ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ

ಕೋಲಾರದ ಆಜಾದ್ ನಗರದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆ ರಾಜಿ ಪಂಚಾಯ್ತಿ ವೇಳೆ ಆಯೇಷಾ ಎಂಬಾಕೆ ತನ್ನ ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆನ್ನಲಾದ ಮಹಿಳೆ ಮುಸ್ಕಾನ್ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಮೂರು ತಿಂಗಳ ಹಿಂದೆ ಓಡಿಹೋಗಿದ್ದ ಜೋಡಿಯನ್ನು ಮಾತುಕತೆಗೆ ಕರೆಸಿದ್ದಾಗ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಆ್ಯಸಿಡ್ ದಾಳಿ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ
ಗಾಯಾಳುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
Edited By:

Updated on: Apr 02, 2026 | 7:44 AM

ಕೋಲಾರ, ಏಪ್ರಿಲ್ 2: ಕೋಲಾರ (Kolar) ಜಿಲ್ಲಾ ಕೇಂದ್ರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ನಡೆದ ರಾಜಿ ಸಂಧಾನ ವಿಕೋಪಕ್ಕೆ ತಿರುಗಿ, ಮಹಿಳೆಯೊಬ್ಬಳು ತನ್ನ ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಆಸಿಡ್ ಎರಚಿದ್ದಾಳೆ. ಘಟನೆಯಲ್ಲಿ ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು. ಆಯೇಷಾಳ ಪತಿ ಶಾಬಾಜ್ ಅಹಮದ್‌ನ ತಮ್ಮನ ಪತ್ನಿ ಮುಸ್ಕಾನ್ ಎನ್ನಲಾಗಿದೆ. ಮುಸ್ಕಾನ್ ಪತಿ ಕುಡಿತದ ವ್ಯಸನಿಯಾಗಿದ್ದು, ಸಂಸಾರ ನಿರ್ವಹಣೆಯಲ್ಲಿ ವಿಫಲನಾಗಿದ್ದ. ಈ ಸಂದರ್ಭದಲ್ಲಿ ಶಾಬಾಜ್ ಅಹಮದ್ ಹಣಕಾಸಿನ ನೆರವು ನೀಡುತ್ತಿದ್ದ. ಅಲ್ಲದೆ, ಆ ನೆಪದಲ್ಲಿ ಮುಸ್ಕಾನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದ ಎಂಬ ಆರೋಪವಿದೆ.

ಮೂರು ತಿಂಗಳ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಅಹಮದ್ ಓಡಿಹೋಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಸಂಬಂಧಿಕರು ಇವರನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದಿದ್ದರು.

ರಾಜಿ ಸಂಧಾನದಲ್ಲಿ ಗಲಾಟೆ

ಸಮಸ್ಯೆಯನ್ನು ಬಗೆಹರಿಸಲು ಬುಧವಾರ ರಾತ್ರಿ ಸಂಬಂಧಿಕರ ಮನೆಯೊಂದರಲ್ಲಿ ‘ರಾಜಿ ಪಂಚಾಯ್ತಿ’ ಹಮ್ಮಿಕೊಳ್ಳಲಾಗಿತ್ತು. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಆಕ್ರೋಶಗೊಂಡ ಆಯೇಷಾ, ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿದ್ದಾಳೆ. ದಾಳಿಯ ಬಳಿಕ ಆಯೇಷಾ ಸ್ಥಳದಿಂದ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ವಿಷಯ ತಿಳಿಯುತ್ತಿದ್ದಂತೆಯೇ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನೋವಿನಿಂದ ನರಳುತ್ತಿದ್ದ ಮುಸ್ಕಾನ್ ಅವರನ್ನು ತಮ್ಮ ಜೀಪ್‌ನಲ್ಲೇ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿದ್ದ ಆಯೇಷಾಳನ್ನು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Loading...
Unable to load recommendations.
Follow Us