Jersy Movie: ‘ಜೆರ್ಸಿ ರಿಲೀಸ್ ಡೇಟ್ ಪಕ್ಕನಾ?’; ನಿರ್ಮಾಪಕರಿಗೆ ದಿನವೂ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಿರುವ ಶಾಹಿದ್ ಕಪೂರ್

Shahid Kapoor: ಏಪ್ರಿಲ್ 22ರಂದು ತೆರೆಕಾಣಲಿರುವ ‘ಜೆರ್ಸಿ’ ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ನಾಯಕ ಶಾಹಿದ್ ಕಪೂರ್, ನಿರ್ಮಾಪಕರಿಗೆ ದಿನವೂ ಕರೆ ಮಾಡಿ ನಿಗದಿತ ದಿನಾಂಕದಂದೇ ಚಿತ್ರ ರಿಲೀಸ್ ಆಗಲಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Jersy Movie: ‘ಜೆರ್ಸಿ ರಿಲೀಸ್ ಡೇಟ್ ಪಕ್ಕನಾ?’; ನಿರ್ಮಾಪಕರಿಗೆ ದಿನವೂ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಿರುವ ಶಾಹಿದ್ ಕಪೂರ್
‘ಜೆರ್ಸಿ’ ಚಿತ್ರದಲ್ಲಿ ಶಾಹಿದ್ ಕಪೂರ್
Follow us
TV9 Web
| Updated By: shivaprasad.hs

Updated on: Apr 21, 2022 | 8:44 AM

ಶಾಹಿದ್ ಕಪೂರ್ (Shahid Kapoor) ನಟನೆಯ ‘ಜೆರ್ಸಿ’ಗೆ (Jersy) ಏಕೋ ಬಿಡುಗಡೆಯ ಮುಹೂರ್ತ ಸರಿಯಾದಂತೆ ಕಾಣುತ್ತಿಲ್ಲ. ಚಿತ್ರಕ್ಕೆ ಮೊದಲಿನಿಂದಲೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಚಿತ್ರವು ಏಪ್ರಿಲ್ 14ರಂದು ತೆರೆಕಾಣಲಿದೆ ಎಂದು ಘೋಷಿಸಲಾಗಿತ್ತು. ಆದರೆ ಕಾನೂನಾತ್ಮಕ ತೊಡಕಿನಿಂದ ಚಿತ್ರದ ರಿಲೀಸ್ ಮುಂದೂಡಲಾಗಿತ್ತು. ಆದರೆ ಬಾಲಿವುಡ್ ವರದಿಗಳ ಪ್ರಕಾರ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಕ್ರೇಜ್ ಗಮನಿಸಿಯೂ ಚಿತ್ರತಂಡ ಕಡೆಯ ಕ್ಷಣದಲ್ಲಿ ಬಿಡುಗಡೆ ಮುಂದೂಡಿತ್ತು. ಅಂತಿಮವಾಗಿ ಒಂದು ವಾರಗಳ ನಂತರ ಅಂದರೆ ಏಪ್ರಿಲ್ 22ರಂದು ‘ಜೆರ್ಸಿ’ ತೆರೆಕಾಣಲಿದೆ ಎಂದು ಘೋಷಿಸಲಾಗಿದೆ. ಆದರೆ ದೇಶದಲ್ಲಿ ಇನ್ನೂ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಜನರು ಮುಗಿಬಿದ್ದು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಪರಿಣಾಮವಾಗಿ ಈಗಾಗಲೇ ಚಿತ್ರವು 250 ಕೋಟಿ ಕ್ಲಬ್ ಸೇರಿದೆ. ಈ ಹಿನ್ನೆಲೆಯಲ್ಲಿ ‘ಜೆರ್ಸಿ’ ಚಿತ್ರತಂಡ ಮತ್ತೆ ಗೊಂದಲದಲ್ಲಿದೆಯಾ ಎಂಬ ಅನುಮಾನ ಮೂಡಿದೆ. ಕಾರಣ, ಈ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಹೇಳಿಕೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಶಾಹಿದ್ ಕಪೂರ್, ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನವೂ ನಿರ್ಮಾಪಕರಿಗೆ ಕರೆಮಾಡುತ್ತೇನೆ ಎಂದಿದ್ದಾರೆ.

‘ಜೆರ್ಸಿ’ ಚಿತ್ರವು ಈ ಮೊದಲು 2021ರ ಡಿಸೆಂಬರ್ 31ರಂದು ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರತಂಡ ಹಿಂದೆ ಸರಿದಿತ್ತು. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14ರಂದು ‘ಕೆಜಿಎಫ್ ಚಾಪ್ಟರ್ 2’ ದಿನವೇ ರಿಲೀಸ್ ಆಗುವುದಾಗಿ ಘೋಷಿಸಿತ್ತು. ಆದರೆ ಆಮಿರ್ ಚಿತ್ರದ ಕೆಲಸಗಳು ಪೂರ್ಣಗೊಳ್ಳದ ಕಾರಣ ರಿಲೀಸ್​ನಿಂದ ಹಿಂದೆ ಸರಿದರು. ಹೀಗಾಗಿ ಆ ಜಾಗದಲ್ಲಿ ‘ಜೆರ್ಸಿ’ ರಿಲೀಸ್ ಆಗುವುದಾಗಿ ಹೇಳಿತ್ತು. ಆದರೆ ಅದೇ ಸಮಯದಲ್ಲಿ ಕಾನೂನಾತ್ಮಕ ತೊಡಕು, ‘ಕೆಜಿಎಫ್ ಚಾಪ್ಟರ್ 2’ ಕಾರಣದಿಂದ ಮತ್ತೆ ಒಂದು ವಾರಗಳ ಕಾಲ ಚಿತ್ರದ ಬಿಡುಗಡೆಯನ್ನು ಮುಂದೂಲಾಗಿತ್ತು.

ಈಗ ‘ಜೆರ್ಸಿ’ ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ನಾಯಕ ಶಾಹಿದ್ ಕಪೂರ್, ನಿರ್ಮಾಪಕರಿಗೆ ದಿನವೂ ಕರೆ ಮಾಡಿ ನಿಗದಿತ ದಿನಾಂಕದಂದೇ ಚಿತ್ರ ರಿಲೀಸ್ ಆಗಲಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘‘ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ. ಜನರು ಮತ್ತೊಂದು ಅವಕಾಶ ನೀಡುತ್ತಾರೆ ಎಂದು ನನಗನ್ನಿಸುವುದಿಲ್ಲ. ಹೀಗಾಗಿ ನಿರ್ಮಾಪಕರಿಗೆ ದಿನವೂ ಕರೆ ಮಾಡಿ ಎಲ್ಲವೂ ಸರಿಯಿದೆಯೇ? ನಿಗದಿತ ದಿನದಂದೇ ಚಿತ್ರ ತೆರೆಕಾಣಲಿದೆಯೇ? ಅಥವಾ ಮತ್ತೆ ಸಿನಿಮಾ ಮುಂದೂಡಲ್ಪಡುತ್ತದೆಯೇ? ಎಂದು ಕೇಳಿ ಬಿಡುಗಡೆಯನ್ನು ಪಕ್ಕಾ ಮಾಡಿಕೊಳ್ಳುತ್ತೇನೆ’’ ಎಂದಿದ್ದಾರೆ ಶಾಹಿದ್.

‘ಜೆರ್ಸಿ’ ಚಿತ್ರ ಬಹಳ ಆಪ್ತವಾದ ಚಿತ್ರ ಎಂದಿರುವ ಶಾಹಿದ್, ಇದುವರೆಗಿನ ಕಾಯುವಿಕೆ ವ್ಯರ್ಥವಾಗುವುದಿಲ್ಲ ಎಂದು ಅಭಿಮಾನಿಗಳಿಗೆ ಭರವಸೆಯನ್ನೂ ನೀಡಿದ್ದಾರೆ. 2019ರಲ್ಲಿ ತೆಲುಗಿನಲ್ಲಿ ತೆರೆಕಂಡಿದ್ದ ಇದೇ ಹೆಸರಿನ ಸಿನಿಮಾದ ರಿಮೇಕ್ ಆಗಿದೆ ಈ ಚಿತ್ರ. ಶಾಹಿದ್​ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಬಾಕ್ಸಾಫೀಸ್​ನಲ್ಲಿ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗಬಹುದು ಎಂಬ ಕುತೂಹಲ ಸದ್ಯ ಚಿತ್ರಪ್ರೇಮಿಗಳದ್ದು.

ಇದನ್ನೂ ಓದಿ: ವಿಮಲ್​ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್​ ಕುಮಾರ್​ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ

ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ‘ದಿ ಡೆಲ್ಲಿ ಫೈಲ್ಸ್​​’ ವಿರೋಧಿಸಿದ ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್; ಕಾರಣವೇನು?

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ