ಗಳನ್ನು 11 ದಿನಗಳ‌ ಕಾಲ ಬಂದ್ ಮಾಡುವಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ. ಅಕ್ಟೋಬರ್ 7 ರಿಂದ 17ರವರೆಗೆ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಅವರು ಆದೇಶ ಪ್ರಕಟಿಸಿದ್ದಾರೆ. 11 ದಿನಗಳ ಕಾಲ ರಾಜಾಸೀಟ್, ಗದ್ದುಗೆ, ಮ್ಯೂಸಿಯಂ, ಕೋಟೆ, ನೆಹರು ಮಂಟಪ ಬಂದ್ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Dasara 2021: ಮೈಸೂರು ದಸರಾ ಎಷ್ಟೊಂದು ಸುಂದರಾ..ಇಲ್ಲಿದೆ 7 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021 ಕ್ಕೆ 7 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧಗೊಂಡಿದೆ. ಅರಮನೆ ಮುಂಭಾಗದಲ್ಲಿ 7 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೇ ಈಬಾರಿ ಹೊಸದಾಗಿ ನಂಜನಗೂಡಿನ ದೇವಾಲಯದ ಆವರಣದಲ್ಲಿಯೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಕಲಾಮಂದಿರದಲ್ಲಿ ಒಂದು ದಿನ ನಡೆಯಲಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 7 ಗುರುವಾರ ಸಂಜೆ ಮುಖ್ಯಮಂತ್ರಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ಅಂದೇ ಜರುಗಲಿದೆ.

ಅರಮನೆ ಮುಂಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿ ಅಕ್ಟೋಬರ್ 7ರಂದು ರಾತ್ರಿ 7:30ಕ್ಕೆ ಬೆಂಗಳೂರು ಪ್ರಭಾತ್ ಕಲಾವಿದರಿಂದ ಕರ್ನಾಟಕ ವೈಭವ ನೃತ್ಯ ರೂಪಕ.

ಅಕ್ಟೋಬರ್ 8ರಂದು ಜನಪದ ಕಾವ್ಯ ಗಾಯನ, ವಯೊಲಿನ್ ಕನ್ನಡ ಡಿಂಡಿಮ ಕಾರ್ಯಕ್ರಮ: ಶಿವಮೊಗ್ಗ ಹಾಗೂ ಮಳವಳ್ಳಿ ಕಲಾವಿದರಿಗೆ ಅವಕಾಶ.

ಅಕ್ಟೋಬರ್ 9ರಂದು ನಾದಬ್ರಹ್ಮ ಹಂಸಲೇಖರಿಂದ ದೇಶಿ ಸಂಸ್ಕೃತಿ ಹಬ್ಬ. ಮೈಸೂರು ಕಲಾವಿದರಿಂದ ಸಂಗೀತ ದರ್ಬಾರ್.

ಅಕ್ಟೋಬರ್ 10ರಂದು ಮಿಶ್ರವಾದ್ಯ ಗಾಯನ, ಗಜಲ್ ಹಾಗೂ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ. ಬೆಂಗಳೂರು, ಮೈಸೂರು ಹಾಗೂ ತೀರ್ಥಹಳ್ಳಿ ಕಲಾವಿದರಿಂದ ಕಾರ್ಯಕ್ರಮಗಳು.

ಅಕ್ಟೋಬರ್ 11ರಂದು ಪ್ರತಿಷ್ಠಿತ ಪೊಲೀಸ್ ಬ್ಯಾಂಡ್ ವಾದ್ಯ. ಬಾಗಲಕೋಟೆ ಹಾಗೂ ರಾಯಚೂರು ಕಲಾವಿದರಿಂದ ನೃತ್ಯರೂಪಕ ಹಾಗೂ ದಾಸವಾಣಿ.

ಅಕ್ಟೋಬರ್ 12ರಂದು ಕಾರ್ಯಕ್ರಮ ನಡೆಸಿಕೊಡಲಿರುವ ಅದಿತಿ ಪ್ರಹ್ಲಾದ್. ಪಂಡಿತ್ ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿಯಿಂದ ಕೊಳಲುವಾದನ ಜುಗಲ್ ಬಂದಿ. ಮುದ್ದುಮೋಹನ್ ತಂಡದಿಂದ ಹಿಂದೂಸ್ತಾನಿ ಸಂಗೀತ.

ಅಕ್ಟೋಬರ್ 13ರಂದು ಬಿ.ಜಯಶ್ರೀ ತಂಡದಿಂದ ರಂಗಗೀತೆಗಳು. ಶ್ರೀಧರ್ ಜೈನ್ ತಂಡದಿಂದ ನೃತ್ಯರೂಪಕ. ಪಂಡಿತ್ ಜಯತೀರ್ಥ ಮೇವುಂಡಿಯಿಂದ ಹಿಂದೂಸ್ತಾನಿ ಗಾಯನ.

ಇದನ್ನೂ ಓದಿ: 

World Tourism Day 2021: ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ 10 ಪ್ರವಾಸಿ ತಾಣಗಳಿವು

Temple Tour: ಕೋಲಾರದಲ್ಲಿದೆ ದಿನಕರನ ಏಕೈಕ ದಿವ್ಯ ಮಂದಿರ 

Published On - 9:26 pm, Sun, 3 October 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್