AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಚಳಿಗೆ ಗ್ರಾಹಕರಿಗೆ ಶಾಕ್​​​ ಕೊಟ್ಟ ಕೋಳಿ: ಗಗನಕ್ಕೇರಿದ ಮಾಂಸ, ಮೊಟ್ಟೆ ಬೆಲೆ

ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಕೋಳಿ ಮತ್ತು ಮೊಟ್ಟೆ ಬೆಲೆ ಗಗನಕ್ಕೇರಿದೆ. ಶೀತ ವಾತಾವರಣದಿಂದ ಕೋಳಿಗಳ ಬೆಳವಣಿಗೆ ಕುಂಠಿತಗೊಂಡು, ಮೊಟ್ಟೆ ಉತ್ಪಾದನೆಯೂ ಕಡಿಮೆಯಾಗಿದೆ. ಇದರಿಂದ ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದೆ ಬೆಲೆ ಹೆಚ್ಚಾಗಿದೆ. ಇದು ಮಾಂಸಪ್ರಿಯರಿಗೆ ಆರ್ಥಿಕ ಹೊರೆಯಾಗಿದ್ದು, ಗ್ರಾಹಕರು ಖರೀದಿಗೆ ಹಿಂಜರಿಯುತ್ತಿದ್ದಾರೆ. ಚಳಿಗಾಲದ ಈ ಪರಿಸ್ಥಿತಿ ಕೋಳಿ ಫಾರಂಗಳ ಮೇಲೂ ಪರಿಣಾಮ ಬೀರಿದೆ.

ಈ ಚಳಿಗೆ ಗ್ರಾಹಕರಿಗೆ ಶಾಕ್​​​ ಕೊಟ್ಟ ಕೋಳಿ: ಗಗನಕ್ಕೇರಿದ ಮಾಂಸ, ಮೊಟ್ಟೆ ಬೆಲೆ
ಸಾಂದರ್ಭಿಕ ಚಿತ್ರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Jan 10, 2026 | 7:24 PM

Share

ಕೋಲಾರ, ಜ.10: ಕೋಲಾರ ಸೇರಿದಂತೆ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಶೀತ ವಾತಾವರಣ ಇರುವ ಕಾರಣ ಚಳಿಗೆ ಹೊರಬರಲು ಆಗುತ್ತಿಲ್ಲ. ಕೋಲಾರದಲ್ಲಿ ಈ ಚಳಿ ವಾತಾವರಣಕ್ಕೆ ಮಾಂಸ ಹಾಗೂ ಮೊಟ್ಟೆಯ ಬೆಲೆ ಕೂಡ ಏರಿಕೆಯಾಗಿದೆ. ಚಳಿಯಿಂದ ಕೋಳಿಗಳು ಕೂಡ ಮೊಟ್ಟೆ (chicken egg prices) ಇಡುತ್ತಿಲ್ಲ, ಇದರಿಂದ ಮೊಟ್ಟೆ ಹಾಗೂ ಕೋಳಿ ಮಾಂಸಕ್ಕೆ ದರ ಏರಿಕೆಯಾಗಿದೆ. ಇದೀಗ ಈ ಬೆಲೆ ಏರಿಕೆಯ ಬಿಸಿ ಮಾಂಸ ಪ್ರಿಯರಿಗೆ ತಟ್ಟಿದೆ ಎಂದು ಹೇಳಲಾಗಿದೆ. ಕೋಳಿ ಫಾರಂಗಳಲ್ಲಿ ಈ ಚಳಿಗೆ ಕೋಳಿಗಳು ನಡುಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಚಳಿ ವಾತಾವರಣದಿಂದ ಕೋಳಿಗಳು ಮೊಟ್ಟೆ ಇಡುತ್ತಿಲ್ಲ. ಒಂದು ಕೆಜಿ ಚಿಕನ್ ಬೆಲೆ 280 ರಿಂದ 300 ರೂಪಾಯಿಗೆ ಏರಿಕೆ ಕಂಡಿದೆ, 180 ರಿಂದ 200 ರೂಪಾಯಿ ಇದ್ದ ಚಿಕನ್ ಬೆಲೆ ಈಗ ಏಕಾಏಕಿ ಏರಿಕೆ ಕಂಡಿದೆ. ಸದ್ಯ ಈ ಬೆಲೆ ಏರಿಕೆಗೆ ಕಾರಣ ಶೀತ ವಾತಾವರಣ ಎಂದು ಹೇಳಲಾಗಿದೆ. ಈ ವಾತಾವರಣದಿಂದ ಕೋಳಿ ಫಾರಂಗಳಲ್ಲಿ ಕೋಳಿಯ ಬೆಳವಣಿಗೆ ಮೇಲೆ ಪರಿಣಾಮ ಬೀದಿದೆ.

2.2 ಕೆಜಿ ತೂಕ ಬರಬೇಕಿದ್ದ ಕೋಳಿ ಕೇವಲ 1.8 ಕೆಜಿ ತೂಕ ಬರುತ್ತಿದೆ, ಅಲ್ಲದೆ ಕೋಳಿಯ ಮೊಟ್ಟೆ  ಕೂಡಾ ದರ ಏರಿಕೆಯಾಗಿದೆ. ಒಂದು ತಿಂಗಳಲ್ಲಿ 28 ರಿಂದ 30 ಮೊಟ್ಟೆ ಇಡುತ್ತಿದ್ದ ಕೋಳಿಗಳು ಸದ್ಯ ವಾತಾವರಣದ ಎಫೆಕ್ಟ್ ನಿಂದಾಗಿ 22 ರಿಂದ 24 ಮೊಟ್ಟೆ ಇಡುತ್ತಿದೆ ಎಂದು ಹೇಳಲಾಗಿದೆ. ಇದು ಗ್ರಾಹಕರು ಹಾಗೂ ಮಾರಾಟಗಾರ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಿದೆ. ಚಳಿಯ ವಾತಾವರಣದಿಂದಾಗಿ ಮಾಂಸ ಸೇವನ ಪ್ರಮಾಣ ಕೂಡಾ ಸಹಜವಾಗಿಯೇ ಹೆಚ್ಚಾಗಿದೆ ಹಾಗಾಗಿ ಬೇಡಿಕೆ ತಕ್ಕ ಉತ್ಪಾದನೆ ಸಿಗುತ್ತಿಲ್ಲ. ಈ ಕಾರಣಕ್ಕೆ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ; ರೈಲು ಪ್ರಯಾಣಿಕರಿಗೆ ಮಕರ ಸಂಕ್ರಾಂತಿಗೆ ಸಿಹಿಸುದ್ದಿ: ಬೆಂಗಳೂರಿನಿಂದ ಊರಿಗೆ ಹೋಗಲು ವಿಶೇಷ ರೈಲು

ಕೋಳಿ ಬೆಳವಣಿಗೆಗೂ ಚಳಿಗೂ ಏನು ಸಂಬಂಧ:

ಕೋಳಿಯ ಬೆಳವಣಿಗೆ ಹಾಗೂ ಚಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ, ಅದಕ್ಕೆ ಇಲ್ಲಿದೆ ನೋಡಿ ಕಾರಣ, ಕೋಳಿಗೆ ಫಾರಂಗಳಲ್ಲಿ ಸರಿಯಾದ ಸಮಯಕ್ಕೆ ಆಹಾರ ನೀರು, ಔಷದಿ ಎಲ್ಲವೂ ಸರಬರಾಜಾದರೂ ಕೂಡಾ ಚಳಿಗಾಲದಲ್ಲಿ  ಶೀತದ ವಾತಾವರಣ ಇರುವ ಕಾರಣ ಸೂರ್ಯನ ಬೆಳಕು ಇರುವುದಿಲ್ಲ. ಇದರಿಂದ ಬಿಸಿಲಿನ ಪ್ರಮಾಣದ ಕಡಿಮೆಯಾಗುತ್ತಿದೆ. ಇದರ ಜತೆಗೆ ಸಂಜೆ ಬೇಗ ಕತ್ತಲಾಗುತ್ತಿದೆ. ಬೆಳಿಗ್ಗೆ ತಡವಾಗಿ ಬೆಳಕಾಗೋದರಿಂದಾಗಿ ಸೂರ್ಯನ ಬಿಸಿಲಿಲ್ಲದೆ ಇರುವುದು ಕೋಳಿಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ.

ಇನ್ನು ಈ ಬೆಲೆ ಏರಿಕೆಯಿಂದ ಗ್ರಾಹಕರು ಮಾಂಸ ಹಾಗೂ ಮೊಟ್ಟೆಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗೆ ಜನರ ಯೋಚನೆ ಬದಲಾಗಿದೆ. 300 ರೂ. ಕೊಟ್ಟ ಕೋಳಿ ಮಾಂಸ ತಿನ್ನುವ ಬದಲು. ಮಟನ್​​​ ತಿನ್ನಬಹುದಲ್ಲ ಎಂದು ಯೋಚನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಈ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಚಿಕನ್ ಹಾಗೂ ಮೊಟ್ಟೆ ಬೇಡಿಕೆ ಕಡಿಮೆ ಆಗಿದೆ. ಆದರೆ ಕೆಲವೊಂದು ಕಡೆ ಇದರಿಂದ ಕೋಳಿ ಫಾರಂ ಮಾಲೀಕರಿಗೆ ಯಾವುದೇ ನಷ್ಟ ಇಲ್ಲ ಎಂದು ಹೇಳಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Sat, 10 January 26

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​