ಸಿದ್ದರಾಮಯ್ಯ ಜನಸ್ಪಂದನ ಇಂಪ್ಯಾಕ್ಟ್: ಕೋಲಾರ ವ್ಯಕ್ತಿಯ 10 ವರ್ಷಗಳ ಹಿಂದಿನ ಸಮಸ್ಯೆಗೆ ಸಿಕ್ತು ಮುಕ್ತಿ
ವಿಧಾನಸೌಧ ಆವರಣದಲ್ಲಿ ನಿನ್ನೆ ಏರ್ಪಡಿಸಿದ್ದ ಸಿಎಂ ಜನಸ್ಪಂದನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬಂತಹಳ್ಳಿ ಗ್ರಾಮದ ನಾರಾಯಣಸ್ವಾಮಿ ಅವರ ಸಮಸ್ಯೆ ಬಗೆಹರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೋಲಾರ, ಫೆ.09: ನಿನ್ನೆ(ಫೆ.08) ವಿಧಾನಸೌಧ ಆವರಣದಲ್ಲಿ ಸಿಎಂ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬಂತಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವವರು ಸಮಸ್ಯೆ ಬಗೆಹರಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
10 ವರ್ಷಗಳ ಹಿಂದಿನ ಸಮಸ್ಯೆಗೆ ಸಿಕ್ತು ಮುಕ್ತಿ
ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬಂಟಹಳ್ಳಿ ನಿವಾಸಿ ಸುಮಾರು 50 ವರ್ಷದ ನಾರಾಯಣಸ್ವಾಮಿ ಅವರ ಖಾತೆ ಬದಲಾವಣೆ ಮಾಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಲಾಗಿತ್ತು. ಅದರಂತೆ ಅವರ ಹತ್ತು ವರ್ಷದ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಮಾಲೂರು ತಹಶೀಲ್ದಾರ್, ‘ಅವರ ಎರಡು ಖಾತೆ ಸಮಸ್ಯೆಯಲ್ಲಿ ಸರಿಯಾದ ದಾಖಲೆ ಇದ್ದ ಒಂದು ಸಮಸ್ಯೆಯನ್ನ ಇತ್ಯರ್ಥಗೊಳಿಸಿದ್ದೇವೆ. ಆದ್ರೆ, ಮತ್ತೊಂದು ಪ್ರಕರಣ ಇದ್ದು, ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಮಾಡಲಾಗುವುದು ಎನ್ನುತ್ತಾರೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬಂತಹಳ್ಳಿ ಗ್ರಾಮದ 50 ವರ್ಷದ ನಾರಾಯಣಸ್ವಾಮಿ ಅವರ ಖಾತೆ ಬದಲಾವಣೆ ಮಾಡಲಾಗಿದ್ದು, ಸರಿಪಡಿಸಿಕೊಡುವಂತೆ ಇಂದಿನ ಜನಸ್ಪಂದನದಲ್ಲಿ ನನ್ನನ್ನು ಕೋರಿದರು.
ಮನವಿ ಸ್ವೀಕರಿಸಿ, ಪ್ರಕರಣದ ಕುರಿತು ಪರಿಶೀಲಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದು, ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಿಕೊಡಲಾಗುವುದು.… pic.twitter.com/XOKkl5ek2h
— Siddaramaiah (@siddaramaiah) February 8, 2024
ಇದನ್ನೂ ಓದಿ:ಸಿಎಂ 2ನೇ ಜನಸ್ಪಂದನಕ್ಕೆ ಬಂದ ಅರ್ಜಿಗಳು ಎಷ್ಟು? ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು..!
ಇನ್ನು ರೈತ ನಾರಾಯಣಸ್ವಾಮಿ ಮಾತನಾಡಿ, ‘ಖಾತೆ ಬದಲಾವಣೆ ಸಮಸ್ಯೆ ಅಂದರೆ, ಬಂಟಹಳ್ಳಿ ಗ್ರಾಮದ ಸರ್ವೇ ನಂ-277 ಪೌವತಿ ಖಾತೆ ಮಾಡಿಕೊಡಲು ಹಲವು ಬಾರಿ ಮನವಿ ಮಾಡಿದ್ದೇ. ಆದ್ರೆ, 10 ವರ್ಷಗಳಿಂದ ನನ್ನ ಹೆಸರಿನಲ್ಲಿದ್ದ ಖಾತೆಯನ್ನ ಬೇರೆಯವರು ಹೊಡೆಯಲು ಯತ್ನಿಸಿದ್ದರು. ಅದರಂತೆ ನನ್ನ ಹೆಸರಿನಲ್ಲಿದ್ದ ಒಂದು ಎಕರೆ ಮೂವತ್ತೆರೆಡು ಗುಂಟೆ ಜಮೀನು, ಎಸಿ ಕಚೇರಿಯ ನ್ಯಾಯಾಲಯದಲ್ಲಿದ್ದು, ನನಗೆ ಅನ್ಯಾಯವಾಗಿದೆ ಎಂದು ಮನವಿ ಮಾಡಲಾಗಿತ್ತು. ವೆಂಕಟೇಶಪ್ಪ ಎನ್ನುವವರಿಗೆ ಖಾತೆ ಮಾಡಿ ನನಗೆ ಅನ್ಯಾಯ ಮಾಡಿದ್ದರು. ಈ ಹಿನ್ನಲೆ ಸಮಸ್ಯೆಯನ್ನು ಆದಷ್ಟು ಬೇಗ ಬಗೆ ಹರಿಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Fri, 9 February 24