ಬೈಕ್ ಆಕ್ಸಿಡೆಂಟ್: ಬಂಗಾರಪೇಟೆ ಬಳಿ ಡಿವೈಎಸ್ಪಿ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೆ ಸಾವು
ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ (Bike accident) ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ (Bangarapet) ತಾಲೂಕಿನ ನೇರಳೆಕೆರೆ ಬಳಿ ಘಟನೆ ನಡೆದಿದೆ.
ಕೆಜಿಎಫ್, ಅಕ್ಟೋಬರ್ 4: ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ (Bike accident) ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ (Bangarapet) ತಾಲೂಕಿನ ನೇರಳೆಕೆರೆ ಬಳಿ ಘಟನೆ ನಡೆದಿದೆ. ಕೆಜಿಎಫ್ನಲ್ಲಿ ( KGF) ಇಂಜಿನಿಯರಿಂಗ್ ಮಾಡ್ತಿದ್ದ ವಿದ್ಯಾರ್ಥಿ (engineering student) ಧೀರಜ್ (21) ಮೃತ ಪಟ್ಟ ಯುವಕ.
ಧೀರಜ್ ಚಿತ್ರದುರ್ಗದ ಡಿವೈಎಸ್ಪಿ ಅನಿಲ್ ಕುಮಾರ್ ಅವರ ಮಗ. ಬೈಕ್ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ:
ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತಿಪ್ಪಶೆಟ್ಟಿಹಳ್ಳಿ ಗ್ರಾಮದ ಬಾವಿಯಲ್ಲಿ ಕೃಷ್ಣಪ್ಪ(45) ಮೃತದೇಹ ಪತ್ತೆಯಾಗಿದೆ. ಕೃಷ್ಣಪ್ಪ ಕಾಣೆಯಾಗಿದ್ದ ಬಗ್ಗೆ ಕುಟುಂಬಸ್ಥರು 2 ದಿನದ ಹಿಂದೆ ದೂರು ನೀಡಿದ್ದರು. ವೀಳ್ಯದೆಲೆ ಕೊಯ್ಯುವ ಸಲುವಾಗಿ ಗಂಗರಾಜು ತೋಟಕ್ಕೆ ಹೋಗಿದ್ದರು. ಕೊಲೆಗೈದು ಶವವನ್ನು ಬಾವಿಗೆ ಎಸೆದಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Wed, 4 October 23