ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ: ಒಬ್ಬೊಬ್ಬರೇ ಗ್ರಾಹಕರು ಆಸ್ಪತ್ರೆ ದಾಖಲು

Kolar News: ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ‌ ಬಿಜಿಟಿ ಹೋಟೆಲ್​​​ನಲ್ಲಿ ಅನುಹುತವೊಂದು ನಡೆದಿದೆ. ಬಿರಿಯಾನಿ ಮತ್ತು ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ ಆಗಿದೆ. ಆದರೆ ಬಿರಿಯಾನಿ ತಿಂದಿದ್ದ ಗ್ರಹಕರಿಬ್ಬರು ಇದೀಗ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಸದ್ಯ ಬಿಜಿಟಿ ಹೋಟೆಲ್ ಬಂದ್​ಗೆ ಆದೇಶಿಸಲಾಗಿದೆ.

ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ: ಒಬ್ಬೊಬ್ಬರೇ ಗ್ರಾಹಕರು ಆಸ್ಪತ್ರೆ ದಾಖಲು
ಬಿರಿಯಾನಿಯಲ್ಲಿ ಹಲ್ಲಿ ಪತ್ತೆ
Image Credit source: tv9 kannada
Edited By:

Updated on: Jun 24, 2026 | 3:30 PM

ಮುಖ್ಯಾಂಶಗಳು

  • ಗ್ರಾಹಕನಿಗೆ ಕೊಟ್ಟಿದ್ದ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಹಲ್ಲಿ ಪತ್ತೆ
  • ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಘಟನೆ
  • ಆಸ್ಪತ್ರೆಗೆ ದಾಖಲಾದ ಇಬ್ಬರು ಗ್ರಾಹಕರು

ಕೋಲಾರ, ಜೂನ್​​ 24: ಸತ್ತ ಹಲ್ಲಿ ಬಿದ್ದಿದ್ದ ಬಿರಿಯಾನಿ (biryani), ಮೊಸರು ಬಜ್ಜಿ ತಿಂದು ಓರ್ವ ಗ್ರಾಹಕರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ಕೋಲಾರ (kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದ‌ಲ್ಲಿ ನಡೆದಿದೆ. ಬಿಜಿಟಿ ಮಾಂಸಾಹಾರಿ ಹೋಟೆಲ್​ನಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಹಲ್ಲಿ ಪತ್ತೆ ಆಗಿದೆ. ನೇರಳೆಕೆರೆ ನಿವಾಸಿ ಲಲಿತಾ ಅವರು ವಾಂತಿ, ಭೇದಿ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಆಹಾರ ಸೇವಿಸಿದ್ದ ಮತ್ತೋರ್ವ ವ್ಯಕ್ತಿಯೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆಹಾರ, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ತನಿಖೆಗೆ ಒತ್ತಾಯಿಸಲಾಗಿದೆ.

ನಡೆದಿದ್ದೇನು?

ನೇರಳೆಕೆರೆ ನಿವಾಸಿ ಲಲಿತಾ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ‌ ಕಾರೋನೇಷನ್​​ ರಸ್ತೆಯಲ್ಲಿರುವ ಬಿಜಿಟಿ ಹೋಟೆಲ್​​​ ತೆರಳಿದ್ದಾರೆ. ಈ ವೇಳೆ ಅವರಿಗೆ ಕೊಟ್ಟಿದ್ದ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ ಆಗಿದೆ. ಕೂಡಲೇ ಹೋಟೆಲ್ ಮಾಲೀಕರ ಗಮನಕ್ಕೆ ತಂದಿದ್ದಾರೆ. ಆಗ ಬೇರೆ ಬಿರಿಯಾನಿ ಕೊಟ್ಟು ಸಮಾಧಾನ ಮಾಡಿದ್ದಾರೆ. ಇನ್ನು ಉಳಿದ ಜನರು ಬಿರಿಯಾನಿ ಬಿಟ್ಟು ತೆರಳಿದರು.

ಇದನ್ನೂ ಓದಿ: ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!

ಬಿರಿಯಾನಿ ತಿಂದಿದ್ದ ಲಲಿತಾ ಅವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಸದ್ಯ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಟೆಲ್ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದು ಲಲಿತಾ ಆರೋಪ ಮಾಡಿದ್ದಾರೆ.

ಬಿಜಿಟಿ ಹೋಟೆಲ್ ಬಂದ್

ಇನ್ನು ಘಟನೆ ಹಿನ್ನೆಲೆ ಜಿಲ್ಲಾ ಆಹಾರ ಸುರಕ್ಷತಾ ನಿರೀಕ್ಷಕ ಪ್ರತೀಶ್, ನಗರಸಭೆ ಆಯುಕ್ತ ಸತ್ಯನಾರಾಯಣ, ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಸೇರಿದಂತೆ ಅಧಿಕಾರಿಗಳು ಪರಿಶೀಲನೆ ಮಾಡಿದರು. ಹೋಟೆಲ್‌ನಲ್ಲಿ ತಯಾರಿಸಲಾಗಿದ್ದ ಆಹಾರದ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ರವಾನಿಸಿದ್ದಾರೆ. ವರದಿ ಬರುವವರೆಗೆ ಬಿಜಿಟಿ ಹೋಟೆಲ್ ಬಂದ್ ಮಾಡಲು ಅಧಿಕಾರಿಗಳು ಆದೇಶಿಸಿದ್ದು, ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಕುರಿತು ತನಿಖೆ ಆರಂಭಿಸಿದ್ದಾರೆ.

ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯ ಬಂಧನ

ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಅಬಕಾರಿ ಉಪಾಯುಕ್ತೆ ಸಯ್ಯದ್ ಅಜಮತ್ ಆಫ್ರೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಚಂದ್ರ ಪ್ರಕಾಶ್​​ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ

ಕೋಲಾರ ತಾಲೂಕಿನ ಹೊದಲವಾಡಿ ಗ್ರಾಮದಲ್ಲಿ ಆರೋಪಿ ಚಂದ್ರ ಪ್ರಕಾಶ್, ಹನುಮಪ್ಪ ಎಂಬುವವರ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ. ಸದ್ಯ 22 ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us