ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಹೆಸರಿನಲ್ಲಿ ಅಕ್ರಮ‌: ಮಡಿಕೇರಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮಾನತು

ಅಸ್ತಿತ್ವದಲ್ಲಿಲ್ಲದ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರ ಗೌರವಧನದ ಹೆಸರಿನಲ್ಲಿ ಲಕ್ಷಾಂತರ ಹಣ ಗುಳುಂ ಮಾಡಿದ ಆರೋಪದ ಮೇಲೆ ಮಡಿಕೇರಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಸೀತಾಲಕ್ಷ್ಮೀ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಆಡಿಟ್ ವರದಿಯನ್ನ ಪರಿಶೀಲನೆ ಮಾಡಿದಾಗ ಬಹಳಷ್ಟು ವ್ಯತ್ಯಾಸಗಳು ಕಂಡು ಬಂದಿದ್ದ ಹಿನ್ನೆಲೆ, ಈ ಬಗ್ಗೆ ಪ್ರಾಥಮಿಕ ತನಿಖೆ ಮಾಡಿದಾಗ ಸೀತಾಲಕ್ಷ್ಮೀ ಮತ್​ತು ಸಂಗಡಿಗರು ಸುಮಾರು 40 ಲಕ್ಷ ರೂ. ಹಣ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಹೆಸರಿನಲ್ಲಿ ಅಕ್ರಮ‌: ಮಡಿಕೇರಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಅಮಾನತು
ಮಡಿಕೇರಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮಾನತು
Edited By:

Updated on: Nov 20, 2026 | 4:44 PM

ಮಡಿಕೇರಿ, ನವೆಂಬರ್​​ 20: ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಹೆಸರಿನಲ್ಲಿ ಅಕ್ರಮ‌ ನಡೆಸಿರುವ ಆರೋಪ ಸಂಬಂಧ ಮಡಿಕೇರಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮೀ ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶಿಸಿದೆ. 2023-24, 2025-26ನೇ ಸಾಲಿನಲ್ಲಿ ಅಸ್ತಿತ್ವದಲ್ಲಿ ಇಲ್ಲದೇ ಇರದ ಅಂಗನವಾಡಿಗಳ ಶಿಕ್ಷಕಿ ಮತ್ತು ಸಹಾಯಕಿಯರ ಹೆಸರಿನಲ್ಲಿ ಗೌರವಧನ ಬಿಡುಗಡೆ ಮಾಡಿಕೊಂಡು ಲಕ್ಷ ಲಕ್ಷ ಹಣ ಗುಳುಂ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಸಮಯದಲ್ಲಿ ಸೀತಾಲಕ್ಷ್ಮೀ ಡಿಡಿಒ ಆಗಿದ್ದರು. ಇವರ ಜೊತೆಗೆ ಕಂಪ್ಯೂಟರ್ ಆಪರೇಟರ್ ತೇಜಸ್ವಿನಿ ಮತ್​ತು ಡಿ ಗ್ರೂಪ್ ನೌಕರ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

40 ಲಕ್ಷ ರೂ. ಹಣ ಗುಳುಂ ಮಾಡಿರುವುದು ಬೆಳಕಿಗೆ

ಆಡಿಟ್ ವರದಿಯನ್ನ ಪರಿಶೀಲನೆ ಮಾಡಿದಾಗ ಬಹಳಷ್ಟು ವ್ಯತ್ಯಾಸಗಳು ಕಂಡು ಬಂದಿದ್ದ ಹಿನ್ನೆಲೆ, ಈ ಬಗ್ಗೆ ಪ್ರಾಥಮಿಕ ತನಿಖೆ ಮಾಡಿದಾಗ ಸೀತಾಲಕ್ಷ್ಮೀ ಮತ್​ತು ಸಂಗಡಿಗರು ಸುಮಾರು 40 ಲಕ್ಷ ರೂ. ಹಣ ಗುಳುಂ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಸಂಬಂಧ ತನಿಖೆ ನಡೆಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಇದೀಗ ಸರ್ಕಾರ ಸಿಡಿಪಿಒ ಸೀತಾಲಕ್ಷ್ಮೀ ಅವರನ್ನು ಅಮಾನತು ಮಾಡಿದೆ. ಜೊತೆಗೆ ಕಂಪ್ಯೂಟರ್ ಆಪರೇಟರ್ ತೇಜಸ್ವಿನಿ ಮತ್ತು ಡಿ ಗ್ರೂಪ್ ನೌಕರ ಚಂದ್ರಶೇಖರ್​​ ಅವರನ್ನೂ ವಜಾಗೊಳಿಸಲಾಗಿದೆ.

Loading...

ಇದನ್ನೂ ಓದಿ: ಗಾಂಜಾ ಸೇವನೆಗೆ ಶಿಕ್ಷೆಯಾಗಿ ಪೊಲೀಸರ ಜೊತೆ ಟ್ರಾಫಿಕ್ ನಿಯಂತ್ರಿಸಿದ ವ್ಯಕ್ತಿ: ಅಪರೂಪದ ಘಟನೆಗೆ ಸಾಕ್ಷಿಯಾದ ಕೊಡಗಿನ ಸಿದ್ದಾಪುರ

ಹಾಲಿ ಉದ್ಯೋಗದಲ್ಲಿರುವ ಅಂಗನವಾಡಿ ಶಿಕ್ಷಕಿಯರು, ಸಹಾಯಕರಿಗೇ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಆದ್ರೆ ಈ ಅಧಿಕಾರಿಗಳು ಮಾತ್ರ ಇಲ್ಲದ ಹುದ್ದೆ ಸೃಷ್ಟಿಸಿ ಲಕ್ಷಾಂತರ ಹಣ ನುಂಗಿರೋದು ಅಕ್ಷಮ್ಯ. ಹೀಗಾಗಿ ಇವರ ವಿರುದ್ಧ ಕಠಿಣಕ್ರಮ ಆಗಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ಸಿಡಿಪಿಒ ಮಹೇಶ್ ದೂರಿನ ಅನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಗೋಪಾಲ್​ ಸೋಮಯ್ಯ
Loading...
Unable to load recommendations.
Follow Us