ಶ್ರಾವಣ ಶನಿವಾರ: ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಲಾರಿಗೆ ಕಾರು ಡಿಕ್ಕಿ, DySP ತಂದೆ ಸಾವು
ಘಟನೆಯಲ್ಲಿ ಹುಣಸೂರು ಅಬಕಾರಿ DySP ವಿಜಯ್ ಕುಮಾರ್, ಅವರ ತಾಯಿ ಮತ್ತು ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಅವರುಗಳು ಗಾಯಗೊಂಡಿದ್ದಾರೆ. ವಿಜಯ್ ಕುಮಾರ್ ಅವರ ಕುಟುಂಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಶ್ರಾವಣ ಶನಿವಾರವಾದ ಇಂದು ಆಂಧ್ರದ ಪಲಮನೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಲಾರ, ಸೆಪ್ಟೆಂಬರ್ 2: ಆಂಧ್ರದ ಪಲಮನೇರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Palamaner on National Highway) ಲಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿಯಾಗಿ ಅಪಘಾತ (accident) ಸಂಭವಿಸಿದ್ದು, ಹುಣಸೂರು ಅಬಕಾರಿ DySP ತಂದೆ (Hunsur Excise DySp) ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಗಿರಿಗೌಡ (80) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮೂವರಿಗೆ ಗಾಯಗಳಾಗಿವೆ. ಮೃತ ಗಿರಿಗೌಡ ಅವರು ಹುಣಸೂರು ಅಬಕಾರಿ DySP ವಿಜಯ್ ಕುಮಾರ್ ಅವರ ತಂದೆ.
ಘಟನೆಯಲ್ಲಿ ಹುಣಸೂರು ಅಬಕಾರಿ DySP ವಿಜಯ್ ಕುಮಾರ್, ಅವರ ತಾಯಿ ಮತ್ತು ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಅವರುಗಳು ಗಾಯಗೊಂಡಿದ್ದಾರೆ. ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯ್ ಕುಮಾರ್ ಅವರ ಕುಟುಂಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗುತ್ತಿದ್ದಾಗ ಶ್ರಾವಣ ಶನಿವಾರವಾದ ಇಂದು ಆಂಧ್ರದ ಪಲಮನೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Also Read: ಕೋಲಾರದ ರೈತನಿಗೆ ಬಂಗಾರದ ಬೆಳೆಯಾದ ಸೀಬೆ; ಲಕ್ಷ ಲಕ್ಷ ಆದಾಯಕ್ಕೆ ಕಾರಣವಾಯ್ತು ಮಿಶ್ರ ಬೆಳೆ
ಡಿಎಸ್ಪಿ ವಿಜಯ್ ಕುಮಾರ್ ಎರಡು ಕಾಲುಗಳಿಗೆ ಗಾಯಗಳಾಗಿವೆ, ಇನ್ನು ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಗೆ ಸಣ್ಣಪುಟ್ಟ ಗಾಯಗಳಾಗಿವೆ, ಡಿಎಸ್ಪಿ ವಿಜಯ್ ಕುಮಾರ್ ಅವರ ತಾಯಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಆಟ ಆಡ್ತಾ ಆಡ್ತಾ ವಿಷ ಸೇವನೆ ಮಾಡಿಬಿಟ್ಟ ಪುಟ್ಟ ಕಂದಮ್ಮಗಳು, ತೀವ್ರ ಅಸ್ವಸ್ಥ
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) ಸೆಪ್ಟೆಂಬರ್ 2: ಮನೆ ಮುಂದೆ ರಸ್ತೆಯಲ್ಲಿ ಆಟವಾಡುವ ವೇಳೆ ಮೂರು ಪುಟ್ಟ ಕಂದಮ್ಮಗಳು ವಿಷ (poison) ಸೇವಿಸಿದ್ದು, ತೀವ್ರ ಅಸ್ವಸ್ಥಗೊಂಡಿವೆ. ದೇವನಹಳ್ಳಿ (devanahalli) ಪಟ್ಟಣದ ವಿನಾಯಕ ನಗರದಲ್ಲಿ ಈ ಅಚಾತುರ್ಯ ಘಟನೆ ನಡೆದಿದೆ. ಸುಚಿತ್ರಾ ( 3 ) ಲೋಹಿತ್ಯಾ ( 4 ) ವೇದಾಂತ ( 3 ) ವಿಷ ಸೇವನೆಯಿಂದ ಅಸ್ವಸ್ಥರಾದ ಮಕ್ಕಳು (toddlers).
ರಸ್ತೆ ಬದಿಯಲ್ಲಿ ಪ್ಯಾಕೆಟ್ ನಲ್ಲಿ ತುಂಬಿದ್ದ ಡ್ರೈನೇಜ್ ಕ್ಲೀನರ್ (D-Klog) ಪಾಯಿಸನ್ ಅನ್ನು ಸಕ್ಕರೆಯೆಂದು ಭಾವಿಸಿ, ಮೂವರೂ ಮಕ್ಕಳು ತಿಂದುಬಿಟ್ಟಿವೆ. ಅದೃಷ್ಟವಶಾತ್ ಮೂರೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 am, Sat, 2 September 23