
ಕೋಲಾರ, (ಏಪ್ರಿಲ್ 25): ಪತಿಯ ಕುಟುಂಬಸ್ಥರಿಂದ ಮಾನಸಿಕ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷದಲ್ಲಿ ಮಹಿಳೆ ಆತ್ಮಹತ್ಯೆ (Woman Suicide) ಮಾಡಿಕೊಂಡಿದ್ದಾಳೆ. ಕೋಲಾರ (Kolar) ಜಿಲ್ಲೆ ಮಾಲೂರು ತಾಲೂಕು ಕಾಡದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ರಶ್ಮೀ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ನೋಟ್ನಲ್ಲಿ ತನ್ನ ಪತಿ ಹಾಗೂ ತನ್ನ ತಂದೆ ತಾಯಿಗೂ ಸಾರಿ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೇ ನಿಮ್ಮ ಅಮ್ಮ (ಪತಿಯ ತಾಯಿ), ದೊಡ್ಡಮ್ಮನ ಕಾಟ ತಡೆಯೋಕ್ಕೆ ಆಗುತ್ತಿಲ್ಲ. ಇವರು ಒಳ್ಳೆಯವರಲ್ಲ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.
ದಿನೇಶ್ ಹಾಗೂ ರಶ್ಮಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 1 ವರ್ಷದ ಹಿಂದೆ ಅಷ್ಟೇ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಒಂದೇ ವರ್ಷದಲ್ಲಿ ರಶ್ಮಿ ದುರಂತ ಸಾವು ಕಂಡಿದ್ದಾಳೆ. ಪತಿ ಮನೆಯಲ್ಲೇ ಡೆತ್‌ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೀ ಸಾರಿ ನಿಮ್ಮ ಅಮ್ಮ, ದೊಡ್ಡಮ್ಮನ ಕಾಟ ತಡೆಯೋಕ್ಕೆ ಆಗುತ್ತಿಲ್ಲ, ನಾನು ಬಂದಾಗಿನಿಂದ ನೆಮ್ಮದಿಯೆ ಇಲ್ಲ, ನಾನು ಸಹಿಸಿಕೊಳ್ಳೋಕೆ ಆಗುತ್ತಿಲ್ಲ, ನನ್ನ ಗಂಡ ಒಳ್ಳಯವನೆ . ಆದ್ರೆ ಮನೆಯವರು ಒಳ್ಳೆಯವರಲ್ಲ. ಅದಕ್ಕೆ ನೀವು ಬರುವಷ್ಟರಲ್ಲಿ ಸಾಯುತ್ತಿದ್ದೇನೆ ಬಾಯ್. ಅಮ್ಮ ಇಷ್ಟು ದಿನ ಇಲ್ಲಿನ ಕಷ್ಟ ಸಹಿಸಿಕೊಂಡೆ. ಇಲ್ಲಿನವರು ಒಳ್ಳಯವರಲ್ಲ. ವರದಕ್ಷಿಣೆ ತಂದಿಲ್ಲ ಎಂದು ಹೊಡೆಯುತ್ತಾರೆ ಎಂದು ಉಲ್ಲೇಖ ಮಾಡಿರುವ ರಶ್ಮಿ, ಪತಿ ಹಾಗೂ ತನ್ನ ತಂದೆ ತಾಯಿಗೂಗೂ ಸಾರಿ ಕೇಳಿ ಗಂಡನ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ
ಇನ್ನೂ ಮೂರು ತಿಂಗಳ ಹಿಂದೆ ರಶ್ಮಿಗೆ ಗರ್ಭಪಾತವಾಗಿತ್ತು. ಹೀಗಾಗಿ ವರದಕ್ಷಿಣೆ ನೀಡಿಲ್ಲ, ಮಗು ಆಗಿಲ್ಲ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಸದ್ಯ ರಶ್ಮಿ ಡೆತ್‌ನೋಟ್ ಆಧರಿಸಿ ದೂರು ದಾಖಲಿಸಿಕೊಂಡಿರುವ ಮಾಲೂರು ಪೊಲೀಸರು, ಪತಿ ಸೇರಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.