
ಕೋಲಾರ, ಜೂನ್ 21: ಹಣ್ಣುಗಳ ರಾಜ ಮಾವಿಗೆ ಮಾರುಕಟ್ಟೆಯಲ್ಲಿ ದಿನೇ ದಿನೆ ಬೇಡಿಕೆ ಹಾಗೂ ಬೆಲೆ ಕುಸಿತದ ಪರಿಣಾಮ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆಂಧ್ರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಬೇಡಿಕೆಗ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಜೂನ್ 22ರ ಸೋಮವಾರ ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲಾ ಬಂದ್‌ಗೆ ಕರೆ ನೀಡುವ ಬಗ್ಗೆ ಮಾವು ಬೆಳೆಗಾರರು ಎಚ್ಚರಿಸಿದ್ದಾರೆ. ಮಂಡಿ ಮಾಲೀಕರು, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕೂಡ ಬಂದ್‌ಗೆ ಬೆಂಬಲ ಸೂಚಿಸೋದಾಗಿ ತಿಳಿಸಿದ್ದಾರೆ.
ಸತತವಾಗಿ 4 ವಾರಗಳಿಂದ ಮಾವು ಬೆಲೆ ಪಾತಾಳಕ್ಕೆ ಕುಸಿದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಒಂದು ಟನ್ ಮಾವು 3ರಿಂದ 4 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಟನ್ಗೆ ಕನಿಷ್ಠ 8 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲವೆ ನಷ್ಟ ಪರಿಹಾರ ಘೋಷಿಸಬೇಕು ಎಂಬುದು ಮಾವು ಬೆಳೆಗಾರರ ಪ್ರಮುಖ ಆಗ್ರಹವಾಗಿದೆ. ಜಿಲ್ಲೆಯ 45,565 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 5,50,190 ಟನ್ ಮಾವು ಬೆಳೆಯಲಾಗುತ್ತೆ. ಶ್ರೀನಿವಾಸಪುರ ತೋತಾಪುರಿ, ರಾಜಗಿರ, ಮಲ್ಲಿಕಾ, ಬಾದಾಮಿ, ಬೇನಿಶಾ, ರಸಪುರಿ, ನೀಲಂ, ದಶೇರಿ, ನೀಲಂ, ಸಕ್ಕರೆ ಗುತ್ತಿ ಸೇರಿ ಹಲವು ತಳಿ ಇವುಗಳಲ್ಲಿ ವಿಶೇಷವಾದುವು.
ಇದನ್ನೂ ಓದಿ: ಕೆಂಪು ಸುಂದರಿಗೆ ಮತ್ತೆ ಡಿಮ್ಯಾಂಡ್! ಟೊಮೆಟೊ ಬೆಳೆದ ರೈತರಿಗೆ ಜಾಕ್‌ಪಾಟ್
ಆಂಧ್ರದಲ್ಲಿ ಮಾವಿನ ಬೆಲೆ ಕುಸಿದಿರುವ ಬಗ್ಗೆ ಗಮನಹರಿಸಿರುವ ಅಲ್ಲಿನ ಸರ್ಕಾರವು ರೈತರಿಗೆ ಪ್ರತಿ ಕೆಜಿ ಮಾವಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಕರ್ನಾಟಕದಲ್ಲೂ ಮಾವಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೆಂಕುಬುದು ಬೆಳೆಗಾರರ ಒತ್ತಾಯವಾಗಿದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆಯೂ ಸಲ್ಲಿಕೆಯಾಗಿದ್ದು, ಒಂದು ವೇಳೆ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡದೆ ಹೋದಲ್ಲಿ ಸೋಮವಾರ ಕೋಲಾರ ಜಿಲ್ಲಾ ಬಂದ್ ಮಾಡುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.