Kolar News: ಮೂವರು ನಕಲಿ ಎಸಿಬಿ ಅಧಿಕಾರಿಗಳ ಬಂಧನ: ಯಾರು ಮಾಡದ ತಪ್ಪನ್ನು ನಾವೇನು ಮಾಡಿಲ್ಲವೆಂದ ಆರೋಪಿಗಳು
ಕೋಟ್ಯಂತರ ಹಣ ಲೂಟಿ ಮಾಡಿದವರನ್ನು ಹೊರತಂದವರೆ ನಾವು ಎಂದು ನಕಲಿ ಎಸಿಬಿ ಅಧಿಕಾರಿಗಳು ತಮ್ಮ ಕೆಲಸವನ್ನ ಸಮರ್ತಿಸಿಕೊಂಡರು.
ಕೋಲಾರ: ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು (fake ACB officers) ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಗರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಎಂಬುವರಿಗೆ ತಾವು ಎಸಿಬಿ ಅಧಿಕಾರಿಗಳು ಎಂದು ಕರೆ ಮಾಡಿ, ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಮ್ಮ ಭ್ರಷ್ಟಾಚಾರದ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ನಿಮ್ಮ ಮೇಲೆ ದಾಳಿ ಮಾಡದಂತೆ ಇರಬೇಕಾದರೆ, ನಾವು ಹೇಳಿದ ಅಕೌಂಟ್ಗೆ ಲಕ್ಷ ರೂಪಾಯಿ ಹಣ ಹಾಕಿ ಎಂದು ಬೆದರಿಕೆ ಹಾಕಿದ್ದರು. ಅನುಮಾನಗೊಂಡ ನಾರಾಯಣಗೌಡ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಸ್ಪಿ ಡಿ. ದೇವರಾಜ್ ಅವರ ಮಾರ್ಗದರ್ಶನದಲ್ಲಿ ಬಾಗಲಕೋಟಯಲ್ಲಿ ಮೂವರು ಆರೋಪಿಗಳ ಬಂಧಿಸಲಾಗಿದೆ. ಚಿಕ್ಕೋಡಿಯ ಸಾದಲಗ ಮೂಲದ ಮುರಿಗಪ್ಪ, ಸಕಲೇಶಪುರ ಮೂಲದ ರಜನಿಕಾಂತ್ ಹಾಗೂ ಮಹಾರಾಷ್ಟ್ರ ಕೊಲ್ಲಾಪುರ ಮೂಲದ ರಾಜೇಶ್ ಬಂಧಿತ ನಕಲಿ ಎಸಿಬಿ ಅಧಿಕಾರಿಗಳು.
ಇದನ್ನೂ ಓದಿ: Raichur News: ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು: ಸೇತುವೆ ಇಲ್ಲದೇ ವಿದ್ಯಾರ್ಥಿಗಳ ಪರದಾಟ
ಬಂಧಿತ ಆರೋಪಿ ಮುರಿಗಪ್ಪ 2008ರಲ್ಲಿ ಡಿಸ್ಮಿಸ್ ಆದ ಪೊಲೀಸ್ ಪೇದೆ. ಆರೋಪಿಗಳ ವಿರುದ್ಧ ಬೆಂಗಳೂರು ಸೇರಿದಂತೆ ವಿವಿಧ ಠಾಣೆಯಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡೆಸಿ ನಂತರ ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ. ಪೋಲೀಸ್ ವಾಹನಕ್ಕೆ ಹತ್ತಿಸುವ ಸಮಯದಲ್ಲಿ ಯಾರು ಮಾಡದ ತಪ್ಪು ನಾವು ಮಾಡಿಲ್ಲ. ಕೋಟ್ಯಂತರ ಹಣ ಲೂಟಿ ಮಾಡಿದವರನ್ನು ಹೊರತಂದವರೆ ನಾವು ಎಂದು ನಕಲಿ ಎಸಿಬಿ ಅಧಿಕಾರಿಗಳು ತಮ್ಮ ಕೆಲಸವನ್ನ ಸಮರ್ತಿಸಿಕೊಂಡರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ: ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿಗಳು ಡಾಬಾದಲ್ಲಿ ಮೊಬೈಲ್ ಕಳ್ಳತನಗೈದು ಕಳ್ಳ ಪರಾರಿ
ವಿಜಯಪುರ: ಡಾಬಾದಲ್ಲಿ ಮೊಬೈಲ್ ಕಳ್ಳತನಗೈದು ಕಳ್ಳ ಪರಾರಿಯಾಗಿರುವಂತಹ ಘಟನೆ ನಗರದ ಸೋಲಾಪುರ ರಸ್ತೆಯ ರಾಜಸ್ಥಾನಿ ಡಾಬಾದಲ್ಲಿ ನಡೆದಿದೆ. ಡಾಬಾದ ಹಿಂಬದಿಯಿಂದ ಒಳಗಡೆ ನುಗ್ಗಿ ಕೃತ್ಯ ಎಸಗಲಾಗಿದೆ. ಡಾಬಾ ಮಾಲೀಕ ಗೋಪಾಲಗೆ ಸೇರಿದ ಮೊಬೈಲ್ ಕಳ್ಳತನವಾಗಿದ್ದು, ಕದೀಮನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.