ಕೋಲಾರ ಮಹಿಳಾ ಪಿಎಸ್​ಐ ಭಾರತಿ ಹೈದರಾಬಾದ್​ನಲ್ಲಿ ಅಗ್ರ ಸಾಧನೆ

ಎಸ್‌ಡಿಟಿಇ ತರಬೇತಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕೋಲಾರ ಜಿಲ್ಲೆಯ ಕೋಲಾರ ಗ್ರಾಮಾಂತರ ಠಾಣೆಯ ಮಹಿಳಾ ಪಿಎಸ್‌ಐ ಭಾರತಿ ಅವರು ಅಗ್ರ ಸಾಧನೆ ಮಾಡಿದ್ದಾರೆ. ಗ್ರಾಮಾಂತರ ಠಾಣೆಯ ಪಿಎಸ್‌ಐ ಭಾರತಿ ಅವರ ಈ ಸಾಧನೆಗೆ ಕೇಂದ್ರ ವಲಯದ ಐಜಿಪಿ ರವಿಕಾಂತೇ ಗೌಡ ಸೇರಿದಂತೆ ಕೋಲಾರ ಎಸ್ಪಿ ಎಂ. ನಾರಾಯಣ್​ ಅವರು ಅಭಿನಂದಿಸಿದ್ದಾರೆ.

ಕೋಲಾರ ಮಹಿಳಾ ಪಿಎಸ್​ಐ ಭಾರತಿ ಹೈದರಾಬಾದ್​ನಲ್ಲಿ ಅಗ್ರ ಸಾಧನೆ
ಕೋಲಾರ ಮಹಿಳಾ ಪಿಎಸ್​ಐ ಭಾರತಿ ಅಗ್ರ ಸಾಧನೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Jan 02, 2024 | 5:14 PM

ಕೋಲಾರ ಪೊಲೀಸರು  (Kolar Police) ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಎಸ್‌ಡಿಟಿಇ ತರಬೇತಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕೋಲಾರ ಜಿಲ್ಲೆಯ ಕೋಲಾರ ಗ್ರಾಮಾಂತರ ಠಾಣೆಯ ಮಹಿಳಾ ಪಿಎಸ್‌ಐ ಭಾರತಿ ಅವರು ಸಾಧನೆ ಮಾಡಿದ್ದಾರೆ. ಕೇಂದ್ರದ ಗೃಹ ಇಲಾಖೆ ಆಯೋಜನೆ ಮಾಡಿದ್ದ ಎಸ್​ಡಿಟಿಇ ತರಬೇತಿಯಲ್ಲಿ ಕೋಲಾರ ಗ್ರಾಮಾಂತರ ಠಾಣೆಯ ಮಹಿಳಾ ಪಿಎಸ್ಐ ಅಗಿರುವ ಭಾರತಿ ಮೂರನೆ ಸ್ಥಾನ ಪಡೆಯುವ ಮೂಲಕ ರಾಜ್ಯ ಕೀರ್ತಿಯನ್ನ ಎತ್ತಿಹಿಡಿದಿದ್ದಾರೆ.

ಇತ್ತೀಚೆಗೆ ಹೈದರಾಬಾದ್​ನ ಸೆಂಟ್ರಲ್ ಡಿಟೆಕ್ಟಿವ್ ಟ್ರೈನಿಂಗ್ ಇನ್ಸ್​ಟ್ಯೂಟ್​ ನಲ್ಲಿ ನಡೆದ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ಭಾರತಿ ಅವರು 3ನೇ ಸ್ಥಾನವನ್ನು ಗಳಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ಭಾರತಿ, ರಾಜ್ಯ ಹಾಗೂ ಜಿಲ್ಲಾ ಪೊಲೀಸ್ ಪರವಾಗಿ ಭಾಗವಹಿಸಿದ್ದರು. ಸೈಬರ್ ಕೋರ್ಸ್ ಹಾಗೂ ಅಡ್ವಾನ್ಸ್ಡ್ ಟೆಕ್ನಾಲಜಿ ಬಗ್ಗೆ 10 ವಾರಗಳ ಕಾಲ ನಡೆದ 12 ಮಾಡೆಲ್ ಕೋರ್ಸ್ ಗಳ ತರಬೇತಿ ಇದಾಗಿತ್ತು.

ಇದನ್ನೂ ಓದಿ: ಫ್ಲೈಟ್ ಟಿಕೆಟ್​ ಕೊಟ್ಟ ಸುಳಿವು! ಹೆಂಡತಿ ಮಾತು ಕೇಳಿ ಕರ್ನಾಟಕಕ್ಕೆ ಬಂದವನು ಸ್ನೇಹಿತನಿಂದಲೇ ಕೊಲೆಯಾಗಿದ್ದ

ಇನ್ನು ಮೊದಲ ಬಹುಮಾನವನ್ನು ಕೇರಳದ ಇನ್ಸ್‌ಪೆಕ್ಟರ್ ಶ್ರೀಜಿಶ್, ಎರಡನೇ ಬಹುಮಾನವನ್ನು ತಮಿಳುನಾಡಿನ ಪಿಎಸ್‌ಐ ಸತೀಶ್ ಕುಮಾರ್ ಪಡೆದುಕೊಂಡಿದ್ದಾರೆ. ರಾಜ್ಯದ ಪರವಾಗಿ ತರಬೇತಿಗೆ ತೆರಳಿದ್ದ ಭಾರತಿ ಅವರು 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದ ಬಹುಮಾನವಾಗಿ ಭಾರತಿ ಅವರಿಗೆ ನಗದು ಹಣ ಹಾಗೂ ಹೈಟೆಕ್ ಡಿಟೆಕ್ಟಿವ್ ಕಿಟ್ ನೀಡಲಾಗಿದೆ.

ಗ್ರಾಮಾಂತರ ಠಾಣೆಯ ಪಿಎಸ್‌ಐ ಭಾರತಿ ಅವರ ಈ ಸಾಧನೆಗೆ ಕೇಂದ್ರ ವಲಯದ ಐಜಿಪಿ ರವಿಕಾಂತೇ ಗೌಡ ಸೇರಿದಂತೆ ಕೋಲಾರ ಎಸ್ಪಿ ಎಂ. ನಾರಾಯಣ್​ ಅವರು ಅಭಿನಂದಿಸಿದ್ದಾರೆ.

 ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ