ಮಾವಿನ ಸಂಸ್ಕರಣಾ ಘಟಕದ ನಿರೀಕ್ಷೆಯಲ್ಲಿ ಬೆಳೆಗಾರರು; ಮುಂಬರುವ ಬಜೆಟ್​ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ರೈತರಿಂದ ಒತ್ತಾಯ

ಕೋಲಾರ ಜಿಲ್ಲೆಯಲ್ಲಿ ಹೂ, ಹಣ್ಣು, ತರಕಾರಿಗಳನ್ನು ಎತ್ತೇಚ್ಛವಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಶ್ರೀನಿವಾಸಪುರದಲ್ಲಿ ಬಾದಾಮಿ, ಸೇಂದೂರ, ರಾಜಗೀರ, ತೊತಾಪುರಿ, ಮಲಗೋಬಾ, ಬೇನಿಷಾನ್, ರಸಪುರಿ, ಹೀಗೆ ವಿವಿಧ ತಳಿಯ ಮಾವಿನ ಹಣ್ಣು ಬೆಳೆಯಲಾಗುತ್ತದೆ.

ಮಾವಿನ ಸಂಸ್ಕರಣಾ ಘಟಕದ ನಿರೀಕ್ಷೆಯಲ್ಲಿ ಬೆಳೆಗಾರರು; ಮುಂಬರುವ ಬಜೆಟ್​ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ರೈತರಿಂದ ಒತ್ತಾಯ
ಮಾವಿನ ಮರ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: preethi shettigar

Updated on:Feb 19, 2022 | 9:06 AM

ಕೋಲಾರ: ಮಾವಿನ ತವರಲ್ಲಿ ಮಾವು(Mango) ಬೆಳೆಗಾರರಿಗೆ ಭರವಸೆಯ ಕೂಗು ಬಹಳ ವರ್ಷಗಳಿಂದ ಬಾಕಿ ಉಳಿದು ಹೋಗಿದೆ. ಈ ಬಾರಿಯ ಬಜೆಟ್​ಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾವು ಬೆಳೆಗಾರರು ಈ ಬಾರಿಯಾದರೂ ನಮಗೆ ಮಾವು ಸಂಸ್ಕರಣಾ ಘಟಕ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಹಣ್ಣುಗಳ ರಾಜ ಎಂದೇ ಖ್ಯಾತಿ ಹೊಂದಿರುವ ಮಾವನ್ನು ಅತಿ ಹೆಚ್ವು ಬೆಳೆಯುವ ಜಿಲ್ಲೆ ಕೋಲಾರ, ಇಲ್ಲಿಯ ಮಾವು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, ಸಾವಿರಾರು ಟನ್​ನಷ್ಟು ಮಾವು ಉತ್ಪಾದನೆಯಾಗಲಿದೆ. ಪರಿಣಾಮ ಮಾವು ಬೆಳೆಗಾರರು ಹಾಗೂ ರೈತರ(Farmer) ಹಿತದೃಷ್ಟಿಯಿಂದ ಕೋಲಾರ ಜಿಲ್ಲೆಯಲ್ಲಿ ಮಾವು ಅಥವಾ ಹಣ್ಣು(Fruits) ಸಂಸ್ಕರಣಾ ಘಟಕ ಸ್ಥಾಪನೆ ಮಾಡುವಂತೆ ಮಾವು ಬೆಳೆಗಾರರರು ಮನವಿ ಮಾಡಿದ್ದಾರೆ.

ಮುಂಬರುವ ರಾಜ್ಯ ಬಜೆಟ್​ನಲ್ಲಿ ಕೋಲಾರ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಮಾಡಿದರೆ ಜಿಲ್ಲೆಯಲ್ಲಿ ರೈತರಿಗೆ ನೆರವಾಗಲಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಹೆಚ್ಚಾಗಿ ಟೊಮ್ಯಾಟೋ ಬೆಳೆಯಲಿದ್ದು, ಜಿಲ್ಲೆಯ ಟೊಮ್ಯಾಟೋ ಇತರೆ ರಾಜ್ಯ, ವಿದೇಶಗಳಿಗೂ ರಫ್ತಾಗುತ್ತದೆ. ಈ ಹಿಂದೆ ರಾಜ್ಯ ಸರ್ಕಾರವೇ ರಾಮನಗರ ಜಿಲ್ಲೆಗೆ ಸಂಸ್ಕರಣಾ ಘಟಕ ನೀಡಿದೆ. ಅದರಂತೆ ಜಿಲ್ಲೆಯ ರೈತರು ಹೆಚ್ಚಾಗಿ ಬೆಳೆಯುವ ಹಣ್ಣು ತರಕಾರಿಗಳನ್ನು ಸಂಸ್ಕರಣೆ ಮಾಡಲು ಬೇಕಾದ ಸಂಸ್ಕರಣಾ ಘಟಕವನ್ನು ನೀಡಬೇಕು ಎಂದು ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮನವಿ ಮಾಡಿದ್ದಾರೆ.

ಇನ್ನೂ ಕೋಲಾರ ಜಿಲ್ಲೆಯಲ್ಲಿ ಹೂ, ಹಣ್ಣು, ತರಕಾರಿಗಳನ್ನು ಎತ್ತೇಚ್ಛವಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಶ್ರೀನಿವಾಸಪುರದಲ್ಲಿ ಬಾದಾಮಿ, ಸೇಂದೂರ, ರಾಜಗೀರ, ತೊತಾಪುರಿ, ಮಲಗೋಬಾ, ಬೇನಿಷಾನ್, ರಸಪುರಿ, ಹೀಗೆ ವಿವಿಧ ತಳಿಯ ಮಾವಿನ ಹಣ್ಣು ಬೆಳೆಯಲಾಗುತ್ತದೆ. ಜೊತೆಗೆ ಶ್ರೀನಿವಾಸಪುರದ ರೈತರು ಬೆಳೆಯುವ ಮಾವು ವಿಶೇಷ ರುಚಿ ಹೊಂದಿರುತ್ತದೆ ಎನ್ನುವ ಕಾರಣಕ್ಕೆ ಇಲ್ಲಿನ ಮಾವಿಗೆ ದೇಶ ಹಾಗೂ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಮಾವಿನ ಸೀಜನ್​ ಬಂದರೆ ಸಾಕು ಬೇರೆ ರಾಜ್ಯಗಳ ಮಾವಿನ ವ್ಯಾಪಾರಿಗಳು ಶ್ರೀನಿವಾಸಪುರ ಮಾರುಕಟ್ಟೆಗೆ ಲಗ್ಗೆ ಇಟ್ಟು ಮಾವು ಖರೀದಿಸಿ ರಫ್ತು ಮಾಡುತ್ತಾರೆ.

ಕೆಲವೊಮ್ಮೆ ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಾಗ ರಸ್ತೆಯಲ್ಲಿ ಸುರಿದು ಹೋಗುತ್ತಾರೆ. ಇಂಥ ಪರಿಸ್ಥಿತಿ ನಿವಾರಣೆ ಮಾಡಬೇಕೆಂದು ಕಳೆದ 20 ವರ್ಷಗಳಿಂದ ಮಾವು ಸಂಸ್ಕರಣಾ ಘಟಕ ಬೇಕೆಂದು ಜಿಲ್ಲೆಯ ರೈತರು ಒತ್ತಾಯ ಮಾಡಿದ್ದಾರೆ. ಹಾಗಾಗಿ ಈ ಬಾರಿಯಾದರೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ತೋಟಗಾರಿಕಾ ಸಚಿವರಾಗಿರುವ ಕಾರಣ ನಮ್ಮ ಬೇಡಿಕೆ ಈಡೇರುತ್ತದೆ ಎನ್ನುವ ನಿರೀಕ್ಷೆ ಇದೆ. ಪಕ್ಷ ಬೇದ ಮರೆತು ಬಜೆಟ್​ನಲ್ಲಿ ಮಾವು ಸಂಸ್ಕರಣಾ ಘಟಕ ಕೊಡಿ ಎನ್ನುವುದು ಮಾವು ಬೆಳೆಗಾರರಾದ  ಶ್ರೀನಿವಾಸರಡ್ಡಿ ಹೇಳಿದ್ದಾರೆ.

ಒಟ್ಟಿನಲ್ಲಿ ಮಾವಿನ ಕಣಜ ಎಂಬ ಖ್ಯಾತಿಗಳಿಸಿರುವ ಶ್ರೀನಿವಾಸಪುರದ ರೈತರು ತಾವು ಬೆಳೆದ ಮಾವನ್ನು ದೇಶ-ವಿದೇಶಗಳಿಗೆ ರಪ್ತು ಮಾಡಲು, ಒಳ್ಳೆಯ ಆದಾಯ ಗಳಿಸಬೇಕಾದರೆ ಸಂಸ್ಕರಣಾ ಘಟಕ ಅವಶ್ಯಕವಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಸಂಸ್ಕರಣ ಘಟಕ ಘೋಷಣೆ ಮಾಡಿದ್ದೇ ಆದಲ್ಲಿ ಮಾವು, ಟೊಮ್ಯಾಟೋ ಬೆಳೆದ ರೈತರಿಗೆ ದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ:

3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ

ಮಾವಿನ ಹಣ್ಣಿಗೆ ಪ್ರಸಿದ್ಧವಾದ ಕೋಲಾರದಲ್ಲಿ ಭರ್ಜರಿ ಸ್ಟ್ರಾಬೆರಿ ಫಸಲು, ಬಿಸಿಲು ಕಡಿಮೆ ಇರೋ ಜಾಗದಲ್ಲಿ ಬೆಳೆಯುವ ಬೆಳೆ ಬೆಳೆದು ಯಶಸ್ವಿಯಾದ ರೈತ

Published On - 9:03 am, Sat, 19 February 22

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು