ಐಎಎಸ್ ಅಧಿಕಾರಿ ರವಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ, ಮರು ತನಿಖೆ ಮಾಡಬೇಕು: ಡಿ.ಕೆ.ರವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಆಗ್ರಹ
ತನ್ನ ಸೌಂದರ್ಯದಿಂದ ಒಬ್ಬ ಬಡ ಕುಟುಂಬದಲ್ಲಿ ಬೆಳೆದು ಬಂದ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಸಾವಿಗೆ ರೋಹಿಣಿಯೇ ಕಾರಣರಾಗಿದ್ದಾರೆ ಎಂದು ಮುರಳಿ ಗೌಡ ಆರೋಪ ಮಾಡಿದ್ದಾರೆ.
ಕೋಲಾರ: ಸೋಶಿಯಲ್ ಮಿಡಿಯಾದ ಮೂಲಕ ನಡೆಯುತ್ತಿರುವ IAS, IPS ಅಧಿಕಾರಿಗಳಿಬ್ಬರ ನಡುವಿನ ವೈಯಕ್ತಿಕ ಜಗಳ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸದ್ಯದ ಈ ಹಾಟ್ ನ್ಯೂಸ್ ಗಳಿಗೆಗೊಂದು ತಿರುವುಪಡೆದುಕೊಳ್ಳುತ್ತಿದೆ. IPS ಅಧಿಕಾರಿ ಡಿ.ರೂಪಾ(D Roopa), IAS ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ಕಿತ್ತಾಟ ವಿಚಾರ ಸಂಬಂಧ ಡಿ.ಕೆ.ರವಿ(DK Ravi) ಅಭಿಮಾನಿಗಳ ಸಂಘದ ಅಧ್ಯಕ್ಷ ಮುರಳಿಗೌಡ(Murali Gowda) ಪ್ರತಿಕ್ರಿಯೆ ನೀಡಿದ್ದು ‘ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಮುರಳಿಗೌಡ ಅವರು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ‘ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ’ ರೋಹಿಣಿ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿ ಕೇಸ್ ದಾಖಲಿಸಬೇಕು. ತನ್ನ ಸೌಂದರ್ಯದಿಂದ ಒಬ್ಬ ಬಡ ಕುಟುಂಬದಲ್ಲಿ ಬೆಳೆದು ಬಂದ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಸಾವಿಗೆ ರೋಹಿಣಿಯೇ ಕಾರಣರಾಗಿದ್ದಾರೆ. ಡಿ.ಕೆ.ರವಿ ಮೇಲೆ ಪ್ರೀತಿ ಪ್ರೇಮ ಎಂದಾಗ ಬುದ್ಧಿ ಹೇಳಬಹುದಿತ್ತು. ತನ್ನ ಸ್ನೇಹಿತರಿಗೆ ಬುದ್ಧಿ ಹೇಳಿ ಡಿ.ಕೆ.ರವಿ ಸಾವು ತಡೆಯಬಹುದಿತ್ತು. ಡಿ.ಕೆ.ರವಿ ಸಾವಿನ ಪ್ರಕರಣ ಮರು ತನಿಖೆ ಮಾಡುವಂತೆ ಡಿ.ಕೆ.ರವಿ ಅಭಿಮಾನಿಗಳ ಸಂಘದ ಅಧ್ಯಕ್ಷ ಮುರಳಿಗೌಡ ಆಗ್ರಹಿಸಿದ್ದಾರೆ.
ಇದನ್ನೂ ಓದಿ: IAS Vs IPS | ಅಸಲಿಗೆ ನನ್ನ ಪತ್ನಿಯ ವಿಷಯದಲ್ಲಿ ಮಾತಾಡಲು ಡಿ ರೂಪಾ ಯಾರು? ಸುಧೀರ್ ರೆಡ್ಡಿ, ರೋಹಿಣಿ ಸಿಂಧೂರಿ ಪತಿ
ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ರೋಹಿಣಿ ಸಿಂಧೂರಿ ವಿರುದ್ಧ ಸಿ.ಸಿ.ಪಾಟೀಲ್ ಗರಂ
ಇನ್ನು ಮತ್ತೊಂದೆಡೆ ಈ ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ರೋಹಿಣಿ ಸಿಂಧೂರಿ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ಗರಂ ಆಗಿದ್ದಾರೆ. ವಿಧಾನಸೌಧದ ಕೆಂಗಲ್ ಗೇಟ್ನಲ್ಲಿ ರೋಹಿಣಿ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಸಚಿವರು ಅಲ್ಲಿ ನಿಂತಿದ್ದ ಪೊಲೀಸರನ್ನು ನೋಡುತ್ತ ಏನ್ರಿ ಇದು ರಬ್ಬಿಶ್, ಯೂಸ್ಲೆಸ್ ಎಂದು ಬೈಯ್ದು ತೆರಳಿದ್ದಾರೆ.
ಕಿತ್ತಾಟ ಹೀಗೆ ಮುಂದುವರಿದರೆ ಕ್ರಮ ಜರುಗಿಸುತ್ತೇವೆ -ಸಚಿವ ಮಾಧುಸ್ವಾಮಿ
ಅಧಿಕಾರಿಗಳ ಕಿತ್ತಾಟ ಹೀಗೆ ಮುಂದುವರಿದರೆ ಕ್ರಮ ಜರುಗಿಸುತ್ತೇವೆ. ಅವರ ವೈಯಕ್ತಿಕ ವಿಚಾರ ಅಂತ ನಾವು ಸುಮ್ಮನಿದ್ದೆವು. ಈ ವಿಚಾರ ವಿಧಾನಸೌಧದವರೆಗೂ ಬಂದಿದೆ ಅಂದ್ರ ಸುಮ್ಮನಿರಲ್ಲ. ಸಿಎಂ ಬೊಮ್ಮಾಯಿ ಜೊತೆ ಈ ಬಗ್ಗೆ ಚರ್ಚೆ ಮಾಡಿ ಕಾನೂನಿನಡಿ ಏನೆಲ್ಲ ಕ್ರಮಕೈಗೊಳ್ಳಬೇಕೆಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:59 pm, Mon, 20 February 23