Mulbagal: ಮುಳಬಾಗಿಲು ನಗರಸಭೆ 2ನೇ ವಾರ್ಡ್ ಉಪಚುನಾವಣೆ ಫಲಿತಾಂಶ -ಕಾಂಗ್ರೆಸ್ ಅಭ್ಯರ್ಥಿ ನಿರುಪಮಾಗೆ ಜಯ
Mulbagal Municipal Corporation: ಮುಳಬಾಗಿಲು ನಗರಸಭೆ 2 ನೇ ವಾರ್ಡ್ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆಯಾದ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನಿಂದ ಜಗನ್ ಮೋಹನ್ ರೆಡ್ಡಿ ಪತ್ನಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದರು.
ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ನಗರಸಭೆ 2ನೇ ವಾರ್ಡ್ ಉಪಚುನಾವಣೆ (Town Municipal Council in Mulbagal, Kolar) ಫಲಿತಾಂಶ ಹೊರಬಿದ್ದಿದೆ. ಮುಳಬಾಗಿಲು ನಗರಸಭೆ 2 ನೇ ವಾರ್ಡ್ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆಯಾದ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನಿಂದ (Congress) ಜಗನ್ ಮೋಹನ್ ರೆಡ್ಡಿ ಪತ್ನಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದರು. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ನಿರುಪಮಾಗೆ 14 ಮತಗಳ ಅಂತರದಿಂದ ಜಯ ಪ್ರಾಪ್ತಿಯಾಗಿದೆ. ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮುರಳಿ ವಿರುದ್ಧ ನಿರುಪಮಾಗೆ ಜಯ ದಕ್ಕಿದೆ. ಕಾಂಗ್ರೆಸ್ನ ನಿರುಪಮಾಗೆ 510 ಮತ ಮತ್ತು JDSನ ಮುರಳಿಗೆ 496 ಮತ ಸಿಕ್ಕಿದೆ. ಜಗನ್ ಮೋಹನ್ ರೆಡ್ಡಿ ಹತ್ಯೆ ಹಿನ್ನೆಲೆಯಲ್ಲಿ ಬೈಎಲೆಕ್ಷನ್ ನಡೆದಿತ್ತು. ಮತದಾರರು ದಿವಂಗತ ಜಗನ್ ಮೋಹನ್ ರೆಡ್ಡಿ ಪತ್ನಿ ನಿರುಪಮಾ ಕೈಹಿಡಿದಿದ್ದಾರೆ.
ಇದಲ್ಲೂ ಓದಿ:
ನಗರಸಭೆ ಸದಸ್ಯನ ಕೊಲೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ, ಹಂತಕ ಆರೋಪಿಯ ಪತ್ನಿಯೂ ಕಣದಲ್ಲಿ
ಮುಳಬಾಗಿಲು ನಗರಸಭೆ 2 ನೇ ವಾರ್ಡ್ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆಯಾದ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನಿಂದ ಜಗನ್ ಮೋಹನ್ ರೆಡ್ಡಿ ಪತ್ನಿ ಗೆಲುವು ಸಾಧಿಸಿದ್ದಾರೆ.
Published On - 11:05 am, Mon, 31 October 22