AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಬಿಟ್ಟು ಕೃಷಿ ಜೀವನ ಆರಂಭ; ಸಾವಯವ ಕೃಷಿಕನ ತೋಟದಲ್ಲಿದೆ ಎರೆಹುಳುವಿನ ತವರು ಮನೆ, ಅಚ್ಚರಿಯಾಗುವಂತಹ ವ್ಯವಸಾಯ

ಸಾವಯವ ಕೃಷಿ ಆರಂಭಿಸಿದ ನಾಗರಾಜ್ ಮೊದಲು ದೇಸಿ ತಳಿಯ ಹಸುಗಳನ್ನು ಸಾಕಾಣೆ ಮಾಡಲು ಆರಂಭಿಸಿದರು, ಅದರಿಂದ ಗಂಜಲ ಮತ್ತು ಸಗಣಿಯಿಂದ ಸಾವಯವ ಜೀವಾಂಮೃತ ತಯಾರು ಮಾಡಿ, ನಂತರ ಎರೆಹುಳು ತೊಟ್ಟಿಗಳನ್ನು ಮಾಡಿ ಅಲ್ಲಿ ಎರೆಹುಳು ಉತ್ಪಾದನೆ ಮಾಡುವ ಮೂಲಕ ಸಾವಯವ ಕೃಷಿ ಆರಂಭಿಸಿದ್ದಾರೆ.

ಕೆಲಸ ಬಿಟ್ಟು ಕೃಷಿ ಜೀವನ ಆರಂಭ; ಸಾವಯವ ಕೃಷಿಕನ ತೋಟದಲ್ಲಿದೆ ಎರೆಹುಳುವಿನ ತವರು ಮನೆ, ಅಚ್ಚರಿಯಾಗುವಂತಹ ವ್ಯವಸಾಯ
ರೈತ ನಾಗರಾಜ್
TV9 Web
| Edited By: |

Updated on: Apr 21, 2022 | 10:00 AM

Share

ಕೋಲಾರ: ಆತ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದವರು ಆದರೆ ಆ ಬದುಕು ತೃಪ್ತಿ ಕೊಡದ ಹಿನ್ನೆಲೆ ಕೃಷಿ ಜೀವನಕ್ಕೆ ಕಾಲಿಟ್ಟು ಇಂದು ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವ ಜೊತೆಗೆ ಸಾವಯವ ಪಂಡಿತರಾಗಿ ತನ್ನ ಕೃಷಿ ಭೂಮಿಯನ್ನೇ ಎರೆಹುಳುವಿನ ತವರು ಮನೆ ಎನ್ನವಂತೆ ಮಾಡಿದ್ದಾರೆ.

ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೃಷಿ ಮಾಡಬೇಕೆಂಬ ಬಯಕೆ ಬಂದಿತ್ತು ಕೋಲಾರ ತಾಲೂಕು ಚಿಟ್ನಹಳ್ಳಿ ಗ್ರಾಮದಲ್ಲಿ ರೈತ ನಾಗರಾಜ್ ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುವ ಮೂಲಕ ಯಶಸ್ವಿ ರೈತರಾಗಿದ್ದಾರೆ. ಮೊದಲು ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕೃಷಿಯಲ್ಲಿ ಆಸಕ್ತರಾಗಿ ಅಲ್ಲೇ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ ಕೆಲವು ವರ್ಷಗಳ ಕಾಲ ರಾಸಾಯನಿಕ ಕೃಷಿ ಮಾಡಲು ಶುರು ಮಾಡಿದರು. ಆದರೆ ರಾಸಾಯನಿಕ ಕೃಷಿಯಿಂದ ಬದುಕು ನಶ್ವರ ಅನ್ನೋದನ್ನ ಅರಿತ ನಾಗರಾಜ್ ಸಾಂಪ್ರದಾಯಿಕ ಹಾಗೂ ರಾಸಾಯನಿಕ ಮುಕ್ತ ಸಾವಯವ ಕೃಷಿ ಆರಂಭಿಸಿದ್ದಾರೆ.

ಸಾವಯವ ಕೃಷಿ ಆರಂಭಿಸಿದ್ದ ನಂತರವೇ ಅವರ ನಿಜವಾದ ಕೃಷಿ ಬದುಕು ಆರಂಭವಾಗಿದ್ದು ಸಾವಯವ ಕೃಷಿ ಆರಂಭಿಸಿದ ನಾಗರಾಜ್ ಮೊದಲು ದೇಸಿ ತಳಿಯ ಹಸುಗಳನ್ನು ಸಾಕಾಣೆ ಮಾಡಲು ಆರಂಭಿಸಿದರು, ಅದರಿಂದ ಗಂಜಲ ಮತ್ತು ಸಗಣಿಯಿಂದ ಸಾವಯವ ಜೀವಾಂಮೃತ ತಯಾರು ಮಾಡಿ, ನಂತರ ಎರೆಹುಳು ತೊಟ್ಟಿಗಳನ್ನು ಮಾಡಿ ಅಲ್ಲಿ ಎರೆಹುಳು ಉತ್ಪಾದನೆ ಮಾಡುವ ಮೂಲಕ ಸಾವಯವ ಕೃಷಿ ಆರಂಭಿಸಿದ್ದಾರೆ. ಇದರಿಂದ ನಾಗರಾಜ್ ಅವರಿಗೆ ಖರ್ಚಿಲ್ಲದೆ, ತಮ್ಮ ಭೂಮಿಯಲ್ಲಿ ರೇಷ್ಮೆ ಸೇರಿದಂತೆ ಹಲವು ಬಗೆಯ ತರಕಾರಿ ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕ ಏಳೆಂಟು ಲಕ್ಷ ಸಂಪಾದನೆ ಮಾಡುವ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದೇನೆ ಅನ್ನೋದು ನಾಗರಾಜ್ ಅವರ ಮಾತು.

ಈ ರೈತನ ಕೃಷಿ ಭೂಮಿಯಲ್ಲಿ ಎರೆಹುಳು ತವರು ಮನೆಯಂತಿದೆ ರೈತ ನಾಗರಾಜ್ ಅವರು ಎಷ್ಟರಮಟ್ಟಿಗೆ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ ಅನ್ನೋದಕ್ಕೆ ಅವರ ಎರಡು ಎಕರೆ ಭೂಮಿಯೇ ನಮಗೆ ಪ್ರಯೋಗಶಾಲೆ. ಯಾಕಂದ್ರೆ ಅವರ ಭೂಮಿಯ ಯಾವುದೇ ಭಾಗದಲ್ಲಿ ನೀವು ಭೂಮಿಯನ್ನು ಅಗೆದರೆ ಅಲ್ಲಿ ಸಮೃದ್ದವಾಗಿ ಎರೆಹುಳುಗಳು ಕಂಡುಬರುತ್ತದೆ, ಅಷ್ಟರ ಮಟ್ಟಿಗೆ ನಾಗರಾಜ್ ಸಾವಯವ ಕೃಷಿಯನ್ನು ಅನುಸರಿಸುತ್ತಿದ್ದಾರೆ. ಇವರ ತೋಟವನ್ನು ನೋಡಿದರಂತೂ ಇದೇನು ಎರೆಹುಳುವಿನ ತವರು ಮನೆನಾ ಎನ್ನುವರಷ್ಟರ ಮಟ್ಟಿಗೆ ಆಶ್ಚರ್ಯವಾಗುತ್ತೆ.

ನಾಗರಾಜ್ ಅವರ ತೋಟಕ್ಕೆ ಹೊರ ಜಿಲ್ಲೆ ಹೊರ ರಾಜ್ಯದ ರೈತರು ಬರ್ತಾರೆ ಇವರ ಸಾವಯವ ಕೃಷಿಯನ್ನು ನೋಡಲು ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ನೂರಾರು ಜನ ರೈತರು ಇಲ್ಲಿಗೆ ಬರುತ್ತಾರೆ. ವಿಷವಿಲ್ಲದ ಆರೋಗ್ಯಕರವಾದ ಕೃಷಿ ಪದ್ದತಿಯನ್ನು ಕಂಡು ಸಂತೋಷ ಪಡುತ್ತಿದ್ದಾರೆ. ಇನ್ನು ಇವರ ಸರಳ ಸಾವಯವ ಕೃಷಿ ವಿಧಾನಗಳನ್ನು ಕಂಡು ಸ್ಥಳೀಯ ರೈತರು ಸಾವಯವ ಕೃಷಿ ಪಂಡಿತ ಎಂದೇ ಕರೆಯುತ್ತಾರೆ. ಅಲ್ಲದೆ ಇವರ ಕೃಷಿ ಪದ್ದತಿಯನ್ನು ಕಂಡು ಜಿಕೆವಿಕೆ, ಕೃಷಿ ವಿಜ್ನಾನ ಕೇಂದ್ರ, ಸೇರಿ ಹಲವು ಸಂಘ ಸಂಸ್ಥೆಗಳು ಇವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ನಾಗರಾಜ್ ಅವರ ಕಾರ್ಯಕ್ಕೆ ಸ್ಥಳೀಯರ ಪ್ರಶಂಸೆ ಕೂಡಾ ಇದೆ.

ಒಟ್ಟಾರೆ ರಾಸಾಯನಿಕ ಮುಕ್ತ ವ್ಯವಸಾಯ, ವಿಷ ಮುಕ್ತ ಆಹಾರ ಎನ್ನುವ ಮೂಲಕ ಸಾವಯವ ಕೃಷಿಯಿಂದ ಬದುಕು ಕಟ್ಟಿಕೊಂಡಿರುವ ನಾಗರಾಜ್ ಪ್ರಸಕ್ತ ಸಮಾಜಕ್ಕೆ ನಿಜಕ್ಕೂ ಮಾದರಿ, ವಿಷಮುಕ್ತ ಆಹಾರ ಆರೋಗ್ಯಕರ ಜೀವನಕ್ಕಾಗಿ ಇಡೀ ವಿಶ್ವವೇ ಹೋರಾಟ ಮಾಡುತ್ತಿರುವಾಗ ನಾಗರಾಜ್ ಅವರ ಕೃಷಿ ಬದುಕು ನಿಜಕ್ಕೂ ಎಲ್ಲರಿಗೂ ಮಾದರಿ ಅನ್ನೋದರಲ್ಲಿ ಎರಡು ಮಾತಿಲ್ಲ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

kolar farmer

ರೈತ ನಾಗರಾಜ್

kolar farmer

ಎರೆಹುಳು

ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಬೆದರಿಸಿ 1 ಕೋಟಿ ರೂಪಾಯಿಗೂ ಹೆಚ್ಚು ಹಣ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್!

Jersy Movie: ‘ಜೆರ್ಸಿ ರಿಲೀಸ್ ಡೇಟ್ ಪಕ್ಕನಾ?’; ನಿರ್ಮಾಪಕರಿಗೆ ದಿನವೂ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಿರುವ ಶಾಹಿದ್ ಕಪೂರ್

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ