Illegal cattle transportation: ಅಕ್ರಮ ಗೋವುಗಳ ಸಾಗಾಟ- ಲಾರಿಯಲ್ಲೇ ಉಸಿರು ಚೆಲ್ಲಿದ 5 ಹಸು, 2 ಲಾರಿ ಹಿಡಿದ ಗ್ರಾಮಸ್ಥರು
ಕಳೆದ ರಾತ್ರಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನ ಅಕ್ರಮವಾಗಿ ಕಸಾಯಿಖಾನೆಗೆ, ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನ ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಗಳಲ್ಲಿ ಹಸುಗಳು ಇರುವುದು ಕಂಡುಬಂದಿದೆ
ಕೋಲಾರ: ಅಕ್ರಮವಾಗಿ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ತಾಲೂಕಿನ ಚಾಕರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿವರ ಕಳೆದ ರಾತ್ರಿ ಎರಡು ಲಾರಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೋವುಗಳನ್ನ ಅಕ್ರಮವಾಗಿ ಕಸಾಯಿಖಾನೆಗೆ, ಚಾಕಾರಸನಹಳ್ಳಿ ಮಾರ್ಗವಾಗಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ವೇಳೆ ಅನುಮಾನಗೊಂಡ ಗ್ರಾಮಸ್ಥರು ಲಾರಿಗಳನ್ನ ತಡೆದು ಪರಿಶೀಲನೆ ನಡೆಸಿದ ವೇಳೆ ಲಾರಿಗಳಲ್ಲಿ ಹಸುಗಳು ಇರುವುದು ಕಂಡುಬಂದಿದ್ದು, ಅಕ್ರಮವಾಗಿ ಗೋವುಗಳನ್ನ ಸಾಗಿಸಲಾಗುತ್ತಿದೆ ಎಂದು ತಿಳಿದು, ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಇನ್ನು ಲಾರಿಗಳನ್ನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗೋವುಗಳಿದ್ದ ಹಿನ್ನೆಲೆ ಉಸಿರಾಡಲಾಗದೆ, ಕಳೆದೆರಡು ದಿನಗಳಿಂದ ಸರಿಯಾದ ಮೇವು ಇಲ್ಲದೆ ಸುಮಾರು ಐದು ಹಸುಗಳು ಲಾರಿಯಲ್ಲೇ ಸಾವನ್ನಪ್ಪಿದ್ದು, ಇದರಿಂದ ಲಾರಿಗಳಿಂದ ದುರ್ವಾಸನೆ ಬರುತ್ತಿದ್ದು, ಗೋವುಗಳ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಗ್ರಾಮಸ್ಥರ ಸಹಾಯದಿಂದ ವೇಮಗಲ್ ಪೊಲೀಸರು ಎರಡು ಲಾರಿಗಳನ್ನ ವಶಕ್ಕೆ ಪಡೆದು ಹಸುಗಳನ್ನು ರಕ್ಷಣೆ ಮಾಡಿದ್ದಾರೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Also Read: ಮದ್ದೂರು: ಮಾಜಿ ಪೊಲೀಸಪ್ಪನ ಪ್ರತಿಷ್ಠೆ, ದೊಡ್ಡರಸಿನಕೆರೆ ಗ್ರಾಮದಲ್ಲಿ ದೇಗುಲಕ್ಕೆ ಬೀಗ, ಬೀದಿಯಲ್ಲೇ ಉಳಿದ ಪವಾಡ ಬಸವ
Also Read: KGF: ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಗನ್ ಮ್ಯಾನ್ ಮೇಲೆ ಹಲ್ಲೆ; ಐವರು ದುಷ್ಕರ್ಮಿಗಳು ಅಂದರ್ ಆದರು
(illegal cattle transportation 2 lorries confiscated by villagers in kolar)
Published On - 9:52 am, Tue, 28 September 21