AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯೂ ಇಲ್ಲ, ಕೆಲ್ಸವೂ ಸಿಗ್ತಿಲ್ಲ: ಕೊಲ್ಕತ್ತಾ ಯುವತಿ ಕಂಗಾಲು! ಯಾಕೆ ಗೊತ್ತಾ?

ಬೆಂಗಳೂರು: ಲವ್ ಬ್ರೇಕಪ್ ಆಗಿದ್ದಕ್ಕೆ ಮಾಜಿ ಪ್ರಿಯಕರ ಪ್ರೀತಿಸಿದ ಯುವತಿಗೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಕಳೆದ ಎರಡು ವರ್ಷಗಳಿಂದ ರೆಸ್ಟೊರೆಂಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಲ್ಕತ್ತಾ ಮೂಲದ ಯುವತಿ ಸದ್ಯ ಬೆಂಗಳೂರಿನಲ್ಲಿ ಬಂದು ಕಾರ್ಯ ನಿರ್ವಹಿಸುತ್ತಿದ್ದರು. ಈ ಮೇಳೆ ಕಾರಣಾಂತರಗಳಿಂದ ಪ್ರಿಯಕರನ ಜೊತೆ ಬ್ರೇಕಪ್ ಆಗಿದೆ. ಹೀಗಾಗಿ ಆರೋಪಿ ಸಂತ್ರಸ್ಥ ಯುವತಿಯ ಅಶ್ಲೀಲ ಫೋಟೋಗಳನ್ನ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಫೇಸ್​ಬುಕ್​ ಪ್ರೀತಿಗೆ ಜೀವನ ಹಾಳು: ಸಂತ್ರಸ್ಥ ಯುವತಿ ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಫೇಸ್​ಬುಕ್ ಮೂಲಕ ಸ್ಟಾಲೋನ್ ವುಡ್ ಎಂಬಾ ಯುವಕನ […]

ಮದ್ವೆಯೂ ಇಲ್ಲ, ಕೆಲ್ಸವೂ ಸಿಗ್ತಿಲ್ಲ: ಕೊಲ್ಕತ್ತಾ ಯುವತಿ ಕಂಗಾಲು! ಯಾಕೆ ಗೊತ್ತಾ?
ಸಾಧು ಶ್ರೀನಾಥ್​
|

Updated on:Jan 28, 2020 | 12:38 PM

Share

ಬೆಂಗಳೂರು: ಲವ್ ಬ್ರೇಕಪ್ ಆಗಿದ್ದಕ್ಕೆ ಮಾಜಿ ಪ್ರಿಯಕರ ಪ್ರೀತಿಸಿದ ಯುವತಿಗೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಕಳೆದ ಎರಡು ವರ್ಷಗಳಿಂದ ರೆಸ್ಟೊರೆಂಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಲ್ಕತ್ತಾ ಮೂಲದ ಯುವತಿ ಸದ್ಯ ಬೆಂಗಳೂರಿನಲ್ಲಿ ಬಂದು ಕಾರ್ಯ ನಿರ್ವಹಿಸುತ್ತಿದ್ದರು. ಈ ಮೇಳೆ ಕಾರಣಾಂತರಗಳಿಂದ ಪ್ರಿಯಕರನ ಜೊತೆ ಬ್ರೇಕಪ್ ಆಗಿದೆ. ಹೀಗಾಗಿ ಆರೋಪಿ ಸಂತ್ರಸ್ಥ ಯುವತಿಯ ಅಶ್ಲೀಲ ಫೋಟೋಗಳನ್ನ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ.

ಫೇಸ್​ಬುಕ್​ ಪ್ರೀತಿಗೆ ಜೀವನ ಹಾಳು: ಸಂತ್ರಸ್ಥ ಯುವತಿ ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಫೇಸ್​ಬುಕ್ ಮೂಲಕ ಸ್ಟಾಲೋನ್ ವುಡ್ ಎಂಬಾ ಯುವಕನ ಪರಿಚಯವಾಗುತ್ತೆ. ನಂತರ ಆ ಪರಿಚಯ ಇಬ್ಬರ ನಡುವೆ ಪ್ರೇಮವಾಗುವಂತೆ ಮಾಡುತ್ತೆ. ಕೆಲ ದಿನಗಳ ಕಾಲ ಇಬ್ಬರು ಪ್ರೇಮ ಪಕ್ಷಿಗಳಾಗಿ ಕೊಲ್ಕತ್ತಾದಲ್ಲಿ ಹಾರಾಡಿದ್ದಾರೆ. ಆದರೆ ಇತ್ತೀಚೆಗೆ ಸಂತ್ರಸ್ಥ ಯುವತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಆರೋಪಿಯ ಜೊತೆ ಜಗಳವಾಗಿ ಲವ್ ಬ್ರೇಕಪ್ ಆಗಿದೆ. ಹೀಗಾಗಿ ಕೊಲ್ಕತ್ತಾದಲ್ಲಿ ಇಬ್ಬರು ಜೊತೆಯಲ್ಲಿ ತೆಗೆಸಿಕೊಂಡ ಫೋಟೋಗಳು, ಯುವತಿಯ ಅಶ್ಲೀಲ ಫೋಟೋಗಳು, ಖಾಸಗಿ ಫೋಟೋಗಳನ್ನ ಇಟ್ಟಿಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದಾನೆ. ಅಲ್ಲದೆ ತನ್ನ ಇಬ್ಬರು ಸ್ನೇಹಿತರಿಗೆ ಯುವತಿಯ ಫೋಟೋ ಶೇರ್ ಮಾಡಿದ್ದಾನೆ.

ಫೋಟೋಯಿಂದ ಮುರಿದು ಬಿತ್ತು ಮದುವೆ: ಸಂತ್ರಸ್ಥ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಇದನ್ನು ತಿಳಿದ ಆರೋಪಿ ಸ್ಟಾಲೋನ್ ಹಾಗೂ ಆತನ ಗೆಳೆಯ ಇಕ್ಬಾಲ್ ಸಂತ್ರಸ್ಥ ಯುವತಿಯ ಅಶ್ಲೀಲ ಫೋಟೋವನ್ನು ಮದುವೆ ನಿಶ್ಚಯವಾಗಿದ್ದ ಮದುವೆ ಗಂಡಿಗೆ ಶೇರ್ ಮಾಡಿದ್ದಾರೆ. ಸದ್ಯ ಮದುವೆಯೂ ಇಲ್ಲದೇ, ಬೆಂಗಳೂರಲ್ಲಿ ಕೆಲಸವೂ ಸಿಗದೇ ಯುವತಿ ಕಂಗಾಲಾಗಿದ್ದಾಳೆ. ನೊಂದ ಯುವತಿಯಿಂದ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published On - 5:28 pm, Mon, 27 January 20

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ